alex Certify ಕೂದಲು ಉದುರಲು ಕಾರಣವಾಗುತ್ತವೆ ನಾವು ಮಾಡುವ ಈ ತಪ್ಪುಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲು ಉದುರಲು ಕಾರಣವಾಗುತ್ತವೆ ನಾವು ಮಾಡುವ ಈ ತಪ್ಪುಗಳು…!

ಕೂದಲು ಉದುರುವಿಕೆಯ ಸಮಸ್ಯೆ ಯಾರಿಗಿಲ್ಲ ಹೇಳಿ, ಕೆಲವೊಮ್ಮೆ ಅನೇಕ ಉತ್ಪನ್ನಗಳ ಬಳಕೆಯಿಂದ ಕೂಡ ಕೂದಲು ಉದುರಲಾರಂಭಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಇನ್ನಷ್ಟು ಉತ್ಪನ್ನಗಳನ್ನು ಬಳಸಲಾರಂಭಿಸುತ್ತಾರೆ. ನಾವು ಮಾಡುವ ಕೆಲವು ತಪ್ಪುಗಳಿಂದಾಗಿಯೂ ಕೂದಲು ಉದುರುವಿಕೆ ಉಂಟಾಗುತ್ತದೆ.

ರಾಸಾಯನಿಕ ಉತ್ಪನ್ನಗಳ ಬಳಕೆ

ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾದರೂ ಅತಿಯಾಗಿ ಉದುರಲು ಪ್ರಾರಂಭಿಸಿದಾಗ ಅದಕ್ಕೆ ಹಲವು ಕಾರಣಗಳಿರಬಹುದು. ಕೂದಲಿನ ಆರೈಕೆಗೆ ಬಳಸುವ ಹೆಚ್ಚಿನ ಉತ್ಪನ್ನಗಳಲ್ಲಿ ರಾಸಾಯನಿಕಗಳ ಉಪಸ್ಥಿತಿಯಿಂದ ಕೂದಲು ದುರ್ಬಲಗೊಳ್ಳುತ್ತದೆ ಮತ್ತು ಉದುರಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವೈದ್ಯರು ಅಥವಾ ತಜ್ಞರ ಸಹಾಯ ಪಡೆಯಬೇಕು. ಕೂದಲಿಗೆ ಅನುಗುಣವಾಗಿ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳಬೇಕು.

ಹೀಟ್‌ ಸ್ಟೈಲಿಂಗ್‌ ಉಪಕರಣಗಳ ಬಳಕೆ

ಕೂದಲಿನ ಸ್ಟೈಲಿಂಗ್‌ಗಾಗಿ ಸ್ಟ್ರೈಟ್‌ನರ್‌ಗಳು, ಕಲರ್‌ ಬಳಕೆ ಮಾಡುತ್ತೇವೆ. ಇಂತಹ ಹೀಟ್‌ ಸ್ಟೈಲಿಂಗ್ ಸಾಧನಗಳು ಕೂಡ ಅಪಾಯಕಾರಿ. ಇವುಗಳ ಬಳಕೆಯಿಂದ ಕೂದಲು ದುರ್ಬಲವಾಗುತ್ತದೆ. ಕೂದಲಿನ ತೇವಾಂಶ ಕಳೆದುಹೋಗುತ್ತದೆ ಮತ್ತು ಕೂದಲು ನಿರಂತರವಾಗಿ ಬೀಳಲು ಪ್ರಾರಂಭಿಸುತ್ತದೆ.

ಕೂದಲಿನ ಬಣ್ಣ

ಕೆಲವರು ತಮ್ಮ ಕೂದಲಿಗೆ ಬಣ್ಣ ಹಚ್ಚುತ್ತಾರೆ. ಈ ಹೇರ್‌ ಕಲರ್‌ನಲ್ಲಿರುವ ರಾಸಾಯನಿಕಗಳು ಕೂದಲಿಗೆ ಹಾನಿ ಮಾಡುತ್ತವೆ, ಇವು ಕೂಡ ಉದುರುವಿಕೆಗೆ ಕಾರಣವಾಗಬಹುದು. ಕೂದಲಿಗೆ ಬಣ್ಣ ಹಾಕುವ ಮೊದಲು ತಜ್ಞರು ಅಥವಾ ವೈದ್ಯರ ಸಲಹೆ ಅಗತ್ಯ.

ಪ್ರೋಟೀನ್, ವಿಟಮಿನ್ ಕೊರತೆ

ಅನೇಕ ಬಾರಿ ಪ್ರೋಟೀನ್ ಕೊರತೆಯಿಂದಾಗಿ ಕೂದಲು ಉದುರುತ್ತದೆ ಮತ್ತು ಕೂದಲಿನ ಬೆಳವಣಿಗೆ ನಿಲ್ಲುತ್ತದೆ. ಕಬ್ಬಿಣದ ಕೊರತೆಯಿಂದಾಗುವ ರಕ್ತಹೀನತೆಗೆ ಕೂಡ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ವಿಟಮಿನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಡಿ ಮತ್ತು ವಿಟಮಿನ್ ಇ ಕೊರತೆಯಿಂದಲೂ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಬೇಕು. ಪ್ರೋಟೀನ್ ಮತ್ತು ವಿಟಮಿನ್‌ಗಳ ಕೊರತೆಯನ್ನು ಪೂರೈಸಬೇಕು.

ಇದಲ್ಲದೆ ಕೂದಲು ಉದುರುವಿಕೆಯನ್ನು ತಡೆಯಲು ಇನ್ನಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ದಿನವಿಡೀ ಸಾಕಷ್ಟು ನೀರು ಕುಡಿಯಬೇಕು, ಚೆನ್ನಾಗಿ ನಿದ್ರೆ ಮಾಡಬೇಕು. ಒತ್ತಡವನ್ನು ಕಡಿಮೆ ಮಾಡಿಕೊಂಡರೆ ಕೂದಲು ಉದುರುವಿಕೆ ಕೂಡ ಕಡಿಮೆಯಾಗುತ್ತದೆ.  ಇದಲ್ಲದೇ ಮಧುಮೇಹ, ಥೈರಾಯ್ಡ್ ನಂತಹ ಕಾಯಿಲೆಗಳಿದ್ದರೆ ಕೂದಲು ಉದುರುವ ಸಮಸ್ಯೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...