ಈಗಂತೂ ಸೋಶಿಯಲ್ ಮೀಡಿಯಾ ಯುಗ…ಡಿಫರೆಂಟ್ ಆಗಿ ಏನಾದ್ರೂ ಮಾಡಿದ್ರೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. .ಅಂತೆಯೇ 2024 ರಲ್ಲಿ ಕೆಲವು ಸಾಂಗ್..ರೀಲ್ಸ್ ಗಳು ಭಾರಿ ಸೌಂಡ್ ಮಾಡಿತ್ತು. ಸೋಶಿಯಲ್ ಮೀಡಿಯಾದ ಪ್ರತಿಭೆಗಳು ಈ ಸಾಂಗ್ ಗಳಿಗೆ ರೀಲ್ಸ್ ಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು.
ಟ್ರೋಲ್ ಆಗುತ್ತೆ ಇದು ಟ್ರೋಲ್ ಆಗುತ್ತೆ…ಕರಿಮಣಿ ಮಾಲೀಕ ನೀನಲ್ಲ… ನಮ್ ಮನಸ್ಸು ನಮಗೆ ಒಳ್ಳೆದು ಮಾಡಿದ್ರೆ ಅಷ್ಟೇ..ಏನಂತೀರಾ..! ತೌಬ ತೌಬ..ಲಡ್ಡು ಮುತ್ಯಾ ಹಾಗೂ ಕುರ್ಚಿ ಮಡಕಪತೆಟ್ಟು ರೀಲ್ಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕರಿಮಣಿ ಮಾಲೀಕ ನೀನಲ್ಲ’ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ ಉಪ್ಪಿ ಹಳೇ ಸಾಂಗ್..!
ಏನಿಲ್ಲ.. ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ.. ಏನೇನಿಲ್ಲ..ಈ ಹಾಡು ಕೇಳದವರೇ ಇಲ್ಲ. ಸೂಪರ್ ಸ್ಟಾರ್ ಅಭಿನಯದ ಉಪೇಂದ್ರ ಸಿನಿಮಾದ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿತ್ತು. ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ.. ಏನೇನಿಲ್ಲ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಎಲ್ಲರೂ ತಮ್ಮದೇ ಆದ ಶೈಲಿಯಲ್ಲಿ ರೀಲ್ಸ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು.
ಪ್ರೇಮ, ರವೀನಾ ಟಂಡನ್ ಹಾಗೂ ದಾಮಿನಿ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದರು. ಈ ಸಿನಿಮಾದ ವಿಶೇಷ ಅಂದರೆ ಒಬ್ಬೊಬ್ಬ ನಾಯಕಿಗೆ ಒಂದು ಹಾಡು ಇಡಲಾಗಿತ್ತು. ಪ್ರೇಮಾ ಹಾಗೂ ಉಪೇಂದ್ರ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಉಪೇಂದ್ರ’ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಬಳಿಕ ಈಗ ಈ ಹಾಡು ಭಾರಿ ಟ್ರೆಂಡಿಂಗ್ ನಲ್ಲಿತ್ತು.