ಇಂದಿನ ದಿನಗಳಲ್ಲಿ ಮದುವೆಗೂ ಮುನ್ನ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಮದುವೆಯ ನಂತರ ಮತ್ತೆ ಈ ತರಹದ ಮೋಜು ಸಿಗದೆ ಇರುವ ಕಾರಣ ಈ ಪಾರ್ಟಿ ಬಹಳ ವಿಶೇಷತೆ ಪಡೆದಿದೆ. ಬ್ಯಾಚುಲರ್ ಪಾರ್ಟಿ ಪ್ಲಾನ್ ಮಾಡ್ತಿರುವವರು ಈ ಸ್ಥಳಕ್ಕೆ ಬಂದು ಎಂಜಾಯ್ ಮಾಡ್ಬಹುದು. ಅವು ಯಾವವು ಎಂಬುದರ ವಿವರ ಇಲ್ಲಿದೆ.
ಸಾಹಸಕ್ಕೆ ಹೆಸರುವಾಸಿಯಾಗಿದೆ ಋಷಿಕೇಶ. ಇದನ್ನು ಭಾರತದ ಸಾಹಸ ರಾಜಧಾನಿ ಎಂದು ಕರೆಯಲಾಗುತ್ತದೆ. ಸಾಹಸ ಹಾಗೂ ಮನರಂಜನೆ ಸ್ಥಳಗಳನ್ನು ಬಯಸುವವರಿಗೆ ರಿಷಿಕೇಶ ಸೂಕ್ತ ಸ್ಥಳವಾಗಿದೆ. ಇಲ್ಲಿ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಎಂಜಾಯ್ ಮಾಡುವುದರ ಜೊತೆಗೆ ಇಲ್ಲಿ ರಿವರ್ ರಾಫ್ಟಿಂಗ್, ಬಂಗೀ ಜಂಪಿಂಗ್ ಮತ್ತು ಕ್ಯಾಂಪಿಂಗ್ ಸಹ ಮಾಡಬಹುದು.
ಲಡಾಖ್ನ ಕಣಿವೆ ಬಹಳ ಸುಂದರ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ವಾತಾವರಣ ಬ್ಯಾಚುಲರ್ ಪಾರ್ಟಿಗೆ ಹೇಳಿ ಮಾಡಿಸಿದ ಹಾಗಿದೆ. ಇಲ್ಲಿನ ಎತ್ತರದ ಪರ್ವತಗಳಲ್ಲಿ ಸ್ನೇಹಿತರ ಜೊತೆ ಟ್ರಕ್ಕಿಂಗ್ ಮಾಡುವ ಮಜವೇ ಬೇರೆ. ನೀವು ಬ್ಯಾಚುಲರ್ ವಿಶೇಷವನ್ನು ಇಲ್ಲಿಯೇ ಮಾಡಬಹುದು.
ಸೂರ್ಯಾಸ್ತವನ್ನು ನೋಡಲು ಹೆಚ್ಚು ಜನರು ಗೋವಾಕ್ಕೆ ಭೇಟಿ ನೀಡುತ್ತಾರೆ. ಪ್ರಕೃತಿಯ ಸೌಂದರ್ಯ ವಿಸ್ತಾರವಾದ ಬೀಚ್ ಜೊತೆಗೆ ಇಲ್ಲಿನ ಎಂಜಾಯ್ಮೆಂಟ್ ಶೈಲಿ, ಬ್ಯಾಚುಲರ್ಸ್ ಪಾರ್ಟಿಗೆ ಅತ್ಯುತ್ತಮವಾಗಿದೆ. ಗೋವಾದಲ್ಲಿ ಕಳೆಯುವ ರಾತ್ರಿಯ ಸಮಯ ಹೆಚ್ಚು ಉಲ್ಲಾಸಭರಿತವಾಗಿರುತ್ತದೆ. ಎಂದಿಗೂ ನಿದ್ರಿಸದ ನಗರ ಮುಂಬೈನಲ್ಲಿ ಪ್ರತಿದಿನವೂ ವಿಶೇಷವೇ. ಇಲ್ಲಿನ ಕಲರ್ ಫುಲ್ ಬೀಚ್ ಗಳು, ತಳ್ಳುವ ಪಾನಿಪೂರಿ, ವಡಾಪಾವ್ ಗಾಡಿಯಿಂದ ಹಿಡಿದು ಫೈವ್ ಸ್ಟಾರ್ ಹೊಟೇಲ್ ಎಲ್ಲವೂ ಖುಷಿ ನೀಡುತ್ತದೆ.