ವಿದ್ಯಾರ್ಥಿಗಳಲ್ಲಿ ಕೆಲವರು ವಿಶೇಷವಾಗಿ ಪರೀಕ್ಷೆಯ ಸಮಯದಲ್ಲಿ ಅಡ್ಡದಾರಿ ಹಿಡಿಯುವುದು ಸಾಮಾನ್ಯ ಅಭ್ಯಾಸವಾಗಿದೆ. ಇದನ್ನು ತಡೆಗಟ್ಟಲು, ಲೆಗಾಜ್ಪಿ ನಗರದ ಒಂದು ಕಾಲೇಜಿನಲ್ಲಿ ಹೊಸ ಪ್ರಯೋಗ ನಡೆದಿದೆ.
ಪರೀಕ್ಷೆ ಬರೆಯುವಾಗ ವಿದ್ಯಾರ್ಥಿಗಳು ಇತರರ ಉತ್ತರ ಪತ್ರಿಕೆಗಳನ್ನು ಇಣುಕಿ ನೋಡುವುದನ್ನು ತಡೆಯಲು ಮಾಸ್ಕ್ ಧರಿಸಲು ಕೇಳಲಾಗಿದೆ.
ಈ ‘ವಂಚನೆ ವಿರೋಧಿʼ ಟೋಪಿ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅನೇಕರು ತಮ್ಮ ಮೆಚ್ಚಿನ ಕಾರ್ಟೂನ್ ಪಾತ್ರಗಳ ಮುಖಗಳನ್ನು ಧರಿಸಿರುವುದು ಕಂಡುಬಂದರೆ, ಇತರರು ಕಾರ್ಡ್ ಬೋರ್ಡ್ ನಿಂದ ಮನೆಯಲ್ಲಿ ತಯಾರಿಸಿದ ಮಾಸ್ಕ್ ಮಾಡಿಕೊಂಡು ಬಂದಿದ್ದರು. ಮೊಟ್ಟೆ ಬಾಕ್ಸ್ ಮತ್ತು ಇತರ ಮರುಬಳಕೆಯ ವಸ್ತುಗಳನ್ನು ಬಳಸಿರುವುದನ್ನೂ ಸಹ ಕಾಣಬಹುದು.
ಪ್ರೊಫೆಸರ್ ಮೇರಿ ಜಾಯ್ ಈ ವಿಷಯ ಜಾಲತಾಣದಲ್ಲಿ ಹಂಚಿಕೊಂಡು, ಮಧ್ಯಾವಧಿಯ ಪರೀಕ್ಷೆಗಳಿಗೆ ಮಾಸ್ಕ್ ಸಿದ್ಧಪಡಿಸುವಂತೆ ವಿದ್ಯಾರ್ಥಿಗಳಿಗೆ
ಕೇಳಿಕೊಳ್ಳಲಾಗಿತ್ತು. ಅಲ್ಲದೆ, ಸಾಧ್ಯವಾದಷ್ಟು ಸೃಜನಶೀಲರಾಗಿ ಮಾಸ್ಕ್ ಸಿದ್ಧಪಡಿಸಲು ಅವಕಾಶ ನೀಡಲಾಗಿತ್ತು.
ಪರೀಕ್ಷೆ ದಿನ ವಿದ್ಯಾರ್ಥಿಗಳು ಧರಿಸಿ ಬಂದಿದ್ದ ಮಾಸ್ಕ್ ಚಿತ್ರಗಳನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಥೈಲ್ಯಾಂಡ್‌ನಲ್ಲಿ ಬಳಸಿದ ತಂತ್ರದಿಂದ ಅವರು ಸ್ಫೂರ್ತಿ ಪಡೆದಿದ್ದರು. ಬ್ಯಾಂಕಾಕ್‌ನಲ್ಲಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು “ಇಯರ್ ಫ್ಲಾಪ್ಸ್” ಧರಿಸಿ ಪರೀಕ್ಷಾ ಪತ್ರಿಕೆಗಳನ್ನು ತೆಗೆದುಕೊಂಡಿದ್ದರು. ಅವರ ತಲೆಯ ಎರಡೂ ಬದಿಗೆ ಕಾಗದದ ಹಾಳೆಗಳಿದ್ದವು.
ಸೆಪ್ಟೆಂಬರ್‌ನಲ್ಲಿ ಮೆಕ್ಸಿಕೊದ ಶಿಕ್ಷಕರೊಬ್ಬರು ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳ ತಲೆಯ ಮೇಲೆ ರಟ್ಟಿನ ಪೆಟ್ಟಿಗೆಗಳನ್ನು ಧರಿಸುವಂತೆ ಒತ್ತಾಯಿಸುವ ಮೂಲಕ ಆಕ್ರೋಶವನ್ನು ಎದುರಿಸಿದ್ದರು. ಕೋಪಗೊಂಡ ಪೋಷಕರು ಆ ಶಿಕ್ಷಕನನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದರು.