ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಗುವ ಮೊದಲೇ ಅನೇಕ ದೇಶೀಯ ಕಂಪನಿಗಳು ತಮ್ಮ ವಹಿವಾಟನ್ನು ಆರಂಭಿಸಿದ್ದವು. ಇವುಗಳಲ್ಲಿ ಹಲವು ಕಂಪನಿಗಳು ಈಗಲೂ ಸಹ ಜನಪ್ರಿಯವಾಗಿವೆ. ಆ ಕಂಪನಿಗಳ ಉತ್ಪನ್ನಗಳು ಈಗಲೂ ಜನಸಾಮಾನ್ಯರ ಫೇವರಿಟ್.
ಬೋರೋಲಿನ್ – ಬೊರೊಲಿನ್ ತನ್ನ ವಹಿವಾಟು ಆರಂಭಿಸಿ 94 ವರ್ಷಗಳೇ ಕಳೆದಿವೆ. ಸ್ಪರ್ಧಾತ್ಮಕ ಸೌಂದರ್ಯವರ್ಧಕ ಉತ್ಪನ್ನಗಳ ಪೈಕಿ ಬೊರೋಲಿನ್ ಈಗಲೂ ಮುಂಚೂಣಿಯಲ್ಲಿದೆ. ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ಬೊರೊಲಿನ್ ಅನ್ನು ಕೋಲ್ಕತ್ತಾ ಮೂಲದ GD ಫಾರ್ಮಾಸ್ಯುಟಿಕಲ್ಸ್ ತಯಾರಿಸುತ್ತದೆ. ಈ ಉತ್ಪನ್ನವನ್ನು ಸ್ವಾತಂತ್ರ್ಯಕ್ಕೂ ಮೊದಲೇ ಮಾರುಕಟ್ಟೆಗೆ ತರಲಾಗಿತ್ತು.
ರೂಹ್ ಅಫ್ಜಾ – ಇದು ಕೂಡ ಸ್ವಾತಂತ್ರ್ಯಪೂರ್ವದಲ್ಲೇ ಅಸ್ತಿತ್ವದಲ್ಲಿದ್ದ ಬ್ರಾಂಡ್. ಶಾಖದಿಂದ ಪರಿಹಾರ ಪಡೆಯಲೆಂದೇ ತಯಾರಿಸಲಾದ ಗಿಡಮೂಲಿಕೆಗಳ ಮಿಶ್ರಣ. ನಂತರ ಪ್ರಮುಖ ಉತ್ಪನ್ನವಾಗಿ ಹೆಸರುವಾಸಿಯಾಗಿದೆ. ರೂಹ್ ಅಫ್ಜಾವನ್ನು 1907 ರಲ್ಲಿ ಹಕೀಮ್ ಹಫೀಜ್ ಅಬ್ದುಲ್ ಮಜೀದ್ ಅವರು ಪ್ರಾರಂಭಿಸಿದರು.
ಮೈಸೂರು ಸ್ಯಾಂಡಲ್ ಸೋಪ್ – ಅನೇಕ ಸಾಬೂನಿನ ಬ್ರ್ಯಾಂಡ್‌ಗಳು ಸ್ವಾತಂತ್ರ್ಯಪೂರ್ವದಲ್ಲೇ ಹುಟ್ಟಿಕೊಂಡಿವೆ. ಅವುಗಳಲ್ಲಿ ಮೈಸೂರು ಸ್ಯಾಂಡಲ್ ಸೋಪು ಕೂಡ ಒಂದು. 1916 ರಲ್ಲಿ ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಬೆಂಗಳೂರಿನಲ್ಲಿ ಸರ್ಕಾರಿ ಸಾಬೂನು ಕಾರ್ಖಾನೆಯನ್ನು ಸ್ಥಾಪಿಸಿದರು. ಆಗಿನಿಂದಲೂ ಮೈಸೂರ್ ಸ್ಯಾಂಡಲ್ ಸೋಪ್ ಅಸ್ತಿತ್ವದಲ್ಲಿದೆ.
ಪಾರ್ಲೆ ಜಿ – ಮಕ್ಕಳ ನೆಚ್ಚಿನ ಬಿಸ್ಕೆಟ್ ಪಾರ್ಲೆಜಿ. ಇಂದಿಗೂ ಇದನ್ನು ಸಾಕಷ್ಟು ಜನರು ಬಳಸುತ್ತಾರೆ. ಪಾರ್ಲೆ ಹೌಸ್ ಅನ್ನು 1928 ರಲ್ಲಿ ಮೋಹನ್ ಲಾಲ್ ದಯಾಳ್ ಸ್ಥಾಪಿಸಿದರು. 1939 ರಿಂದಲೂ ಪಾರ್ಲೆ-ಜಿ ಬಿಸ್ಕತ್ತುಗಳನ್ನು ತಯಾರಿಸಲಾಗುತ್ತಿದೆ.