alex Certify ಅಮೃತಕ್ಕೆ ಸಮಾನ ಅಡುಗೆಮನೆಯಲ್ಲಿರುವ ಈ ಪದಾರ್ಥಗಳು; ಮಾಡುತ್ತವೆ ಯಕೃತ್ತಿನಿಂದ ಹೃದಯದವರೆಗೆ ಎಲ್ಲಾ ಅಂಗಗಳ ರಕ್ಷಣೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೃತಕ್ಕೆ ಸಮಾನ ಅಡುಗೆಮನೆಯಲ್ಲಿರುವ ಈ ಪದಾರ್ಥಗಳು; ಮಾಡುತ್ತವೆ ಯಕೃತ್ತಿನಿಂದ ಹೃದಯದವರೆಗೆ ಎಲ್ಲಾ ಅಂಗಗಳ ರಕ್ಷಣೆ….!

 

ಆಯುರ್ವೇದವು ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಪದ್ಧತಿ. ಆಹಾರವನ್ನೇ ಔಷಧವಾಗಿಸುವ ಪ್ರಕ್ರಿಯೆ ಇದು. ಅಂದರೆ ನಾವು ನಿತ್ಯ ಬಳಸುವ ಕೆಲವು ವಸ್ತುಗಳೇ ಆಯುರ್ವೇದದ ಪ್ರಕಾರ ಔಷಧಗಳಿದ್ದಂತೆ. ಈ ಪದಾರ್ಥಗಳು ಹಸಿವನ್ನು ನೀಗಿಸುವುದು ಮಾತ್ರವಲ್ಲದೆ ದೇಹವು ಸಕ್ರಿಯವಾಗಿರಲು ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಪೋಷಣೆಯನ್ನು ಒದಗಿಸುತ್ತವೆ.

ಆಯುರ್ವೇದದಲ್ಲಿ ಪ್ರಮುಖ ರೋಗಗಳನ್ನು ಗುಣಪಡಿಸಲು ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಕುತೂಹಲಕಾರಿ ಸಂಗತಿಯೆಂದರೆ ಈ ಗಿಡಮೂಲಿಕೆಗಳು ನಮ್ಮ ಅಡುಗೆಮನೆಯಲ್ಲಿಯೂ ಇವೆ. ಹೆಚ್ಚಿನ ಜನರಿಗೆ ಅವುಗಳ ಗುಣಲಕ್ಷಣಗಳ ಬಗ್ಗೆ ತಿಳಿದಿಲ್ಲ. ಈ ವಸ್ತುಗಳನ್ನು ಅಮೃತವೆಂದೇ ಕರೆಯಲಾಗುತ್ತದೆ. ಏಕೆಂದರೆ ಇವುಗಳ ಸೇವನೆಯಿಂದ ಹತ್ತಾರು ರೋಗಗಳನ್ನು ಗುಣಪಡಿಸಬಹುದು ಜೊತೆಗೆ ನಮ್ಮ ಆಯಸ್ಸನ್ನೂ ಹೆಚ್ಚಿಸಿಕೊಳ್ಳಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹವನ್ನು ನಿರ್ವಿಷಗೊಳಸಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಸೇವನೆಯಿಂದ ಕಣ್ಣುಗಳು ಆರೋಗ್ಯಕರವಾಗಿರುತ್ತವೆ ಮತ್ತು ವಯಸ್ಸಾದ ಪರಿಣಾಮಗಳು ಚರ್ಮದ ಮೇಲೆ ಹೆಚ್ಚು ಗೋಚರಿಸುವುದಿಲ್ಲ. ಉಸಿರಾಟದ ಸಮಸ್ಯೆ, ಹೃದಯ ಮತ್ತು ಸಂಧಿವಾತ ಕಾಯಿಲೆಗಳು ಮತ್ತು ಮಧುಮೇಹದ ಚಿಕಿತ್ಸೆಯಲ್ಲಿ ಆಮ್ಲಾ ಪ್ರಯೋಜನಕಾರಿಯಾಗಿದೆ.

ತುಪ್ಪ

ಆಯುರ್ವೇದದಲ್ಲಿ ತುಪ್ಪವನ್ನು ಕೂಡ ಔಷಧೀಯ ಆಹಾರವೆಂದು ಪರಿಗಣಿಸಲಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಜೊತೆಗೆ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ವಾತದ ಅಸಮತೋಲನವನ್ನು ಕಡಿಮೆ ಮಾಡುತ್ತದೆ.

ಅರಿಶಿನ

ಅರಿಶಿನವು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿ. ಅರಿಶಿನವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.  ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಇದು ದೇಹವನ್ನು ನೈಸರ್ಗಿಕವಾಗಿ ನಿರ್ವಿಷಗೊಳಿಸುತ್ತದೆ.

ಜೇನುತುಪ್ಪ

ಆಯುರ್ವೇದದಲ್ಲಿ ಜೇನುತುಪ್ಪವನ್ನು ನೈಸರ್ಗಿಕ ಮಕರಂದ ಎಂದು ಪರಿಗಣಿಸಲಾಗುತ್ತದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಕೆಮ್ಮು ಮತ್ತು ಶೀತದಂತಹ ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ಕೂಡ ಅರಿಶಿನ ಪರಿಣಾಮಕಾರಿ.

ಗಿಲೋಯ್ (ಗುಡುಚಿ)

ಗಿಲೋಯ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು. ಇದು ಜ್ವರವನ್ನು ಕಡಿಮೆ ಮಾಡುತ್ತದೆ. ರಕ್ತದಿಂದ ವಿಷವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಈ ಎಲ್ಲಾ ಪದಾರ್ಥಗಳು ನಮ್ಮ ಹೃದಯ ಮತ್ತು ಯಕೃತ್ತನ್ನು ಆರೋಗ್ಯವಾಗಿಡುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...