ನಾವು ದಿನನಿತ್ಯ ಧರಿಸುವ ಬಟ್ಟೆಗಳು ಕೂಡ ಮನೆಗೆ ಕೆಟ್ಟ ಶಕ್ತಿಗಳು ಬರುವಂತೆ ಮಾಡ್ತಾವೆ ಎನ್ನುತ್ತೆ ವಾಸ್ತುಶಾಸ್ತ್ರ.
ಮನೆಗೆ ಒಮ್ಮೆ ಕೆಟ್ಟ ಶಕ್ತಿಗಳು ಎಂಟ್ರಿ ಕೊಟ್ವು ಅಂದರೆ ಸಾಕು ಅಶಾಂತಿ, ಹಣದ ಕೊರತೆ, ಕಲಹ ಹೀಗೆ ಸಾವಿರಾರು ಸಮಸ್ಯೆಗಳು ಎದುರಾಗಿ ಬಿಡ್ತಾವೆ. ಮನುಷ್ಯ ಧರಿಸುವ ಬಟ್ಟೆ ಆತನ ವ್ಯಕ್ತಿತ್ವವನ್ನ ಪ್ರತಿನಿಧಿಸುತ್ತೆ ಎಂದು ಹೇಳಲಾಗುತ್ತೆ. ಹಾಗಾದ್ರೆ ವಾಸ್ತು ಶಾಸ್ತ್ರ ಬಟ್ಟೆಗಳ ಬಗ್ಗೆ ಏನನ್ನ ಹೇಳುತ್ತೆ ಅಂತಾ ನೋಡೋಣ ಬನ್ನಿ.
ಹರಿದು ಹೋದ ಅಥವಾ ಅತ್ಯಂತ ಹಳೆಯ ಉಡುಪುಗಳು ಮನೆಗೆ ಋಣಾತ್ಮಕ ಶಕ್ತಿಯನ್ನ ತರಬಲ್ಲವು. ಹೀಗಾಗಿ ಹರಿದ ಹಾಗೂ ಹಳೆಯ ಬಟ್ಟೆಗಳನ್ನ ಕೇವಲ ಮನೆಯನ್ನ ಸ್ವಚ್ಛಗೊಳಿಸೋಕೆ ಮಾತ್ರ ಬಳಕೆ ಮಾಡಿ. ಅಲ್ಲದೇ ಹೊಸ ಬಟ್ಟೆಗಳನ್ನ ಬುಧವಾರ, ಗುರುವಾರ ಹಾಗೂ ಶುಕ್ರವಾರದಂದು ಧರಿಸಿದ್ರೆ ತುಂಬಾನೆ ಒಳ್ಳೆಯದಂತೆ. ಒಂದು ವೇಳೆ ಶನಿವಾರ ನೀವು ಹೊಸ ಬಟ್ಟೆಯನ್ನ ಧರಿಸಿದ್ರೆ ಆ ಬಟ್ಟೆ ಬೇಗನೇ ಹರಿದು ಹೋಗುತ್ತೆ ಎಂದು ಹೇಳಿದೆ ವಾಸ್ತು ಶಾಸ್ತ್ರ.
ವಿವಾಹಿತರು ಆದಷ್ಟು ಕಪ್ಪು ಬಣ್ಣದ ಉಡುಪನ್ನ ಧರಿಸೋದನ್ನ ಕಡಿಮೆ ಮಾಡೋದು ಒಳ್ಳೆಯದು. ಸ್ವಾವಲಂಬಿಯಾಗಿರುವ ವ್ಯಕ್ತಿಗಳು ಕೆಂಪು ಬಣ್ಣದ ಬಟ್ಟೆಯನ್ನ ಧರಿಸಿದ್ರೆ ತುಂಬಾನೆ ಒಳ್ಳೆಯದು. ಕೆಂಪು ಬಣ್ಣ ಶಕ್ತಿಯ ಸಂಕೇತವಾಗಿರೋದ್ರಿಂದ ಈ ಬಣ್ಣದ ಬಟ್ಟೆಯನ್ನ ಧರಿಸಿದ ವ್ಯಕ್ತಿಯಲ್ಲೂ ತೇಜಸ್ಸು ಇರುತ್ತೆ. ಸಮಾಜದಲ್ಲಿ ನೀವೊಬ್ಬ ಆದರ್ಶ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರೆ ಹಳದಿ ಬಣ್ಣದ ಬಟ್ಟೆಯನ್ನ ಹೆಚ್ಚಾಗಿ ಧರಿಸಿ.