alex Certify ಗ್ರಂಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ‘ಆಸನ’ಗಳಿವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಂಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ‘ಆಸನ’ಗಳಿವು

Halasana - International Yoga Day: Asanas For Women To Stay Youthful, Happy And Healthy | The Economic Times

ಯೋಗ ಆರೋಗ್ಯ ಶಾಸ್ತ್ರದಲ್ಲಿ ‘ಚಕ್ರಗಳು’ ಎಂದು ವಿಜ್ಞಾನ-ವೈದ್ಯಕೀಯ ಭಾಷೆಯಲ್ಲಿ ‘ಗ್ರಂಥಿ-ಗ್ಲಾಂಡ್ಸ್ ಗಳೆಂದು ಕರೆಯಲ್ಪಡುವ 7 ಶಕ್ತಿಕೇಂದ್ರಗಳು ಪ್ರತಿಯೊಬ್ಬ ಮಾನವ ಜೀವಿಯಲ್ಲಿ ಇರುತ್ತದೆ.

ಮಾನವ ಶರೀರ ರಚನಾ ಶಾಸ್ತ್ರದಲ್ಲಿ ಅತ್ಯಂತ ಮಹತ್ವದ್ದೆನಿಸುವ ಈ ಚಕ್ರಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಳ್ಳೋಣ.

ಚಕ್ರಗಳು : ಮೂಲಾಧಾರ, ಸ್ವಾದಿಷ್ಠಾನ, ಮಣಿಪುರ, ಅನಾಹತ, ವಿಶುದ್ಧ, ಆಜ್ಞಾ, ಸಹಸ್ರಾರ

1. ಮೂಲಾಧಾರ ಚಕ್ರ ಅಥವಾ ಅಡ್ರಿನಲ್ ಗ್ರಂಥಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಾಡಬೇಕಾದ ಕೆಲವು ಸರಳ ಯೋಗಾಸನಗಳೆಂದರೆ ಸೂರ್ಯ ನಮಸ್ಕಾರ, ಸರ್ವಂಗಾಸನ, ವಕ್ರಾಸನ, ಮರ್ಕಟಾಸನ, ಪವನ ಮುಕ್ತಾಸನ, ಮತ್ಸ್ಯಾಸನ. ಇನ್ನು ಮುಖ್ಯ ಕಾರ್ಯಗಳು

1. ಶಕ್ತಿ ಮತ್ತು ಆಧಾರ ನೀಡುತ್ತವೆ. 2. ವಂಶಾಭಿವೃದ್ಧಿ ವಿಸರ್ಜನ ಕ್ರಿಯೆ. 3. ಪಚನ ಕ್ರಿಯೆ. 4. ಹೃದಯ ಮತ್ತು ಶ್ವಾಸಕೋಶಗಳ ಪ್ರಚೋದನೆ. 5. ಸ್ವರ, ಸಕ್ಷಮತೆ ಕಾರ್ಯ. 6. ಬುದ್ಧಿ, ಜ್ಞಾನ, ಮಾರ್ಗದರ್ಶನ. 7. ಸಮತ್ವತೆ, ಸ್ಥಿತಪ್ರಜ್ಞತೆ, ಉದಾತ್ತೆ.
[ಕಪಾಲಭಾತಿ, ಉಜ್ಜಾಯಿ, ಭಸ್ತ್ರಿಕಾ ಮತ್ತು ವಿಭಾಗೀಯ (ಉದರ-ಉರ-ಗ್ರೀವ) ಪ್ರಾಣಾಯಾಮಗಳನ್ನು ಮಾಡಬೇಕು.] ಪ್ರತಿ ಗಂಟೆಗೊಂದು ಲೋಟ ನೀರನ್ನು ಕುಡಿಯುವ ಅಭ್ಯಾಸ ಉತ್ತಮ.

2. ಸ್ವಾದಿಷ್ಠಾನ ಚಕ್ರ ಅಥವಾ ಗೋನಾಡ್ಸ್ ಗ್ರಂಥಿಗಳ ಕಾರ್ಯಕ್ಷಮತೆಗಾಗಿ ಸೂರ್ಯ ನಮಸ್ಕಾರ, ಸರ್ವಂಗಾಸನ, ಹಲಾಸನ, ಪಶ್ಚಿಮೋತ್ತಾಸನ, ಮರ್ಕಟಾಸನ, ಶಲಭಾಸನ ಪ್ರಾಣಾಯಾಮಗಳು : ಕಪಾಲಭಾತಿ, ಉಜ್ಜಾಯಿ, ಭಸ್ತ್ರಿಕಾ ಮತ್ತು ವಿಭಾಗೀಯ (ಉದರ-ಉರ-ಗ್ರೀವ) ಪ್ರಾಣಾಯಾಮಗಳನ್ನು ಮಾಡಬೇಕು.

3. ಮಣಿಪುರ ಚಕ್ರ ಅಥವಾ ಪ್ಯಾಂಕ್ರಿಯಾಸ್ ಗ್ರಂಥಿಯ ಕಾರ್ಯಕ್ಷಮತೆಗಾಗಿ ಸೂರ್ಯ ನಮಸ್ಕಾರ ತ್ರಿಕೋನಾಸನ, ಪರಿವೃತ್ತ ತ್ರಿಕೋನಾಸನ, ವಕ್ರಾಸನ, ಅರ್ಧಮತ್ಸೆಂದ್ರಾಸನ, ಭುಜಂಗಾಸನ, ಧನುರಾಸನ ಪ್ರಾಣಾಯಾಮಗಳು : ಉಜ್ಜಾಯಿ, ಭಸ್ತ್ರಿಕಾ, ಓಂಕಾರ, ಧ್ಯಾನ

4. ಅನಾಹತ ಚಕ್ರ ಅಥವಾ ಥೈಮಸ್ ಗ್ರಂಥಿ ಆಸನಗಳು : ಸೂರ್ಯ ನಮಸ್ಕಾರ, ತ್ರಿಕೋನಾಸನ, ಪರಿವೃತ್ತ ತ್ರಿಕೋನಾಸನ, ಸರ್ವಂಗಾಸನ, ಶೀರ್ಷಾಸನ, ಅರ್ಧ ಮತ್ಸೆಂದ್ರಾಸನ, ಅರ್ಧ ಚಂದ್ರಾಸನ, ಧನುರಾಸನ, ಚಕ್ರಾಸನ. ಪ್ರಾಣಾಯಾಮಗಳು : ಕಪಾಲಭಾತಿ, ಉಜ್ಜಾಯಿ, ಭಸ್ತ್ರಿಕಾ, ಭ್ರಾಮರಿ, ನಾಡಿಶೋಧನ, ಓಂಕಾರ ಮಂತ್ರ ಜಪ.

5. ವಿಶುದ್ಧ ಚಕ್ರ – ಥೈರಾಯಿಡ್ ಗ್ರಂಥಿ ಆಸನಗಳು : ಸೂರ್ಯ ನಮಸ್ಕಾರ, ಭುಜಂಗಾಸನ, ಧನುರಾಸನ, ಹಲಾಸನ, ಶೀರ್ಷಾಸನ, ಕುತ್ತಿಗೆ ವೃತ್ತಾಕಾರದಲ್ಲಿ ಚಲನೆ ಪ್ರಾಣಾಯಾಮಗಳು : ಸಿಂಹಾಸನ, ಭಸ್ತ್ರಿಕಾ, ಭ್ರಾಮರಿ, ಉಜ್ಜಾಯಿ

6. ಆಜ್ಞಾ ಚಕ್ರ – ಪಿಟ್ಯುಟರಿ ಗ್ರಂಥಿ ಆಸನಗಳು : ಸೂರ್ಯನಮಸ್ಕಾರ, ಸರ್ವಂಗಾಸನ, ಶೀರ್ಷಾಸನ ಪ್ರಾಣಾಯಾಮಗಳು : ಕಪಾಲಭಾತಿ, ಭ್ರಾಮರಿ ಮತ್ತು ಓಂಕಾರ ಜಪ

7. ಸಹಸ್ರಾರ ಚಕ್ರ – ಪೀನಿಯಲ್ ಗ್ಲಾಂಡ್ ಆಸನಗಳು : ಸೂರ್ಯನಮಸ್ಕಾರ, ಸರ್ವಂಗಾಸನ, ಶೀರ್ಷಾಸನ ಪ್ರಾಣಾಯಾಮಗಳು : ಕಪಾಲಭಾತಿ, ಭ್ರಾಮರಿ ಮತ್ತು ಓಂಕಾರ ಜಪ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...