ಮೊಡವೆ, ಕಲೆಗಳನ್ನು ಹೋಗಲಾಡಿಸಿ ಚರ್ಮದ ಅಂದವನ್ನು ಹೆಚ್ಚಿಸಲು ಹೆಚ್ಚಿನ ಮಂದಿ ರಾಸಾಯನಿಕ ಬೆರೆಸಿದ ಉತ್ಪನ್ನ ಬಳಸುತ್ತಾರೆ. ಇಂತಹ ಸೌಂದರ್ಯ ವರ್ಧಕಗಳಿಂದ ಕೆಲವರಿಗೆ ಅಲರ್ಜಿ ಉಂಟಾಗುತ್ತದೆ.
ಹಾಗಾಗಿ ಇವುಗಳ ಬದಲು ನಮ್ಮ ಸುತ್ತಮುತ್ತಲೇ ಇರುವ ಕೆಲವು ಎಲೆಗಳನ್ನು ಬಳಸಿ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಈ ಎಲೆಗಳನ್ನು ಸಾಮಾನ್ಯವಾಗಿ ಅಡುಗೆಗೂ ಬಳಸುತ್ತಾರೆ. ಇದು ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ಕಾಪಾಡುತ್ತದೆ. ಜೊತೆಗೆ ಇದನ್ನು ಮುಖ, ಚರ್ಮಕ್ಕೆ ಹಚ್ಚುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಚರ್ಮದ ಮೊಡವೆ, ಕಲೆ, ಸುಕ್ಕುಗಳನ್ನು ತೆಗೆಯಬಹುದು.
ಮೆಂತ್ಯದ ಎಲೆ : ಮೆಂತ್ಯದ ಎಲೆಗಳನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೊಡವೆ, ಕಲೆಗಳನ್ನು ಮಾಯವಾಗಿ ಗ್ಲೋ ಹೆಚ್ಚುತ್ತದೆ. ಇದಕ್ಕೆ ನೀವು ಮೆಂತ್ಯದ ಎಲೆಯನ್ನು ಪೇಸ್ಟ್ ಮಾಡಿ ಅದಕ್ಕೆ 2 ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಸ್ವಚ್ಛ ನೀರಿನಲ್ಲಿ ಮುಖ ತೊಳೆಯಿರಿ.
ಪುದೀನ ಎಲೆ : ಪುದೀನ ಎಲೆಗಳನ್ನು ನೀವು ಮುಖದ ಅಂದವನ್ನು ಹೆಚ್ಚಿಸಲು ಬಳಸಬಹುದು. ಇದಕ್ಕಾಗಿ ನೀವು ಪುದೀನ ಪೇಸ್ಟ್ ಮಾಡಿ ಅದಕ್ಕೆ ಸೌತೆಕಾಯಿ ಮತ್ತು ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಸ್ವಚ್ಛ ನೀರಿನಲ್ಲಿ ಮುಖ ತೊಳೆಯಿರಿ.
ತುಳಸಿ ಎಲೆ : ತುಳಸಿ ಎಲೆಯೂ ಸೌಂದರ್ಯವರ್ಧಕವಾಗಿದೆ. ಇದಕ್ಕೆ ನೀವು ತುಳಸಿಯ ಎಲೆಗಳನ್ನು ಪೇಸ್ಟ್ ಮಾಡಿಕೊಳ್ಳಿ. ನಂತರ ಇದಕ್ಕೆ ನಿಂಬೆರಸದ ಕೆಲವು ಹನಿಗಳನ್ನು ಹಾಕಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಸ್ವಚ್ಛ ನೀರಿನಲ್ಲಿ ಮುಖ ತೊಳೆಯಿರಿ.
ಕರಿಬೇವಿನ ಎಲೆ : ಕರಿಬೇವಿನ ಎಲೆಗಳನ್ನು ನೀವು ಮುಖದ ಅಂದವನ್ನು ಹೆಚ್ಚಿಸಲು ಬಳಸಬಹುದು. ಇದಕ್ಕಾಗಿ ನೀವು ಕರಿಬೇವಿನ ಎಲೆಯನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಸ್ವಚ್ಛ ನೀರಿನಲ್ಲಿ ಮುಖ ತೊಳೆಯಿರಿ.
ಕೊತ್ತಂಬರಿ ಎಲೆ : ಕೊತ್ತಂಬರಿ ಎಲೆ ಕೂಡ ಚರ್ಮದ ಅಂದವನ್ನು ಹೆಚ್ಚಿಸಲು ತುಂಬ ಸಹಕಾರಿಯಾಗಿದೆ. ಇದಕ್ಕೆ ಕೊತ್ತಂಬರಿ ಎಲೆಗಳನ್ನು ಪೇಸ್ಟ್ ಮಾಡಿಕೊಳ್ಳಿ. ನಂತರ ಅದಕ್ಕೆ ಒಂದು ಚಮಚ ನಿಂಬೆರಸ ಹಾಕಿ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷದ ನಂತರ ಸ್ವಚ್ಛ ನೀರಿನಲ್ಲಿ ಮುಖ ತೊಳೆಯಿರಿ.