ಮಲಗಿದಾಗ ನಿದ್ದೆಯಲ್ಲಿ ಕನಸು ಬೀಳುವುದು ಸಹಜ. ಕೆಲವು ಸಿಹಿ ಕನಸುಗಳಾಗಿದ್ದರೆ ಇನ್ನು ಕೆಲವು ಭಯಾನಕವಾಗಿರುತ್ತವೆ. ಕನಸುಗಳ ಅರ್ಥಗಳನ್ನು ವಿಜ್ಞಾನದಲ್ಲಿ ಸಹ ವಿವರಿಸಲಾಗಿದೆ. ಈ ಕನಸುಗಳು ಭವಿಷ್ಯದಲ್ಲಿ ಯಾವ ರೀತಿಯ ಶುಭ ಅಥವಾ ಅಶುಭ ಘಟನೆಗಳು ಸಂಭವಿಸುತ್ತವೆ ಎಂಬುದರ ಮುನ್ಸೂಚನೆ ಎಂದರೂ ತಪ್ಪಾಗಲಾರದು.
ನಂಬಿಕೆಯ ಪ್ರಕಾರ ಕೆಲವು ಕನಸುಗಳನ್ನು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ನಮ್ಮ ಜೀವನದಲ್ಲಿ ಶುಭ ದಿನಗಳು ಪ್ರಾರಂಭವಾಗಲಿವೆ ಎಂಬುದರ ಸಂಕೇತ ಈ ಕನಸುಗಳು. ಈ ಕನಸುಗಳು ಬಂದರೆ ವ್ಯಕ್ತಿಯು ಆರ್ಥಿಕ ಲಾಭವನ್ನು ಪಡೆಯುತ್ತಾನೆ, ಯಶಸ್ಸನ್ನು ಪಡೆಯುತ್ತಾನೆ, ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ಕೇಳುತ್ತಾನೆ.
ಸಿಹಿ ಕನಸುಗಳು – ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಈ ಕನಸುಗಳು ಬೀಳುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಹಣದ ಕನಸು – ಕನಸಿನಲ್ಲಿ ನಾಣ್ಯಗಳು ಅಥವಾ ಹಣದ ರಾಶಿ ಕಂಡರೆ ಅದು ಲಕ್ಷ್ಮಿಯ ಆಶೀರ್ವಾದ ಸಿಗಲಿದೆ ಎಂಬುದರ ಸಂಕೇತ. ವ್ಯಕ್ತಿಯು ಅಂತಹ ಕನಸನ್ನು ಕಂಡರೆ ಶೀಘ್ರವೇ ಹಣವಂತನಾಗುತ್ತಾನೆ.
ಬಿಳಿ ಹಾವಿನ ಕನಸು – ಕನಸಿನಲ್ಲಿ ಬಿಳಿ ಹಾವು ಕಾಣಿಸಿಕೊಂಡರೆ ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ ಎಂದರ್ಥ. ಹಾವುಗಳನ್ನು ಸಂಪತ್ತಿನ ರಕ್ಷಕ ಎಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಹಾವನ್ನು ನೋಡುವುದು ಹಣವನ್ನು ಪಡೆಯುವ ಬಲವಾದ ಸಾಧ್ಯತೆಯ ಸೂಚನೆಯಾಗಿರುತ್ತದೆ.
ಸರ್ಕಸ್ ಕನಸು – ಕನಸಿನಲ್ಲಿ ಸರ್ಕಸ್ ಅನ್ನು ನೋಡುವುದು ಎಂದರೆ ನೀವು ಭೌತಿಕ ಸಂತೋಷಗಳನ್ನು ಪಡೆಯಲಿದ್ದೀರಿ ಎಂದರ್ಥ. ನಿಮ್ಮ ಜೀವನದಲ್ಲಿ ಸಂತೋಷವು ಬರಲಿದೆ ಎಂಬುದರ ಸೂಚನೆ.
ಆನೆಯ ಕನಸು – ಕನಸಿನಲ್ಲಿ ಆನೆಯನ್ನು ನೋಡುವುದು ದೊಡ್ಡ ಸ್ಥಾನ ಮತ್ತು ಪ್ರತಿಷ್ಠೆಯನ್ನು ಪಡೆಯುವ ಸಂಕೇತವಾಗಿದೆ. ಕನಸಿನಲ್ಲಿ ಐರಾವತ ಆನೆ ಅಂದರೆ ಬಿಳಿ ಆನೆ ಕಂಡರೆ ಆ ವ್ಯಕ್ತಿಗೆ ಅಭೂತಪೂರ್ವ ಸಂತೋಷ ಸಿಗುತ್ತದೆ. ಅಪಾರವಾದ ಸಂಪತ್ತು, ಗೌರವ, ಪ್ರತಿಷ್ಠೆ, ಎಲ್ಲವನ್ನೂ ಆತ ಪಡೆಯುತ್ತಾನೆ. ಕನಸಿನಲ್ಲಿ ಮಾವುತನನ್ನು ನೋಡುವುದು ಸಹ ತುಂಬಾ ಮಂಗಳಕರ. ಈ ಕನಸು ಆರ್ಥಿಕ ಲಾಭವನ್ನು ಸೂಚಿಸುತ್ತದೆ.
ನೃತ್ಯದ ಕನಸು – ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಶೀಶ್ ಮಹಲ್‌ನಲ್ಲಿ ಕುಳಿತು ನೃತ್ಯ ಮಾಡುವುದನ್ನು ನೋಡಿದರೆ, ಅವನು ಐಷಾರಾಮಿ ಜೀವನವನ್ನು ಪಡೆಯುತ್ತಾನೆ ಎಂದರ್ಥ. ಶ್ರೀಮಂತಿಕೆಯ ಮುನ್ಸೂಚನೆ ಇದು.
ಆಭರಣದ ಕನಸು – ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಮಾಣಿಕ್ಯ ರತ್ನ ಅಥವಾ ಮಾಣಿಕ್ಯದ ಉಂಗುರವನ್ನು ಧರಿಸಿರುವುದನ್ನು ನೋಡಿದರೆ, ಅವನು ಅದೃಷ್ಟವನ್ನು ಹೊಂದುತ್ತಾನೆ ಎಂದರ್ಥ. ಅವನು ರಾಜನಂತಹ ಜೀವನ ಮತ್ತು ಸಂತೋಷವನ್ನು ಪಡೆಯುತ್ತಾನೆ.