ದೇಶದಲ್ಲಿ ಇಂಧನ ಬೆಲೆಗಳು ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿದ್ದು, ಅನೇಕ ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆಯು 100 ರೂ.ಗಿಂತ ಹೆಚ್ಚಾಗಿದೆ.
ಇದೇ ವೇಳೆ, ಬರೀ ಪೆಟ್ರೋಲ್/ಡೀಸೆಲ್‌ಗಳು ಮಾತ್ರವಲ್ಲದೇ, ಅಗತ್ಯವಾಗಿ ಬೇಕಾದ ಇತರೆ ವಸ್ತುಗಳ ಬೆಲೆಯೂ ಏರಿಕೆ ಕಂಡಿದ್ದು, ನಿಮ್ಮ ಮಾಸಿಕ ಖರ್ಚನ್ನು ಪ್ಲಾನ್ ಮಾಡುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ:
1. ಅಗತ್ಯ ವಸ್ತುಗಳಾದ ಅಡುಗೆ ಎಣ್ಣೆಗಳಾದ ಸಾಸಿವೆ, ಕಡ್ಲೇಕಾಯಿ ಹಾಗೂ ಸೋಯಾಬೀನ್ ಎಣ್ಣೆ ಸೇರಿದಂತೆ ಅನೇಕ ತೈಲಗಳ ಬೆಲೆಯಲ್ಲಿ ಏರಿಕೆಯಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಇವುಗಳ ಬೆಲೆ ದುಪ್ಪಟ್ಟಾಗಿದೆ.
ಮಕ್ಕಳಿಗೆ ರೆಮ್ ಡೆಸಿವಿರ್ ಬೇಡ, 5 ವರ್ಷದೊಳಗಿನವರಿಗೆ ಮಾಸ್ಕ್ ಬೇಕಿಲ್ಲ: ಮಕ್ಕಳ ಚಿಕಿತ್ಸೆಗೆ ಮಾರ್ಗಸೂಚಿ
ಕಳೆದ ವರ್ಷ ಮೇನಲ್ಲಿ 90-100 ರೂ.ಗಳಷ್ಟಿದ್ದ ಅಡುಗೆ ಎಣ್ಣೆಯ ಬೆಲೆಯು ಈಗ 180-190 ರೂಪಾಯಿ/ಲೀಟರ್‌ನಷ್ಟಿದೆ.
ಇದೇ ವೇಳೆ ಅಡುಗೆ ಎಣ್ಣೆ ಮೇಲಿನ ಆಮದಿನ ಮೇಲಿನ ಸುಂಕವನ್ನು ತಗ್ಗಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಆ ಮೂಲಕವಾದರೂ ದೇಶವಾಸಿಗಳಿಗೆ ಕೊಂಚ ರಿಲೀಫ್ ಸಿಗುವ ನಿರೀಕ್ಷೆಯಿದೆ.
2. ಪೆಟ್ರೋಲ್/ಡೀಸೆಲ್ ಬೆಲೆಗಳಲ್ಲಿ ಏರಿಕೆಯಾದ ಕಾರಣದಿಂದ ತರಕಾರಿಗಳು ಹಾಗೂ ಹಣ್ಣುಗಳನ್ನು ಫಾರಂಗಳಿಂದ ಮಂಡಿಗೆ ಸಾಗಾಟ ಮಾಡುವ ವೆಚ್ಚದಲ್ಲೂ ಏರಿಕೆಯಾಗಲಿದೆ. ಪರಿಣಾಮವಾಗಿ, ತರಕಾರಿ, ಹಣ್ಣುಗಳು ಹಾಗೂ ಬೇಗನೇ ಬಳಕೆ ಮಾಡಬೇಕಾದ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ನಾಳೆ ನಡೆಯಬೇಕಿದ್ದ ಮೈಸೂರು ಪಾಲಿಕೆ ಮೇಯರ್ ಚುನಾವಣೆಗೆ ತಡೆ ನೀಡಿದ ಹೈಕೋರ್ಟ್…!
3. ಇಂಧನ ಬೆಲೆ ಏರಿಕೆಯಿಂದಾಗಿ ಬ್ಯಾಂಕುಗಳ ಬಡ್ಡಿ ದರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣದುಬ್ಬರದ ಏರಿಕೆಯ ಕಾರಣದಿಂದಾಗಿ ಬಡ್ಡಿ ದರಗಳನ್ನು ಏರಿಕೆ ಮಾಡಲು ರಿಸರ್ವ್ ಬ್ಯಾಂಕ್ ಚಿಂತನೆ ನಡೆಸುವ ಸಾಧ್ಯತೆ ಇದೆ.
ಇದರಿಂದಾಗಿ ಸಾಲ ಪಡೆಯುವವರಿಗೆ ಹೆಚ್ಚುವರಿ ಹೊರೆಯಾದರೆ, ಉಳಿತಾಯ ಇಡುವವರಿಗೆ ಸಿಗುವ ಬಡ್ಡಿ ದರದಲ್ಲಿ ಸ್ವಲ್ಪ ಏರಿಕೆ ಕಾಣುವ ಸಾಧ್ಯತೆ ಇದೆ.
4. ಇಂಧನ ಬೆಲೆಗಳ ಏರಿಕೆಯಿಂದ ನೇರವಾಗಿ ಸಾರಿಗೆ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಕಾರಣ, ಕೊರಿಯರ್ ಸೇವೆಗಳ ಬೆಲೆಗಳಲ್ಲೂ ಸಹ ಸಾಕಷ್ಟು ವ್ಯತ್ಯಯವಾಗುವ ಸಾಧ್ಯತೆಗಳಿವೆ.
5. ಕಚ್ಛಾ ತೈಲದ ಬೆಲೆ ಏರಿಕೆ ಕಾರಣ ದೇಶದ ಕರೆನ್ಸಿ ಮೇಲೆ ಪರಿಣಾಮ ಆಗುವ ಕಾರಣ ಆಮದು ಸುಂಕವೂ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.