ನವರಾತ್ರಿಯಲ್ಲಿ ಭಕ್ತರು ಉಪವಾಸ ಮಾಡ್ತಾರೆ. ಅನ್ನ – ಆಹಾರ ಸೇವನೆ ಮಾಡದೆ ಜ್ಯೂಸ್ ಕುಡಿದು, ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ತಾರೆ. ಖಾಲಿ ಹೊಟ್ಟೆಯಲ್ಲಿರುವಾಗ ಕೆಲವೊಂದು ಆಹಾರ ಸೇವನೆ ಒಳ್ಳೆಯದಲ್ಲ.
ಮರೆತೂ ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಉಪವಾಸದ ಸಮಯದಲ್ಲಿ ಹೊಟ್ಟೆ ಖಾಲಿಯಿರುವಾಗ ಬಾಳೆಹಣ್ಣನ್ನು ತಿನ್ನಬೇಡಿ. ಬಾಳೆಹಣ್ಣು ತಿನ್ನುವುದ್ರಿಂದ ತಲೆನೋವು, ಹೊಟ್ಟೆ ಉರಿ, ಅಜೀರ್ಣವುಂಟಾಗುತ್ತದೆ.
ಟೀ ನಲ್ಲಿ ಆ್ಯಸಿಡ್ ಅಂಶ ಜಾಸ್ತಿಯಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದ್ರಿಂದ ಹೊಟ್ಟೆ ನೋವು ಹೊಟ್ಟೆಯುರಿ ಹೆಚ್ಚಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಒಳ್ಳೆಯದಲ್ಲ. ಕಫ ಹೆಚ್ಚಾಗಿ ಅಜೀರ್ಣ ಸಮಸ್ಯೆ ಕಾಡುತ್ತದೆ.
ನವರಾತ್ರಿ ಸಂದರ್ಭವಿರಲಿ ಇಲ್ಲ ಯಾವುದೇ ದಿನವಿರಲಿ ಖಾಲಿ ಹೊಟ್ಟೆಯಲ್ಲಿ ಸಿಹಿ ಗೆಣಸನ್ನು ತಿನ್ನಬಾರದು.
ಮೊಸರು ಹಾಗೂ ಸಿಹಿ ಪದಾರ್ಥವನ್ನು ಕೂಡ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು.
ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿನ್ನುವುದು ಬಹಳ ಒಳ್ಳೆಯದು. ಸೇಬು ಕೂಡ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಸೇಬು ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ, ಉಪವಾಸವಿರುವಾಗ ತಿನ್ನಿ.