ದೇಶದ ಒಂಬತ್ತು ನಗರಗಳನ್ನು ಸಂಪರ್ಕಿಸುವ ನಾಲ್ಕು ಹೊಸ ಬುಲೆಟ್ ರೈಲುಗಳ ಕಾರಿಡಾರ್‌ಗಳ ಅಭಿವೃದ್ಧಿಗೆ ಭಾರತೀಯ ರೈಲ್ವೇ ಚಿಂತನೆ ನಡೆಸಿದೆ. ಅದಾಗಲೇ ಯೋಜನಾ ಹಂತದಲ್ಲಿರುವ ಎಂಟು ಹೈ-ಸ್ಪೀಡ್ ರೈಲುಗಳ ಕಾರಿಡಾರ್‌ಗಳ ಜೊತೆಗೆ ಈ ನಾಲ್ಕು ಮಾರ್ಗಗಳನ್ನು ಸೇರಿಸಲಾಗುವುದು.
ಬೆಂಗಳೂರು-ಹೈದರಾಬಾದ್ ನಡುವೆ 618 ಕಿಮೀ ಕಾರಿಡಾರ್, ನಾಗ್ಪುರ-ವಾರಣಾಸಿ ನಡುವೆ 855 ಕಿಮೀ, ಪಟನಾ-ಗುವಾಹಾಟಿ ನಡುವಿನ 850-ಕಿಮೀ, ಮತ್ತು ಅಮೃತಸರ-ಪಠಾಣ್‌ಕೋಟ್-ಜಮ್ಮು ನಡುವಿನ 190ಕಿಮೀಗಳ ಮಾರ್ಗಗಳಲ್ಲಿ ಈ ಹೊಸ ಮಾರ್ಗಗಳನ್ನು ತರಲು ಉದ್ದೇಶಿಸಲಾಗಿದೆ.
ಚರ್ಮದ ಆರೋಗ್ಯಕ್ಕೆ ರಾಮಬಾಣ ಈ ಐದು ಸೊಪ್ಪುಗಳು
ದೇಶದ ಮೊದಲ ಹೈಸ್ಪೀಡ್ ರೈಲು ಕಾರಿಡಾರ್ ಮುಂಬಯಿ-ಅಹಮದಾಬಾದ್ ನಡುವಿನ 508ಕಿಮೀಗಳ ಮಾರ್ಗದಲ್ಲಿ ಅಭಿವೃದ್ಧಿಯಾಗುತ್ತಿದ್ದು, 2026-27ರ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆ ಇದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದಕ್ಕಾಗಿ ಶಿಂಕಾನ್ಸೆನ್‌ನ ಇ5 ಸೀರೀಸ್ ರೈಲುಗಳ ಚಿತ್ರಗಳನ್ನು ಜಪಾನ್ ಬಿಡುಗಡೆ ಮಾಡಿದ್ದು, ಇವುಗಳನ್ನೇ ಬುಲೆಟ್ ರೈಲುಗಳನ್ನಾಗಿ ಮಾರ್ಪಾಡು ಮಾಡಿ ಮುಂಬಯಿ-ಅಹಮದಾಬಾದ್ ನಡುವೆ ಓಡಿಸಲಾಗುವುದು.
2023ರ ವೇಳೆಗೆ ಮುಕ್ತಾಯವಾಗಬೇಕಿದ್ದ ಯೋಜನೆಯು ಮಹಾರಾಷ್ಟ್ರದಲ್ಲಿ ಭೂಸ್ವಾಧೀನದ ಸಮಸ್ಯೆ ಇರುವ ಕಾರಣದಿಂದ ತಡವಾಗಿದೆ.
ಅನುಮೋದಿಸಲ್ಪಟ್ಟಿರುವ ಹೈಸ್ಪೀಡ್ ರೈಲು ಕಾರಿಡಾರುಗಳು
* ಮುಂಬಯಿ-ಅಹಮದಾಬಾದ್
*ಮೈಸೂರು-ಚೆನ್ನೈ (435 ಕಿಮೀ)
* ದೆಹಲಿ-ವಾರಣಾಸಿ ನಡುವಿನ 958 ಕಿಮೀ ಮಾರ್ಗ
* ನಾಗ್ಪುರ-ಮುಂಬಯಿ (736 ಕಿಮೀ)
* ದೆಹಲಿ-ಅಹಮದಾಬಾದ್ (886ಕಿಮೀ)
* ದೆಹಲಿ-ಅಮೃತಸರ (480 ಕಿಮೀ)
* ಮುಂಬಯಿ-ಹೈದರಾಬಾದ್ (711 ಕಿಮೀ)
* ವಾರಣಾಸಿ-ಹೌರಾ (760 ಕಿಮೀ)