ನೆಲಕ್ಕೆ ಮುಖ ಮಾಡಿ ಮಲಗಿ 2 ಅಂಗೈಗಳಿಂದ ಮುಖ ಹಿಡಿದುಕೊಳ್ಳಬೇಕು. ಎರಡು ಕಾಲುಗಳು ಒಂದಕ್ಕೊಂದು ಸನಿಹದಲ್ಲಿರಬೇಕು. ಬಳಿಕ ಮುಂಗಾಲನ್ನು ಅಗಲಿಸಿ ಇದೇ ಸ್ಥಿತಿಯಲ್ಲಿ 3 ನಿಮಿಷ ಇರಬೇಕು.
ಶಲಭಾಸನ
ಹೊಟ್ಟೆ ಕೆಳಗೆ ದಿಂಬನ್ನು ಇಟ್ಟುಕೊಂಡು ಈ ಆಸನವನ್ನು ಸುಲಭವಾಗಿ ಮಾಡಬಹುದು. ಎರಡು ಕಾಲುಗಳು ಒಂದಕ್ಕೊಂದು ಹತ್ತಿರವಿರಬೇಕು. 2 ಭುಜಗಳು ಸಮಾನಾಂತರವಾಗಿರಬೇಕು. ನಂತರ ಉಸಿರೆಳೆದುಕೊಳ್ಳುತ್ತಾ 2 ಕಾಲುಗಳನ್ನು ಗಾಳಿಯಲ್ಲಿ ಮೇಲೆಕ್ಕೆ ಎತ್ತಿ 30 ಸೆಕಂಡ್ ಹಾಗೇ ಇರಬೇಕು. ಹೀಗೆ 6 ಬಾರಿ ಮಾಡಿದರೆ ಸಾಕು.
ಅಶ್ವ ಸಂಚಲ ಆಸನ
ಮೊದಲು ಎರಡು ಕಾಲುಗಳನ್ನು ಜೋಡಿಸಿ ನಿಲ್ಲಬೇಕು. ಬಳಿಕ ನಿಧಾನವಾಗಿ ಉಸಿರು ಎಳೆಯುತ್ತಾ ಕೆಳಗೆ ಎರಡು ಕೈಗಳನ್ನು ತಾಗಿಸಬೇಕು. ನಂತರ ಎರಡೂ ಕೈಗಳನ್ನು ಮೇಲಕ್ಕೆತ್ತಿ ನಮಸ್ಕಾರ ಮುದ್ರಾದಲ್ಲಿ ಎಡಗಾಲನ್ನು ಹಿಂದಕ್ಕೆ ಸರಿಸಿ ಮೂವತ್ತು ಸೆಕೆಂಡುಗಳ ಕಾಲ ಇರಬೇಕು. ನಂತರ ಎಡಗಾಲನ್ನು ಮೊದಲಿನ ಸ್ಥಾನಕ್ಕೆ ತಂದು ಬಲಗಾಲಿನಿಂದ ಮತ್ತೆ ಮುಂದುವರೆಸಬೇಕು. ಹೀಗೆ ಎರಡು ಬಾರಿ ಮಾಡಿದರೆ ಸಾಕು.
ಉಚಿತ ಪ್ರಸಾರಿತ ಕೋನಾಸನಂ
ಮೊದಲು ಕುರ್ಚಿಯೊಂದನ್ನು ಸೂಕ್ತವಾದ ಸ್ಥಳದಲ್ಲಿ ಇಡಬೇಕು. ನಿಧಾನವಾಗಿ ಅದರ ಮೇಲೆ ಬಲ ಮೊಣಕೈಯನ್ನು ಇಡಬೇಕು. ನಂತರ ಎಡಗಾಲು ಹಾಗೂ ಎಡಗೈಯನ್ನು ನೇರವಾಗಿಡಿ. ನಂತರ ಎಡಗೈಯನ್ನು ಮೇಲಕ್ಕೆತ್ತಿ ಲಂಬಕೋನಾಕಾರದಲ್ಲಿ ಇಡಬೇಕು. ಬಲಗಾಲು ನೆಲದ ಮೇಲೆ ಇರಲಿ. ಈ ಆಸನದಲ್ಲಿ ಕನಿಷ್ಠ 30 ಸೆಕೆಂಡ್ ಇದ್ದು, ಮತ್ತೆ ಎಡ ಬದಿಯಲ್ಲಿ ಮಾಡಬೇಕು. ಹೀಗೆ ಮೂರು ಬಾರಿ ಮಾಡಿದರೆ ಸಾಕು.