ಇದು ಡಿಜಿಟಲ್ ಯುಗ. ಈಗ ಮೊದಲಿನಂತೆ ಸಿಲಿಂಡರ್ ಬುಕ್ ಮಾಡಲು ಪರದಾಡಬೇಕಾಗಿಲ್ಲ. ಮನೆಯಲ್ಲೇ ಕುಳಿತು ಅರೆ ಕ್ಷಣದಲ್ಲಿ ಸಿಲಿಂಡರ್ ಬುಕ್ ಮಾಡಬಹುದು. ಇದಕ್ಕೆ ಇಂಡೇನ್ ಸಿಲಿಂಡರ್ ಕಂಪನಿ ಕೂಡ ಹೊರತಾಗಿಲ್ಲ. ಇಂಡೇನ್ ಗ್ಯಾಸ್ ಸಿಲಿಂಡರ್ ಹೊಂದಿರುವವರು ಮನೆಯಲ್ಲೇ ಕುಳಿತು ಸುಲಭವಾಗಿ ಸಿಲಿಂಡರ್ ಬುಕ್ ಮಾಡಬಹುದು. ಕಂಪನಿ ಟ್ವೀಟರ್ ಮೂಲಕ ವಿಧಾನಗಳ ಬಗ್ಗೆ ವಿವರಿಸಿದೆ.
ವಾಟ್ಸಾಪ್ ಮೂಲಕ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸುವ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ವಾಟ್ಸಾಪ್ ಚಾಟ್‌ನಲ್ಲಿ REFILL ಎಂದು ಟೈಪ್ ಮಾಡಿ,ಅದನ್ನು 7588888824 ಸಂಖ್ಯೆಗೆ ಕಳುಹಿಸಬೇಕು.
ಇಂಡೇನ್ ಗ್ಯಾಸ್ ಪೂರೈಕೆದಾರರಿಂದ ರೀಫಿಲ್ ಬಯಸಿದ್ದರೆ, ಕೇವಲ ಮಿಸ್ಡ್ ಕಾಲ್‌ನಲ್ಲಿ ಗ್ಯಾಸ್ ರೀಫಿಲ್ ಮಾಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8454955555 ಗೆ ಮಿಸ್ಡ್ ಕಾಲ್ ನೀಡಬೇಕು.
ಎಸ್ಎಂಎಸ್ ಮೂಲಕವೂ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ಇದಕ್ಕಾಗಿ <16-ಅಂಕಿಯ ಇಂಡೇನ್ ಐಡಿ> <ಆಧಾರ್ ನ ಕೊನೆಯ ನಾಲ್ಕು ಅಂಕೆ> ಟೈಪ್ ಮಾಡಿ 7718955555 ಗೆ ಕಳುಹಿಸಬೇಕು.
ಇಂಡೇನ್ ಆಪ್ ಮೂಲಕವೂ ಬುಕ್ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್ ನಿಂದ ಇಂಡೇನ್ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅದ್ರಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ಗ್ಯಾಸ್ ಬುಕ್ ಮಾಡಬಹುದು.
ಗ್ಯಾಸ್ ಸಿಲಿಂಡರನ್ನು ಪೇಟಿಎಂ ಮೂಲಕ ಬುಕ್ ಮಾಡಿದರೆ 900 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಕ್ಕಾಗಿ ಪೇಟಿಎಂನ ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಷನ್ ಗೆ ಲಾಗಿನ್ ಆಗಬೇಕು.