ಜೀವನದಲ್ಲಿ ಸುಖ-ದುಃಖಗಳೆರಡೂ ಸರ್ವೇ ಸಾಮಾನ್ಯ. ಕೆಲವೊಮ್ಮೆ ನಮ್ಮ ಸಮಯ ಅತ್ಯಂತ ಮಂಗಳಕರವಾಗಿರುತ್ತದೆ. ಆದರೆ ಒಮ್ಮೊಮ್ಮೆ ಕೆಟ್ಟ ಸಮಯ ಕೂಡ ಬರಬಹುದು. ಜೀವನದಲ್ಲಿ ಕೆಟ್ಟ ಸಮಯ ಬರಬಾರದೆಂದೇ ಅನೇಕರು ನಿಯಮಿತವಾಗಿ ಪೂಜೆಯನ್ನು ಮಾಡುತ್ತಾರೆ, ವಿವಿಧ ರೀತಿಯ ಪರಿಹಾರಗಳನ್ನು ಕೂಡ ಮಾಡಿಸುತ್ತಾರೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಟ್ಟ ಸಮಯಗಳು ಬರುವ ಮೊದಲು ಕೆಲವು ಸಂಕೇತಗಳು ನಮಗೆ ದೊರೆಯುತ್ತವೆ. ಈ ಸಂಕೇತಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಂಡರೆ ಕೆಟ್ಟ ದಿನಗಳನ್ನು ದಿಟ್ಟವಾಗಿ ಎದುರಿಸಬಹುದು.
ಹೆಚ್ಚಿನ ಜನರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ಪೂಜೆ, ಆರತಿ ಮಾಡುತ್ತಾರೆ. ಆರತಿ ಮಾಡುವಾಗ ದೀಪ ನಂದಿದರೆ ಅದು ಕೆಟ್ಟ ಸಮಯ ಹತ್ತಿರದಲ್ಲಿದೆ ಎಂಬುದನ್ನು ಸೂಚಿಸುತ್ತದೆ.
ಮನೆಯಲ್ಲಿ ತುಳಸಿ ಗಿಡವು ಹಸಿರಾಗಿದ್ದರೆ ಕುಟುಂಬದಲ್ಲಿ ಹೆಚ್ಚು ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ ಎಂಬ ಸಂಕೇತ. ತುಳಸಿ ಗಿಡವು ಇದ್ದಕ್ಕಿದ್ದಂತೆ ಒಣಗಲು ಪ್ರಾರಂಭಿಸಿದರೆ ಶೀಘ್ರದಲ್ಲೇ ಕೆಟ್ಟ ದಿನಗಳು ಪ್ರಾರಂಭವಾಗಲಿವೆ ಎಂದರ್ಥ.
ಜ್ಯೋತಿಷ್ಯದಲ್ಲಿ, ಚಿನ್ನದ ವಸ್ತುಗಳನ್ನು ಕಳೆದುಕೊಳ್ಳುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಚಿನ್ನದ ವಸ್ತುಗಳು ಇದ್ದಕ್ಕಿದ್ದಂತೆ ಕಳೆದುಹೋದರೆ ಮನೆಯಲ್ಲಿ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತವೆ ಎಂದರ್ಥ.
ತುಪ್ಪವನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ತುಪ್ಪದ ಡಬ್ಬಿ ಇದ್ದಕ್ಕಿದ್ದಂತೆ ಕೈಯಿಂದ ಬಿದ್ದರೆ ಅದು ಕೂಡ ಕೆಟ್ಟ ಸಮಯದ ಸಂಕೇತ. ಈ ವಿಷಯವನ್ನು ನಿರ್ಲಕ್ಷಿಸಬಾರದು.
ಮನೆಗೆ ಇಲಿಗಳು ಬರುವುದು ಸಾಮಾನ್ಯ ಸಂಗತಿ. ಆದರೆ ಕಪ್ಪು ಇಲಿಗಳು ಏಕಾಏಕಿ ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸಿದರೆ ಅದು ಕೆಟ್ಟ ಸಮಯ ಪ್ರಾರಂಭವಾಗಲಿದೆ ಎಂಬುದರ ಸಂಕೇತವಾಗಿದೆ. ದೊಡ್ಡ ಬಿಕ್ಕಟ್ಟು ನಿಮಗಾಗಿ ಕಾಯುತ್ತಿರಬಹುದು.