alex Certify ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳ ಬಗ್ಗೆ ಹೇಳುವ ಈ ಮಾತುಗಳು ನಿಜವಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಕೆಲವು ವಿಷಯಗಳ ಬಗ್ಗೆ ಹೇಳುವ ಈ ಮಾತುಗಳು ನಿಜವಲ್ಲ

ಮಹಿಳೆಯರು ಗರ್ಭಾವಸ್ಥೆಯ ವೇಳೆ ಅವರು ತಮ್ಮ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಆದರೆ, ಕೆಲವರು ಗರ್ಭಾವಸ್ಥೆಯ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಆದರೆ ಅದು ಸತ್ಯವೇ? ಸುಳ್ಳೆ?ಎಂಬುದನ್ನು ತಿಳಿದುಕೊಳ್ಳಿ.

*ಗರ್ಭಾವಸ್ಥೆಯಲ್ಲಿ ಕೂದಲಿಗೆ ಬಣ್ಣ ಹಚ್ಚುವುದರಿಂದ ಅದರಲ್ಲಿರುವ ಜೀವಾಣುಗಳು ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಆದರೆ ಅದು ಸುಳ್ಳು. ಯಾಕೆಂದರೆ ಕೂದಲಿನ ಬಣ್ಣದಲ್ಲಿರುವ ಜೀವಾಣುಗಳು ತುಂಬಾ ಪರಿಣಾಮಕಾರಿಯಾಗಿರುವುದಿಲ್ಲವಂತೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಕೂದಲಿಗೆ ಬಣ್ಣ ಹಚ್ಚಬಹುದು.

*ಗರ್ಭಿಣಿರಿಗೆ ಮಗು ಮತ್ತು ತಾಯಿಯ ಇಬ್ಬರಿರುವುದರಿಂದ ಆಹಾರಗಳನ್ನು ಇಬ್ಬರಿಗೆ ಸರಿ ಹೊಂದುವಂತೆ ತಿನ್ನಬೇಕೆಂದು ಹೇಳುತ್ತಾರೆ. ಆದರೆ ಅದು ನಿಜವಲ್ಲ. ನಿಮಗೆ ಎಷ್ಟು ಬೇಕು ಅಷ್ಟು ಮಾತ್ರ ಸೇವಿಸಿ. ಅತಿಯಾಗಿ ಸೇವಿಸಿದರೆ ಜಿರ್ಣಕ್ರಿಯೆಯಲ್ಲಿ ತೊಂದರೆಯಾಗಬಹುದು.

*ಗರ್ಭಿಣಿಯರು ದೈಹಿಕ ವ್ಯಾಯಾಮಗಳಿಂದ ದೂರವಿರಬೇಕು ಎಂದು ಹೇಳುತ್ತಾರೆ. ಆದರೆ ಇದು ನಿಜವಲ್ಲ. ತಜ್ಞರ ಪ್ರಕಾರ ಯೋಗ, ವ್ಯಾಯಾಮ, ಹಿಗ್ಗಿಸುವಿಕೆ ಮುಂತಾದ ದೈಹಿಕ ಸಾಮರ್ಥ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಬೊಜ್ಜು, ನಿಯಂತ್ರಣದಲ್ಲಿಡಬಹುದು. ಮಗುವಿನ ಬುದ್ಧಿ ತೀಕ್ಷ್ಣವಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...