ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ನಮ್ಮ ಜೀವನಶೈಲಿ ಹಾಗೂ ಆಹಾರ ವಿಧಾನ ಕಾರಣ. ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕೆಂದ್ರೆ ಇಂದಿನಿಂದ್ಲೇ ಈ ಆಹಾರ ಪದ್ಧತಿಯನ್ನು ಬದಲಿಸಿ.
ಮಾನವನ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಸೋಡಾ ಕಾರಣವಾಗುತ್ತದೆ. ಸೋಡಾದಲ್ಲಿ ಸಕ್ಕರೆ ಪ್ರಮಾಣ ತುಂಬಾ ಹೆಚ್ಚಾಗಿದೆ. ಹಾಗೆ ರಿಫೈನರಿ ಎಣ್ಣೆಯನ್ನು ಬಳಸಬೇಡಿ. ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಫಾಸ್ಟ್ ಫುಡ್ ಕೂಡ ಒಳ್ಳೆಯದಲ್ಲ. ನಾರಿನ ಅಂಶ ಅದ್ರಲ್ಲಿ ಕಡಿಮೆಯಿರುತ್ತದೆ.
ಇನ್ನು ಅನೇಕರು ಕಾಫಿಯನ್ನು ಅತಿಯಾಗಿ ಸೇವಿಸುತ್ತಾರೆ. ಕಾಫಿಯಲ್ಲಿರುವ ಕೆಫಿನ್ ಅಂಶ ರೋಗನಿರೋಧಕ ಶಕ್ತಿ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಕಾಫಿ ಮೇಲೆ ನಿಯಂತ್ರಣ ಅಗತ್ಯ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೀಲ್ ಆಗಿರುವ ಹಣ್ಣು, ಸೂಪ್ ಸಿಗುತ್ತದೆ. ಇದು ದೇಹವನ್ನು ದುರ್ಬಲಗೊಳಿಸುತ್ತದೆ. ಹಾಗೆ ಊಟದ ಜೊತೆ ಸೇವಿಸುವ ಉಪ್ಪಿನಕಾಯಿ ಕೂಡ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಉಪ್ಪಿನಕಾಯಿಯಲ್ಲಿರುವ ಸೋಡಿಯಂ ನಿರ್ಜಲೀಕರಣ ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.