ಅತ್ತಿಮರದ ಹಣ್ಣು, ಎಲೆ, ತೊಗಟೆ, ಬೇರು ಹೀಗೆ ಅದರ ಎಲ್ಲ ಭಾಗವೂ ಔಷಧೀಯ ಗುಣಗಳನ್ನು ಹೊಂದಿವೆ. ಇದರ ಕೆಲವು ಔಷಧೀಯ ಗುಣಗಳು ಹೀಗಿವೆ.
ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಅಪಕ್ವವಾದ ಅತ್ತಿಹಣ್ಣನ್ನು ಜೇನುತುಪ್ಪದೊಡನೆ ಬೆರೆಸಿ 15 ದಿನಗಳವರೆಗೆ ಸೇವಿಸಬೇಕು.
ಅತ್ತಿಹಣ್ಣಿನ ರಸವನ್ನು ಎರಡು ವರ್ಷಗಳ ತನಕ ಒಂದು ಚಮಚೆಯಷ್ಟು ಸತತವಾಗಿ ಕುಡಿಯುತ್ತ ಬಂದರೆ ಸಿಹಿಮೂತ್ರ ಮರುಕಳಿಸುವುದಿಲ್ಲ.
ಕಾಮಾಲೆ, ಬಾಯಿಹುಣ್ಣು, ಗರ್ಭಪಾತದ ತೊಂದರೆಗೆ ಅತ್ತಿಹಣ್ಣಿನ ಜೊತೆಗೆ ಜೇನುತುಪ್ಪ, ಸ್ವಲ್ಪ ಉಪ್ಪು ಮಿಶ್ರಣ ಮಾಡಿ ಸೇವಿಸಬೇಕು.
ಅತ್ತಿ ಎಲೆಗಳನ್ನು ಜಗಿಯುವುದರಿಂದ ಬಾಯಿಹುಣ್ಣು ಮತ್ತು ಬಾಯಿ ದುರ್ವಾಸನೆ ಮಾಯವಾಗುತ್ತದೆ.
ಅತ್ತಿ ಎಲೆಗಳನ್ನು ಹಾಲಿನಲ್ಲಿ ನೆನೆಸಿ ಜೇನುತುಪ್ಪದೊಡನೆ ಸೇವಿಸಿದರೆ ಸಿಡುಬಿನ ಕಲೆಗಳು ಮಾಯವಾಗುತ್ತವೆ.
ಅತ್ತಿ ಮರದ ತೊಗಟೆಯನ್ನು ಒಣಗಿಸಿ ಪುಡಿಮಾಡಿ, ಹಾಗಲಕಾಯಿ ರಸದೊಂದಿಗೆ ಸೇವಿಸಿದರೆ ಸಿಹಿಮೂತ್ರ ರೋಗ ವಾಸಿಯಾಗುತ್ತದೆ.