ಹಣ ಉಳಿತಾಯ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಉಳಿತಾಯ ಮಾಡಿದ ಹಣಕ್ಕೆ ಹೆಚ್ಚು ಬಡ್ಡಿ ಸಿಗಬೇಕೆಂಬುದು ಎಲ್ಲರ ಆಸೆ. ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯುವ ಪ್ಲಾನ್ ನಲ್ಲಿದ್ದರೆ ಹೆಚ್ಚು ಬಡ್ಡಿ ಬರುವ ಬ್ಯಾಂಕ್ ನಲ್ಲಿ ಖಾತೆ ತೆರೆಯಿರಿ. ದೇಶದ 5 ಸಣ್ಣ ಹಣಕಾಸು ಬ್ಯಾಂಕ್ಗಳಲ್ಲಿ ಹೆಚ್ಚು ಬಡ್ಡಿಯನ್ನು ನೀಡಲಾಗ್ತಿದೆ.
ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉಳಿತಾಯ ಖಾತೆದಾರರಿಗೆ ಶೇಕಡಾ 7 ರ ಬಡ್ಡಿದರವನ್ನು ನೀಡುತ್ತಿದೆ. ಈ ಸಣ್ಣ ಹಣಕಾಸು ಬ್ಯಾಂಕ್ನ ಸರಾಸರಿ ಮಾಸಿಕ ಬ್ಯಾಲೆನ್ಸ್ 2500 ರೂಪಾಯಿಯಿಂದ 10000 ರೂಪಾಯಿ.
ಫಿನ್ಕೇರ್ ಸಣ್ಣ ಹಣಕಾಸು ಬ್ಯಾಂಕ್ ನಲ್ಲಿಯೂ ಉತ್ತಮ ಬಡ್ಡಿ ಲಭ್ಯವಿದೆ. ಈ ಬ್ಯಾಂಕ್ ಗ್ರಾಹಕರಿಗೆ ಶೇಕಡಾ 7 ರವರೆಗೆ ವಾರ್ಷಿಕ ಬಡ್ಡಿ ದರವನ್ನು ನೀಡುತ್ತಿದೆ. ಇದಕ್ಕಾಗಿ ಐದು ಲಕ್ಷಕ್ಕಿಂತ ಹೆಚ್ಚು ಠೇವಣಿ ಇಡಬೇಕಾಗುತ್ತದೆ. 1 ಲಕ್ಷಕ್ಕಿಂತ ಹೆಚ್ಚಿನ ಮತ್ತು 5 ಲಕ್ಷದವರೆಗಿನ ಠೇವಣಿಗಳ ಮೇಲೆ ಶೇಕಡಾ 6 ರಷ್ಟು ಬಡ್ಡಿ ಲಭ್ಯವಿದೆ.
ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನಲ್ಲಿನ ಉಳಿತಾಯ ಖಾತೆಯಲ್ಲಿ ಗ್ರಾಹಕರಿಗೆ ಶೇಕಡಾ 6ರ ಬಡ್ಡಿ ದರ ವಾರ್ಷಿಕವಾಗಿ ಸಿಗಲಿದೆ. ಈ ಬಡ್ಡಿ ದರಗಳು 1 ಲಕ್ಷದಿಂದ 2 ಲಕ್ಷದವರೆಗಿನ ಠೇವಣಿಗಳ ಮೇಲೆ ಅನ್ವಯಿಸುತ್ತವೆ. ಇನ್ನು ಉಜ್ಜೀವನ್ ಸಣ್ಣ ಹಣಕಾಸು ಬ್ಯಾಂಕ್ ಗ್ರಾಹಕರಿಗೆ ಶೇಕಡಾ 7 ರ ಬಡ್ಡಿದರದಲ್ಲಿ ಉಳಿತಾಯ ಖಾತೆಗಳನ್ನು ತೆರೆಯುವ ಸೌಲಭ್ಯವನ್ನು ನೀಡುತ್ತಿದೆ.
ಡಿಸಿಬಿ ಬ್ಯಾಂಕ್ ಕೂಡ ಹಿಂದೆ ಬಿದ್ದಿಲ್ಲ. ಖಾತೆದಾರರಿಗೆ ಶೇಕಡಾ 6.5ರ ದರದಲ್ಲಿ ಬಡ್ಡಿ ನೀಡುತ್ತದೆ. ಈ ಖಾಸಗಿ ಬ್ಯಾಂಕ್ನಲ್ಲಿ ಗ್ರಾಹಕರು ಕನಿಷ್ಠ 2500 ರಿಂದ 5000 ರೂಪಾಯಿವರೆಗೆ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು.