ತಮಿಳುನಾಡಿನ ಕಡಲೂರಿನ ಬುಡಕಟ್ಟು ಜನಾಂಗವೊಂದು ತನ್ನ ಕಲಾಕೃತಿಗಳ ಮೂಲಕ ಸುದ್ದಿಯಲ್ಲಿದೆ. ಲಂಟಾನಾದಿಂದ ಮಾಡಲ್ಪಟ್ಟ ಆನೆಗಳ ಜೀವಗಾತ್ರದ ಕಲಾಕೃತಿಗಳ ಮೂಲಕ ನೀಲಗಿರಿಯ ಈ ಬುಡಕಟ್ಟು ಜನಾಂಗ ಸುದ್ದಿಯಲ್ಲಿದೆ.
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಶೇರ್ ಮಾಡಿದ್ದಾರೆ. ಬುಡಕಟ್ಟು ಜನಾಂಗದ ಮಂದಿ ಲಂಟಾನಾ ಬಳಸಿಕೊಂಡು ಈ ಕಲಾಕೃತಿಗಳನ್ನು ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ ಸುಪ್ರಿಯಾ. ಶೆಡ್ ಒಂದರ ಒಳಗೆ ಕುಳಿತ ಈ ಜನರು ತಮ್ಮ ಕೆಲಸದಲ್ಲಿ ಮಗ್ನರಾಗಿರುವುದನ್ನು ನೋಡಬಹುದಾಗಿದೆ.
“ಗುಡಲೂರು ಭೇಟಿ ಸಂದರ್ಭದಲ್ಲಿ, ಈ ಘಟಕದಲ್ಲಿ ಬುಡಕಟ್ಟಿನ ಯುವಕರು ಲಂಟಾನಾದಲ್ಲಿ ಆನೆಗಳ ಜೀವಗಾತ್ರದ ಕಲಾಕೃತಿಗಳನ್ನು ರಚಿಸುತ್ತಿರುವುದನ್ನು ನೋಡಲು ಸಂತಸವಾಗುತ್ತದೆ. 100ರಷ್ಟು ಜನ ತಮ್ಮ ಕೈಗಳಿಂದ ಜಾದೂ ಮಾಡುತ್ತಿದ್ದಾರೆ. ಲಂಟಾನಾ ನಿರ್ಮೂಲನೆಯೊಂದಿಗೆ ಸ್ಥಳೀಯರಿಗೆ ಜೀವನೋಪಾಯ ಸೃಷ್ಟಿಸುವ ಇದೊಂದು ಅದ್ಭುತ ಉಪಾಯ,” ಎಂದು ಅಧಿಕಾರಿ ಬರೆದಿದ್ದಾರೆ.