ಅಕ್ಟೋಬರ್ ತಿಂಗಳು ಬರ್ತಿದ್ದಂತೆ ಹಬ್ಬಗಳು ಶುರುವಾಗ್ತವೆ. ದಸರಾ, ದೀಪಾವಳಿ ಅಂತಾ ಹಬ್ಬಗಳ ಸಾಲು ಸಾಲು. ಮಕ್ಕಳಿಗೆ ರಜೆ. ಜೊತೆಗೆ ಬದಲಾಗುವ ಹವಾಮಾನ. ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ ಎಲ್ಲಾದ್ರೂ ಸುತ್ತಿ ಬರೋಣ ಅಂತಾ ಪ್ಲಾನ್ ಮಾಡ್ತಾರೆ ಅನೇಕರು. ಅಕ್ಟೋಬರ್ ತಿಂಗಳಿನಲ್ಲಿ ಹೋಗಬಹುದಾದಂತಹ ಕೆಲ ಪ್ರವಾಸಿ ತಾಣಗಳ ಬಗ್ಗೆ ನಾವು ಹೇಳ್ತೇವೆ ಕೇಳಿ.
ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಐಸಿಐಸಿಐ ಬ್ಯಾಂಕ್ ಷೇರು
ಕರ್ನಾಟಕದ ಹಂಪಿ : ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಹಂಪಿಯ ಹೆಸರಿದೆ. ಹಂಪಿಯ ಸುಂದರ ದೇವಾಲಯಗಳು, ವಾಸ್ತುಶಿಲ್ಪಗಳು ಮನಸ್ಸಿಗೆ ಮುದ ನೀಡುತ್ತವೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ : ಕ್ವೀನ್ ಆಫ್ ಹಿಲ್ಸ್ ಎಂದೇ ಕರೆಯಲ್ಪಡುವ ಡಾರ್ಜಿಲಿಂಗ್ ರಜಾ ಮಜಾ ಸವಿಯಲು ಉತ್ತಮ ಸ್ಥಳ. ಅಲ್ಲಿನ ನ್ಯಾಷನಲ್ ಪಾರ್ಕ್, ರಾಕ್ ಗಾರ್ಡನ್ ಸೇರಿದಂತೆ ಅನೇಕ ಪ್ರದೇಶಗಳು ಮನಸ್ಸಿಗೆ ಮುದ ನೀಡುತ್ತವೆ.
ಪಶ್ಚಿಮ ಬಂಗಾಳದ ದಿಘಾ : ಅತ್ಯಂತ ಸುಂದರ ಬೀಚ್ ಎಂದು ದಿಫಾ ಪ್ರಸಿದ್ದಿ ಪಡೆದಿದೆ. ಕೊಲ್ಕತ್ತಾ ಜನರ ಅಚ್ಚುಮೆಚ್ಚಿನ ವೀಕೆಂಡ್ ಸ್ಥಳ ಇದಾಗಿದೆ.
2 ಹೊಸ IPL ತಂಡಗಳಿಗೆ ಬಿಡ್ಡಿಂಗ್, ಟೀಂ ಖರೀದಿಗೆ ಭಾರಿ ಪೈಪೋಟಿ
ರಾಜಸ್ತಾನದ ಜೋದ್ಪುರ : ಮೆಹರಾನ್ಗಢ ಕೋಟೆಯಿಂದ ಪ್ರಸಿದ್ಧಿ ಪಡೆದಿರುವ ಜೋದ್ಪುರವನ್ನು ಬ್ಲ್ಯೂ ಸಿಟಿ ಎಂದೇ ಕರೆಯಲಾಗುತ್ತದೆ. ಅಕ್ಟೋಬರ್ ರಜೆಯಲ್ಲಿ ಜೋದ್ಪುರದ ಸೌಂದರ್ಯವನ್ನು ಪ್ರವಾಸಿಗರು ಸವಿಯಬಹುದಾಗಿದೆ.
ಗುಜರಾತ್ ನ ಕಚ್ : ಮರಭೂಮಿ, ಅರಮನೆ, ಸುಂದರ ಬೀಚ್ ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳು ಇಲ್ಲಿವೆ.
ನೈನಿತಾಲ್ : ಭಾರತದ ಸುಂದರ ಗಿರಿಧಾಮಗಳನ್ನು ಹೊಂದಿರುವ ನೈನಿತಾಲ್ ಹನಿಮೂನ್ ಗೆ ಹೇಳಿ ಮಾಡಿಸಿದ ಸ್ಥಳ. ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಳಿ ಇರೋದಿಲ್ಲ. ಹಾಗೆ ಸುಂದರ ಸೂರ್ಯಾಸ್ತವನ್ನು ಸೆರೆ ಹಿಡಿಯಬಹುದಾಗಿದೆ.