alex Certify ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಅಪಾಯಕಾರಿ ಈ ಕಾಯಿಲೆಗಳು; ಇರಲಿ ಎಚ್ಚರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಅಪಾಯಕಾರಿ ಈ ಕಾಯಿಲೆಗಳು; ಇರಲಿ ಎಚ್ಚರ…!

ಪುರುಷರು ಮತ್ತು ಮಹಿಳೆಯರ ದೇಹಗಳು ಅನೇಕ ವಿಷಯಗಳಲ್ಲಿ ವಿಭಿನ್ನವಾಗಿವೆ, ಆದ್ದರಿಂದ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ವಿಭಿನ್ನವಾಗಿಯೇ ಇರುತ್ತವೆ.

ಹಾಗಾಗಿ ಕಾಯಿಲೆಗಳ ವಿಚಾರದಲ್ಲೂ ಜಾಗರೂಕರಾಗಿರಬೇಕು. ಕೆಲವು ರೋಗಗಳು ಮಹಿಳೆಯರಿಗಿಂತ ಪುರುಷರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ.

ಖಿನ್ನತೆ: ಮಹಿಳೆಯರು ಭಾವನಾತ್ಮಕವಾಗಿ ದುರ್ಬಲರು ಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ ಖಿನ್ನತೆಯ ಸಮಸ್ಯೆ ಪುರುಷರಲ್ಲಿ ಹೆಚ್ಚು ಕಂಡುಬರುತ್ತದೆ. ಇದಕ್ಕೆ ಕಾರಣ  ಮಹಿಳೆಯರು ತಮ್ಮ ಸಮಸ್ಯೆಗಳನ್ನು, ನೋವುಗಳನ್ನು ಹೆಚ್ಚು ವ್ಯಕ್ತಪಡಿಸುತ್ತಾರೆ.

ಆದರೆ ಪುರುಷರು ತಮ್ಮ ಭಾವನೆಗಳನ್ನು ಮರೆಮಾಚುತ್ತಾರೆ, ನೋವು ಒಳಗೊಳಗೇ ಅವರನ್ನು ಉಸಿರುಗಟ್ಟಿಸುತ್ತದೆ. ಹಾಗಾಗಿ ಯಾವುದೇ ರೀತಿಯ ಬೇಸರ, ನೋವು, ಒತ್ತಡವಿದ್ದಾಗ ಅದನ್ನು ಆಪ್ತರೊಂದಿಗೆ ಉತ್ತಮ. ಇದು ಖಿನ್ನತೆಯನ್ನು ನಿವಾರಿಸುತ್ತದೆ.

ಹೃದ್ರೋಗ: ಹೆಚ್ಚಿನ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿರುತ್ತದೆ.  ಏಕೆಂದರೆ ಪುರುಷರಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿರುತ್ತದೆ. ಹಾಗಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

ಸಕ್ಕರೆ ಕಾಯಿಲೆ: ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚಾಗಿ ಎಣ್ಣೆಯುಕ್ತ ವಸ್ತುಗಳನ್ನು ಹೊರಗಡೆ ತಿನ್ನುತ್ತಾರೆ.  ಇದರಿಂದಾಗಿ ಅವರ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ, ಇದು ನಂತರ ಮಧುಮೇಹಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸುವುದು ಉತ್ತಮ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಯಕೃತ್ತಿನ ಕಾಯಿಲೆ: ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ಮದ್ಯವ್ಯಸನಿಗಳಾಗಿರುತ್ತಾರೆ. ಇದರಿಂದಾಗಿ ಅವರ ಯಕೃತ್ತು ಹಾನಿಗೊಳಗಾಗುತ್ತದೆ. ಯಕೃತ್ತಿಗೆ ಸಂಬಂಧಿಸಿದ ರೋಗಗಳ ಅಪಾಯವು ಹೆಚ್ಚಾಗುತ್ತದೆ.

ಶ್ವಾಸಕೋಶದ ಕಾಯಿಲೆ: ಸಾಮಾನ್ಯವಾಗಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಧೂಮಪಾನ ಮಾಡುವುದನ್ನು ನೀವು ನೋಡಿರಬೇಕು. ಉದ್ಯೋಗಕ್ಕಾಗಿ ಮನೆಯಿಂದ ಹೊರಗೆ ಹೋಗುವುದರಿಂದ ಅವರು ಹೆಚ್ಚು ಧೂಳು ಮತ್ತು ಮಾಲಿನ್ಯಕ್ಕೆ ತುತ್ತಾಗುತ್ತಾರೆ. ಹಾಗಾಗಿ ಪುರುಷರು ಶ್ವಾಸಕೋಶದ ಕಾಯಿಲೆಗೆ ಹೆಚ್ಚು ತುತ್ತಾಗುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...