ನಿಮ್ಮ ತ್ವಚೆಯ ಹೊಳಪಿಗೆ ಕಾರಣವಾಗುವ ಕೆಲವು ಕಪ್ಪಾದ ವಸ್ತುಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ.
ಕಪ್ಪು ಕಡಲೆಯನ್ನು ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಬರಿ ಹೊಟ್ಟೆಗೆ ಆರ್ಧ ಕಪ್ ಸೇವಿಸಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ನಿಮ್ಮ ತ್ವಚೆಗೂ ಹೊಳಪು ನೀಡುತ್ತದೆ.
ಐರನ್, ಕ್ಯಾಲ್ಸಿಯಂ ಅಂಶ ಹೇರಳವಾಗಿರುವ ಕಪ್ಪು ಉಪ್ಪು ರಕ್ತಹೀನತೆಯನ್ನು ಸರಿಮಾಡಿ, ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಇದರಿಂದ ನಿಮ್ಮ ಸೌಂದರ್ಯವೂ ಹೆಚ್ಚುತ್ತದೆ.
ಕಪ್ಪು ಎಳ್ಳಿನಲ್ಲಿರುವ ಪೊಟ್ಯಾಶಿಯಂ, ಫೈಬರ್ ಅಂಶಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುವ ಜೊತೆಗೆ ದೇಹವನ್ನು ತಂಪಾಗಿಡುತ್ತದೆ. ತ್ವಚೆಯನ್ನು ಹೊಳೆಯುವಂತೆ ಮಾಡುವ ಗುಣವೂ ಇದಕ್ಕಿದೆ.
ಬ್ಲಾಕ್ ಕಾಫಿ ದೇಹ ಮನಸ್ಸಿಗೆ ಉಲ್ಲಾಸ ನೀಡುವ ಜೊತೆಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಬ್ಲಾಕ್ ಬೀನ್ಸ್ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಕಪ್ಪು ದ್ರಾಕ್ಷಿ ದೇಹವನ್ನು ಫಿಟ್ ಮಾಡುವುದಲ್ಲದೆ ಸೌಂದರ್ಯವನ್ನೂ ಹೆಚ್ಚಿಸುತ್ತದೆ.