alex Certify ಹೊಟ್ಟೆ ʼಬೊಜ್ಜುʼ ಕಡಿಮೆ ಮಾಡಲು ಸಹಾಯಕ ಈ 6 ಬಗೆಯ ಪಾನೀಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ʼಬೊಜ್ಜುʼ ಕಡಿಮೆ ಮಾಡಲು ಸಹಾಯಕ ಈ 6 ಬಗೆಯ ಪಾನೀಯ

ಬಹುತೇಕ ಎಲ್ಲರಿಗೂ ಈಗ ಬೊಜ್ಜಿನ ಸಮಸ್ಯೆ. ಅದರಲ್ಲೂ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಹೇಗೆ ಅನ್ನೋದು ಬಹುದೊಡ್ಡ ತಲೆನೋವು. ನಮ್ಮ ಸೌಂದರ್ಯಕ್ಕೆ ಕುತ್ತು ತರುವ ಜೊತೆಗೆ ಆರೋಗ್ಯವನ್ನೂ ಹಾಳು ಮಾಡುವ ಹೊಟ್ಟೆಯ ಬೊಜ್ಜನ್ನು ನೀವು ಸುಲಭವಾಗಿ ಕರಗಿಸಬಹುದು.

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಆಹಾರ ಕ್ರಮ ಸರಿಯಾಗಿರಬೇಕು. ನಿಮ್ಮ ಜೀರ್ಣಕ್ರಿಯೆ ಕೂಡ ಸರಾಗವಾಗಿರಬೇಕು. ಇದಕ್ಕಾಗಿ ನೀವು ಸುಲಭವಾಗಿ ಮಾಡಿಕೊಳ್ಳಬಹುದಾದ ಪಾನೀಯಗಳಿವೆ.

ಗ್ರೀನ್‌ ಟೀ : ನೀವು ದಿನಕ್ಕೆ ಎರಡು ಬಾರಿ ಗ್ರೀನ್‌ ಟೀ ಸೇವಿಸಬೇಕು. ಬೆಳಗ್ಗೆ ಮತ್ತು ಸಂಜೆ ಅರ್ಧರ್ಧ ಕಪ್‌ ಗ್ರೀನ್‌ ಟೀ ಕುಡಿದರೆ ಇದು ನಿಮ್ಮ ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿರುವ ವಸ್ತುಗಳು ನಿಮ್ಮ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಕೋಶಗಳಿಂದ ಕೊಬ್ಬನ್ನು ತೆಗೆದುಹಾಕುತ್ತವೆ.

ಜೇನುತುಪ್ಪ ಮತ್ತು ದಾಲ್ಚಿನಿ : ದಾಲ್ಚಿನ್ನಿ ನಿಮ್ಮ ದೇಹದ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಬೆಳಿಗ್ಗೆ ಬಿಸಿ ನೀರಿಗೆ 1 ಚಮಚ ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿಯನ್ನು ಸೇರಿಸಿಕೊಂಡು ಕುಡಿಯಿರಿ. ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ.

ಆಪಲ್ ಸೈಡರ್ ವಿನಿಗರ್: ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಈ ವಿನೆಗರ್ ನಿಮ್ಮ ಹೊಟ್ಟೆಯಲ್ಲಿ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಹಾಕಿಕೊಂಡು ಕುಡಿಯಿರಿ, ಅದಕ್ಕೆ ಸ್ವಲ್ಪ ನಿಂಬೆ ರಸವನ್ನೂ ಸೇರಿಸಬಹುದು.

ಅನಾನಸ್‌ ಹಣ್ಣಿನ ಜ್ಯೂಸ್‌ : ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಅನಾನಸ್ ರಸವು ತುಂಬಾ ಪರಿಣಾಮಕಾರಿಯಾಗಿದೆ. ವಾಸ್ತವವಾಗಿ ಇದು ಬ್ರೋಮೆಲಿನ್ ಎಂಬ ಪ್ರಮುಖ ಕಿಣ್ವವನ್ನು ಹೊಂದಿರುತ್ತದೆ. ಅದು ನಿಮ್ಮ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಹೊಟ್ಟೆಯ ಕೊಬ್ಬನ್ನು ನಿವಾರಿಸುತ್ತದೆ.

ಪುದೀನಾ ರಸ : ಪುದೀನಾ ರಸ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅನಾವಶ್ಯಕ ಬೊಜ್ಜು ಕರಗಿ ಹೋಗುತ್ತದೆ.

ಓಮದ ಕಷಾಯ : ಓಮವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ದೂರವಾಗುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸಬಲ್ಲ ಸಾಮರ್ಥ್ಯವೂ ಓಮದ ಕಷಾಯಕ್ಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...