ಕೆಲವೊಬ್ಬರ ಮನೆಯಲ್ಲಿ ದಾರಿದ್ರ್ಯ ದೂರವಾಗೋದೆ ಇಲ್ಲ. ಹಣ ಬರುತ್ತೆ, ಆದ್ರೆ ಮನೆಯಲ್ಲಿ ನೆಲೆ ನಿಲ್ಲೋದಿಲ್ಲ. ಮನೆಯ ಪರಿಸ್ಥಿತಿ ಸುಧಾರಿಸೋದಿಲ್ಲ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತೆ. ಇಂಥ ಪರಿಸ್ಥಿತಿಯಲ್ಲಿ ಯಾವೆಲ್ಲ ವಿಷಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಶಾಸ್ತ್ರಗಳು ಹೇಳಿವೆ.
ಕೆಲವೊಂದು ವಸ್ತುಗಳ ಬಗ್ಗೆ ನಾವು ಗಮನ ನೀಡುವುದಿಲ್ಲ. ಸಣ್ಣ ಪುಟ್ಟ ವಿಷಯಗಳನ್ನು ನಿರ್ಲಕ್ಷಿಸಿಬಿಡ್ತೇವೆ. ಅದೇ ದಾರಿದ್ರ್ಯತೆಗೆ ಕಾರಣವಾಗುತ್ತೆ. ಅನೇಕರ ಹಾಸಿಗೆ ಹರಡಿಕೊಂಡಿರುತ್ತದೆ. ಎದ್ದ ತಕ್ಷಣ ಬೆಡ್ ಶೀಟ್, ರಗ್ ನೀಟಾಗಿಡುವುದಿಲ್ಲ. ಹಾಕಿದ್ದ ಬಟ್ಟೆ ಕೂಡ ಹಾಸಿಗೆ ಮೇಲೆ ಎಸೆಯುವ ಪದ್ಧತಿ ಅನೇಕರಿಗಿರುತ್ತದೆ. ಇದೇ ದಾರಿದ್ರ್ಯತೆಗೆ ಕಾರಣವಾಗುತ್ತದೆ.
ಕೆಲವರಿಗೆ ಕಂಡ ಕಂಡಲ್ಲಿ ಉಗುಳುವ ಹವ್ಯಾಸವಿರುತ್ತದೆ. ಇದರಿಂದಾಗಿ ಅಂತೂ-ಇಂತೂ ಸಿಕ್ಕ ಗೌರವ, ಸನ್ಮಾನ ಕೊನೆಯವರೆಗೆ ನಿಲ್ಲುವುದಿಲ್ಲ.
ಸ್ನಾನ ಮಾಡುವಾಗ ಪಾದವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಇದರಿಂದ ಕಿರಿಕಿರಿ ಕಡಿಮೆಯಾಗುತ್ತದೆ. ರಾತ್ರಿ ಮಲಗುವಾಗ ಪಾದವನ್ನು ತೊಳೆದುಕೊಂಡ್ರೆ ಸುಖ ನಿದ್ದೆ ಬರೋದ್ರಲ್ಲಿ ಎರಡು ಮಾತಿಲ್ಲ.
ಹೊರಗಿನಿಂದ ಬಂದ ಕೆಲವರು ಬೂಟ್, ಚಪ್ಪಲಿಯನ್ನು ಅಲ್ಲಲ್ಲಿ ಎಸೆದಿಡುತ್ತಾರೆ. ಇವರಿಗೆ ಶತ್ರುಗಳ ಕಾಟ ತಪ್ಪೋದಿಲ್ಲ. ಹಾಗಾಗಿ ಬೂಟ್, ಚಪ್ಪಲಿಯನ್ನು ಸೂಕ್ತ ಸ್ಥಳದಲ್ಲಿ ಸರಿಯಾಗಿ ಇಡಿ.
ಹೊರಗಿನಿಂದ ಮನೆಗೆ ಯಾರೇ ಬರಲಿ, ಮನೆಯವರಿರಲಿ ಇಲ್ಲ ಗೆಳೆಯರು, ಸಂಬಂಧಿಕರಿರಲಿ ಅವರಿಗೆ ಅವಶ್ಯವಾಗಿ ಟೀ-ಕಾಫಿ ನೀಡಿ.