ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ತನ್ನ ವಾರ್ಷಿಕ ವರದಿಯಲ್ಲಿ ವಿಶ್ವದ ವಾಸಯೋಗ್ಯ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಯುದ್ಧದಿಂದ ನಲುಗಿರುವ ಸಿರಿಯಾ ರಾಜಧಾನಿ ಡಮಾಸ್ಕಸ್ ಕನಿಷ್ಠ ವಾಸಯೋಗ್ಯ ನಗರವೆಂಬ ಅಪಖ್ಯಾತಿಗೆ ಗುರಿಯಾಗಿದೆ.
ಉತ್ತಮ ಮೂಲಭೂತ ಸೌಕರ್ಯ, ಆರೋಗ್ಯ, ಸಂಸ್ಕೃತಿ ಮತ್ತು ಮನೋರಂಜನೆ, ಸ್ಥಿರತೆ ಸೇರಿದಂತೆ ಹಲವು ಮಾನದಂಡಗಳನ್ನು ಇಟ್ಟುಕೊಂಡು ಸಮೀಕ್ಷೆ ನಡೆಸಲಾಗಿದ್ದು, ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಆಕ್ಲೆಂಡ್ ಈಗ 34ನೇ ಸ್ಥಾನ ಪಡೆದುಕೊಂಡಿದೆ.
ಇನ್ನುಳಿದಂತೆ ಡೆನ್ಮಾರ್ಕ್ ರಾಜಧಾನಿ ಕೋಪನ್ ಹೇಗನ್ 2ನೇ, ಸ್ವಿಜರ್ಲ್ಯಾಂಡ್ ನ ಜೂರಿಚ್ 3ನೇ, ಕೆನಡಾ 4ನೇ, ಕೆನಡಾದ ಮತ್ತೊಂದು ನಗರ ವ್ಯಾಂಕೋವರ್ 5ನೇ, ಜಿನೇವಾ 6ನೇ, ಜರ್ಮನಿಯ ಫ್ರಾಂಕ್ಫರ್ಟ್ 7ನೇ, ಕೆನಡಾದ ಟೊರೆಂಟೋ 8ನೇ, ನೆದರ್ಲ್ಯಾಂಡ್ ನ ಆಂಸ್ಟರ್ಡ್ಯಾಮ್ 9ನೇ ಹಾಗೂ ಜಪಾನಿನ ಒಸಾಕ ಮತ್ತು ಆಸ್ಟ್ರೇಲಿಯಾದ ಮೆಲ್ಬೋರ್ನ್ 10ನೇ ಸ್ಥಾನ ಪಡೆದುಕೊಂಡಿವೆ.