ಸಕ್ಕರೆ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ…? ಆದರೆ ಅದೇ ಸಕ್ಕರೆ ನಿಮ್ಮ ದೇಹಕ್ಕೆ ಕಹಿ. ಸಕ್ಕರೆ ಅತಿಯಾದರೆ ನಿಮ್ಮ ದೇಹವನ್ನು ಖಾಯಿಲೆಯ ಮೂಟೆಯನ್ನಾಗಿಸಬಹುದು. ಸಕ್ಕರೆಯನ್ನು ನೇರವಾಗಿ ತಿನ್ನದೇ ಹೋದರೂ ನಾವು ತಿನ್ನುವ ಅನೇಕ ಆಹಾರಗಳಲ್ಲಿ ಅತಿಯಾದ ಸಕ್ಕರೆ ಇರುತ್ತೆ.
ಮೊಸರು ದೇಹಕ್ಕೆ ಒಳ್ಳೆಯದೇ. ಆದರೆ ಲೋ ಫ್ಯಾಟ್ ಮೊಸರಿನಲ್ಲಿ ಅತಿಯಾದ ಸಕ್ಕರೆ ಅಂಶವಿರುತ್ತೆ. ಒಂದು ಕಪ್ ಲೋ ಫ್ಯಾಟ್ ಮೊಸರು 12 ಟೀ ಸ್ಪೂನ್ ಸಕ್ಕರೆಗೆ ಸಮ.
ಟೊಮ್ಯಾಟೋ ಕೆಚಪ್ ನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತೆ. ಒಂದು ಟೀ ಸ್ಪೂನ್ ಕೆಚಪ್ ಅಂದ್ರೆ ಒಂದು ಟೀ ಸ್ಪೂನ್ ಸಕ್ಕರೆ ತಿಂದಂತೆ.
ಹೊರಗೆ ಸಿಗುವ ಹಣ್ಣಿನ ಜ್ಯೂಸ್ ಗಳಲ್ಲೂ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತೆ. ಹಣ್ಣಿನ ರಸ ಒಳ್ಳೆಯದೇ ಆದರೂ ಅದಕ್ಕೆ ಹಾಕುವ ಅಧಿಕ ಸಕ್ಕರೆಯಿಂದಾಗಿ ಅದು ದೇಹಕ್ಕೆ ಅಪಾಯ.
ಪ್ರೋಟೀನ್ ಬಾರ್ ಗಳಲ್ಲೂ ಸಾಕಷ್ಟು ಸಕ್ಕರೆ ಅಂಶವಿರುತ್ತೆ. ಇದು ನಿಮ್ಮ ಡಯಟ್ ನ ಒಂದು ಭಾಗವಾಗಿರಬಹುದು. ಆದರೆ ಒಂದು ಬಾರ್ ನಲ್ಲಿ 30 ಗ್ರಾಂ ಸಕ್ಕರೆ ಇರುತ್ತದೆ ಅಂದರೆ ನೀವು ನಂಬಲೇಬೇಕು.
ರೆಡಿ ಟು ಈಟ್ ಸೂಪ್ ಗಳಲ್ಲೂ ಸಕ್ಕರೆ ಅಧಿಕ. ಹೀಗಾಗಿ ಪ್ಯಾಕ್ ಆಗಿ ಬರುವ ಸೂಪ್ ಗಳನ್ನು ಉಪಯೋಗಿಸುವಾಗ ಇನ್ ಗ್ರೀಡಿಯನ್ಸ್ ಓದಿಕೊಳ್ಳುವುದು ಒಳ್ಳೆಯದು.
ಅನೇಕರು ಡಯಟ್ ನ ಭಾಗವಾಗಿ ಬಳಸುವ ಬ್ರೇಕ್ ಫಾಸ್ಟ್ ಸಿರೀಲ್ ಗಳಲ್ಲೂ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.
ಬೇರೆ ಬೇರೆ ರುಚಿ ಹೊಂದಿರುವ ಗ್ರೀನ್ ಟೀ ಅಥವಾ ಫ್ಲೇವರ್ಡ್ ಗ್ರೀನ್ ಟೀ ಗಳಲ್ಲೂ ಸಕ್ಕರೆ ಬಳಸಲಾಗಿರುತ್ತದೆ. ಡಯಟ್ ಗಾಗಿ ಗ್ರೀನ್ ಟೀ ಕುಡಿಯುವವರು ಎಚ್ಚರ ವಹಿಸಬೇಕಿದೆ.
ನೂಡಲ್ಸ್ ಹಾಗೂ ಮತ್ತಿತರ ಚಾಟ್ಸ್ ಗಳನ್ನು ತಯಾರಿಸುವಾಗ ರುಚಿಗಾಗಿ ಬಳಸುವ ಸಾಸ್ ಗಳಲ್ಲೂ ಕೂಡ ಅತ್ಯಧಿಕ ಪ್ರಮಾಣದ ಸಕ್ಕರೆ ಅಂಶವಿರುತ್ತೆ.