ಮಹಿಳೆಯರಲ್ಲಿ ಫೈಬ್ರಾಯ್ಡ್ಸ್ ಸಮಸ್ಯೆ ಹೆಚ್ಚುತ್ತಿದೆ. ಗರ್ಭಾಶಯದ ವಾಲ್ ಮೇಲೆ ಕಾಣಿಸಿಕೊಳ್ಳುವ ಉಂಡೆಗಳನ್ನು ಫೈಬ್ರಾಯ್ಡ್‌ಗಳು ಎಂದು ಕರೆಯಲಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಲಿಯೋಮಿಯೋಮಾ ಎಂದೂ ಕರೆಯುತ್ತಾರೆ. ಈ ಗಡ್ಡೆಯು ಕ್ಯಾನ್ಸರ್ ಗಡ್ಡೆಗಿಂತ ಭಿನ್ನವಾಗಿರುತ್ತದೆ. ಮಹಿಳೆಯರಲ್ಲಿ ಮುಟ್ಟಿನ ಪ್ರಾರಂಭದ ನಂತರ ಇದರ ಅಪಾಯ ಶುರುವಾಗುತ್ತದೆ. ಫೈಬ್ರಾಯ್ಡ್‌ಗಳ ಹಿಂದಿನ ನಿಖರವಾದ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ.
ಫೈಬ್ರಾಯ್ಡ್‌ಗಳಿಂದಾಗಿ ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವ, ಶ್ರೋಣಿಯ ಪ್ರದೇಶದಲ್ಲಿ ತೀವ್ರವಾದ ನೋವು, ದೀರ್ಘಾವಧಿಯ ಋತುಚಕ್ರ ಸಂಭವಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಫೈಬ್ರಾಯ್ಡ್‌ಗಳ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಈ ಗಡ್ಡೆಗಳನ್ನು ಔಷಧ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬಹುದು. ಆದರೆ ನೈಸರ್ಗಿಕವಾಗಿ ಇವುಗಳಿಂದ ಪರಿಹಾರ ಕಂಡುಕೊಳ್ಳಲು ಕೆಲವು ಹಣ್ಣುಗಳನ್ನು ಸೇವನೆ ಮಾಡಬೇಕು.
ಸೇಬು: ಪೆಕ್ಟಿನ್ ಸಮೃದ್ಧವಾಗಿರುವ ಸೇಬು ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಗರ್ಭಾಶಯದಲ್ಲಿನ ಫೈಬ್ರಾಯ್ಡ್ಸ್ ಬೆಳವಣಿಗೆ ನಿಲ್ಲುತ್ತದೆ. ಅಷ್ಟೇ ಅಲ್ಲ ಸೇಬು ಹಣ್ಣಿನ ನಿಯಮಿತ ಸೇವನೆಯಿಂದ ಫೈಬ್ರಾಯ್ಡ್‌ಗಳ ಅಪಾಯವೂ ಕಡಿಮೆಯಾಗುತ್ತದೆ.
ಬೆರ್ರಿ ಹಣ್ಣುಗಳು: ಮಲ್ಬೆರಿ, ರಾಸ್ ಬೆರಿ ಮತ್ತು ದ್ರಾಕ್ಷಿ ಹಣ್ಣುಗಳು ನೈಸರ್ಗಿಕ ರೆಸ್ವೆರಾಟ್ರೊಲ್ ಅನ್ನು ಹೊಂದಿರುತ್ತವೆ. ರೆಸ್ವೆರಾಟ್ರೊಲ್ ಜೀವಕೋಶದ ಬೆಳವಣಿಗೆ ಮತ್ತು ಗರ್ಭಾಶಯದ ಫೈಬ್ರಾಯ್ಡ್ ಕೋಶಗಳನ್ನು ತಡೆಯುತ್ತದೆ. ಹಾಗಾಗಿ ಈ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡಿ.
ಕಿತ್ತಳೆ : ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳು ಫೈಬ್ರಾಯ್ಡ್‌ಗಳ ಬೆಳವಣಿಗೆಯನ್ನು ತಡೆಯುವುದಿಲ್ಲ. ಬದಲಿಗೆ ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಪ್ರತಿದಿನ ಒಂದರಿಂದ ಎರಡು ಸಿಟ್ರಸ್ ಹಣ್ಣುಗಳನ್ನು ತಿನ್ನುವ ಮಹಿಳೆಯರಿಗೆ ಫೈಬ್ರಾಯ್ಡ್‌ಗಳ ಅಪಾಯ ಕಡಿಮೆ.
ಸೀಬೆಹಣ್ಣು : ಪೇರಲವು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಪ್ರೋಟೀನ್ ಮತ್ತು ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ಫೈಬ್ರಾಯ್ಡ್ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಸೀಬೆಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಇದರ ಎಲೆಗಳ ರಸವನ್ನು ಸೇವಿಸುವುದರಿಂದ ಮುಟ್ಟಿನ ಸೆಳೆತ ಕಡಿಮೆಯಾಗುತ್ತದೆ.
ದಾಳಿಂಬೆ : ಗರ್ಭಾಶಯದಲ್ಲಿನ ಗಡ್ಡೆಯನ್ನು ಗುಣಪಡಿಸಲು ದಾಳಿಂಬೆ ತುಂಬಾ ಪರಿಣಾಮಕಾರಿ. ಇದರಲ್ಲಿರುವ ಎಲಾಜಿಕ್ ಆಮ್ಲವು ಫೈಬ್ರಾಯ್ಡ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.