ಸೂರ್ಯನ ಕಿರಣಗಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಚರ್ಮದ ಸಮಸ್ಯೆ ಉಂಟಾಗುತ್ತದೆ. ಹಾಗೇ ವಾತಾವರಣದ ಮಾಲಿನ್ಯಗಳಿಂದ ಕೂಡ ಚರ್ಮದ ಸಮಸ್ಯೆ ಉಂಟಾಗುತ್ತದೆ. ಸಂಶೋಧನೆಗಳ ಪ್ರಕಾರ ಚರ್ಮದ ಮೇಲೆ ವಾಯುಮಾಲಿನ್ಯದಿಂದಾಗುವ ಪರಿಣಾಮಗಳು ಕೆಲವು ಸಮಸ್ಯೆಗಳ ಮೂಲಕ ಸ್ಪಷ್ಟವಾಗಿ ಗೋಚರಿಸುತ್ತದೆ. ಅದು ಯಾವುದೆಂಬುದನ್ನು ತಿಳಿದುಕೊಳ್ಳಿ.
* ಒರಟು ಚರ್ಮ ಅನುವಂಶಿಕವಾಗಿ, ನಿರ್ಜಲೀಕರಣದಿಂದ ಉಂಟಾಗುತ್ತದೆ. ಅಷ್ಟೇ ಅಲ್ಲದೇ ವಾತಾವರಣದ ಕಲುಷಿತ ಗಾಳಿ ಚರ್ಮದ ತೇವಾಂಶವನ್ನು ಹೀರಿಕೊಳ್ಳುವುದರಿಂದ ಕೂಡ ಒರಟು ಚರ್ಮದ ಸಮಸ್ಯೆ ಕಾಡುತ್ತದೆ.
* ವಿವಿಧ ಕೈಗಾರಿಕೆಗಳ ಮಾಲಿನ್ಯಕಾರಕ ಗಾಳಿ ನಮ್ಮ ಉಸಿರಾಟದ ಮೂಲಕ ರಕ್ತವನ್ನು ಸೇರುತ್ತದೆ. ಆ ಮೂಲಕ ನಮ್ಮ ಮುಖದಲ್ಲಿ ಮೊಡವೆಗಳು ಮೂಡುತ್ತವೆ.
* ಕಲುಷಿತ ಗಾಳಿ ನಮ್ಮ ಚರ್ಮದ ಆಕ್ಸಿಜನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೊಸ ಚರ್ಮದ ರಚನೆಗೆ ಕಾರಣವಾಗುವ ಪ್ರೋಟೀನ್ ಗಳ ಉತ್ಪಾದನೆಯಲ್ಲಿ ಕೊರತೆಯಾಗುತ್ತದೆ. ಇದರಿಂದ ಚರ್ಮದಲ್ಲಿ ವಯಸ್ಸಾದ ಚಿಹ್ನೆಗಳು ಕಾಣಿಸಿಕೊಳ್ಳು ತ್ತದೆ.
*ವಾಯುಮಾಲಿನ್ಯದಿಂದ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಿ ಚರ್ಮದ ಮೇಲೆ ಅಲರ್ಜಿಯನ್ನುಂಟು ಮಾಡುತ್ತದೆ. ಇದು ಹೆಚ್ಚಾಗಿ ಚಿಕ್ಕಮಕ್ಕಳಲ್ಲಿ ಕಂಡುಬರುತ್ತದೆ.