alex Certify ಕಣ್ಣಿನ ದೃಷ್ಟಿಗೇ ಮಾರಕ ಈ ಆಹಾರಗಳು……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿನ ದೃಷ್ಟಿಗೇ ಮಾರಕ ಈ ಆಹಾರಗಳು……!

ಕಣ್ಣು ನಮ್ಮ ದೇಹದ ಬಹುಮುಖ್ಯವಾದ ಅಂಗ. ದೃಷ್ಟಿಯೇ ಇಲ್ಲದಿದ್ದರೆ ನಮ್ಮ ಬದುಕೇ ಬರಡಾದಂತೆ, ಕನಸುಗಳು ಕಮರಿ ಹೋದಂತೆ. ಕಣ್ಣುಗಳಿಲ್ಲದ ಜೀವನ ಸಂಪೂರ್ಣ ಕತ್ತಲು. ಹಾಗಾಗಿ ಕಣ್ಣುಗಳನ್ನು  ಯಾವಾಗಲೂ ಕಾಪಾಡಿಕೊಳ್ಳಬೇಕು. ಅವುಗಳ ಬಗ್ಗೆ ಕಾಳಜಿ ವಹಿಸಬೇಕು. ಕಣ್ಣುಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ರಕ್ಷಿಸಿಕೊಳ್ಳಬೇಕು.

ನಮ್ಮಲ್ಲಿ ಅನೇಕರಿಗೆ ದೃಷ್ಟಿ ದುರ್ಬಲವಾಗಿರುತ್ತದೆ ಅಥವಾ ಕೆಲವು ಕಾರಣಗಳಿಂದ ದೃಷ್ಟಿ ಮಸುಕಾಗುತ್ತದೆ. ಹಾಗಾದಾಗ ಕೂಡಲೇ ಅಲರ್ಟ್‌ ಆಗಿ. ಕಣ್ಣಿಗೆ ಒಳ್ಳೆಯದಲ್ಲದ ಕೆಲವು ವಸ್ತುಗಳನ್ನು ತಿನ್ನಬೇಡಿ. ದೃಷ್ಟಿ ಸುಧಾರಿಸಲು ಬಯಸಿದರೆ ಯಾವ ಆಹಾರವನ್ನು ತ್ಯಜಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಕಣ್ಣುಗಳಿಗೆ ಮಾರಕ ಈ ಆಹಾರ!

ತಂಪು ಪಾನೀಯ : ಸೋಡಾ, ಎನರ್ಜಿ ಡ್ರಿಂಕ್ಸ್, ಸಿಹಿಯಾದ ಚಹಾ ಮತ್ತು ನಿಂಬೆ ಪಾನಕದಂತಹ ಪಾನೀಯಗಳು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಹೊಂದಿರುತ್ತವೆ. ಇದು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ ಡಯಾಬಿಟಿಕ್ ರೆಟಿನೋಪತಿ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ಗೆ ಕಾರಣವಾಗಬಹುದು. ಒಂದು ತಂಪು ಪಾನೀಯದಲ್ಲಿ 37 ಗ್ರಾಂ ಸಕ್ಕರೆ ಇರುತ್ತದೆ. ಹಾಗಾಗಿ ಇವುಗಳನ್ನೆಲ್ಲ ಆದಷ್ಟು ಕಡಿಮೆ ಸೇವಿಸಿ. ಇವೆಲ್ಲವೂ ದೃಷ್ಟಿಯನ್ನು ದುರ್ಬಲಗೊಳಿಸುತ್ತದೆ.

ಕಲುಷಿತ ಮೀನು: ಮೀನುಗಳ ಸೇವನೆ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಮೀನುಗಳು ಹೇರಳವಾಗಿ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಆದರೆ  ಜಲಮಾಲಿನ್ಯದಿಂದಾಗಿ ಪಾದರಸದ ಪ್ರಮಾಣವು ಮೀನುಗಳಲ್ಲಿ ಹೆಚ್ಚುತ್ತಿದೆ. ಈ ಲೋಹವು ನಮ್ಮ ಕಣ್ಣುಗಳಿಗೆ ಹಾನಿ ಮಾಡುತ್ತದೆ.

ವೈಟ್‌ ಬ್ರೆಡ್ : ವೈಟ್‌ ಬ್ರೆಡ್‌ ಮತ್ತು ಪಾಸ್ತಾದಂತಹ ಪದಾರ್ಥಗಳಲ್ಲಿ ಕಾರ್ಬೋಹೈಡ್ರೇಟ್‌ ಇರುತ್ತದೆ. ಇದು ಇತರ ಆಹಾರಗಳಿಗಿಂತ ವೇಗವಾಗಿ ಜೀರ್ಣವಾಗುತ್ತದೆ. ಕಾರ್ಬೋಹೈಡ್ರೇಟ್‌  ಹೆಚ್ಚಾಗಿರುವ ಆಹಾರಗಳು ದೀರ್ಘಕಾಲದ ಉರಿಯೂತವನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ ಕಣ್ಣಿನ ದೃಷ್ಟಿ ಚೆನ್ನಾಗಿರಬೇಕೆಂದರೆ ಇವುಗಳ ಸೇವನೆ ನಿಲ್ಲಿಸಬೇಕು.

ಪ್ಯಾಕ್ ಮಾಡಿದ ಆಹಾರ: ಮೊದಲೆಲ್ಲ ತಾಜಾ ಹಣ್ಣುಗಳನ್ನು ತಿನ್ನುವ ಪ್ರವೃತ್ತಿ ಹೆಚ್ಚಾಗಿತ್ತು. ಆದರೆ ಆಧುನಿಕತೆಯಿಂದಾಗಿ ಪ್ಯಾಕ್ ಮಾಡಿದ ಆಹಾರವನ್ನು ಎಲ್ಲರೂ ಸೇವಿಸುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಇರುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ದೃಷ್ಟಿಶಕ್ತಿಯನ್ನು ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...