ಕೂದಲು ನಮ್ಮ ಸೌಂದರ್ಯಕ್ಕೆ ಕಳಸವಿಟ್ಟಂತಿರುತ್ತದೆ. ಹಾಗಾಗಿ ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸರಿಯಾದ ಪೋಷಣೆಯ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಮತ್ತು ಅಕಾಲಿಕವಾಗಿ ಕೂದಲು ಬೆಳ್ಳಗಾಗುವ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಕೂದಲಿನ ಆರೈಕೆಯಲ್ಲಿ ಆಹಾರದ್ದೇ ಪ್ರಮುಖ ಪಾತ್ರ. ಅಂತಹ 5 ಸೂಪರ್ ಫುಡ್‌ಗಳು ಯಾವುವು ಅನ್ನೋದನ್ನು ನೋಡೋಣ. ಇವುಗಳ ಸೇವನೆಯಿಂದ ಕೂದಲು ಉದುರುವಿಕೆ ನಿಲ್ಲುತ್ತದೆ ಜೊತೆಗೆ ಕೂದಲು ಬಲವಾಗುತ್ತದೆ.
ಮೊಸರು – ಕೂದಲಿನ ಪೋಷಣೆಗೆ ಬೇಕಾದ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಅಗತ್ಯವನ್ನು ಪೂರೈಸಲು ಮೊಸರು ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಅದು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಲೆ ಬೋಳಾಗದಂತೆ ರಕ್ಷಿಸುತ್ತದೆ.
ವಾಲ್‌ನಟ್ಸ್ – ಇದು ಕೂಡ ಕೂದಲಿಗೆ ಪ್ರಯೋಜನಕಾರಿಯಾಗಿದೆ. ವಾಲ್‌ನಟ್‌ಗಳಲ್ಲಿ ವಿಟಮಿನ್ ಇ, ವಿಟಮಿನ್ ಬಿ, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್‌ಗಳಿವೆ. ಈ ಎಲ್ಲಾ ಅಂಶಗಳು ಕೂದಲನ್ನು ಬಲವಾಗಿ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ವಾಲ್‌ನಟ್ ಸೇವನೆಯಿಂದ ಕೂದಲು ಉದುರುವಿಕೆಯನ್ನೂ ತಡೆಯಬಹುದು.
ಅವಕಾಡೊ – ಆವಕಾಡೊ ಕೂಡ ಕೂದಲಿನ ಪೋಷಣೆಗೆ ಅತ್ಯಗತ್ಯ. ಫೋಲಿಕ್ ಆಮ್ಲ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲ ಈ ಹಣ್ಣು. ಅವಕಾಡೊ ಸೇವನೆಯಿಂದ ಕೂದಲು ಬಲಗೊಳ್ಳುತ್ತದೆ. ಕೂದಲು ಉದುರುವುದನ್ನೂ ಇದು ತಡೆಯುತ್ತದೆ.
ಸೊಪ್ಪು – ಪಾಲಕ್ ಮತ್ತು ಮೆಂತ್ಯದಂತಹ ಸೊಪ್ಪಿನಲ್ಲಿ ಫೈಬರ್, ಫೋಲೇಟ್, ಕಬ್ಬಿಣ ಮತ್ತು ವಿಟಮಿನ್ ಸಿ ಇರುತ್ತದೆ. ಇದು ಕೂದಲಿನ ಆರೋಗ್ಯಕ್ಕೆ ಅವಶ್ಯಕ. ಸೊಪ್ಪು-ತರಕಾರಿಗಳು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತವೆ.
ಮೊಟ್ಟೆ – ಮೊಟ್ಟೆಗಳ ಸೇವನೆಯಿಂದ ಕೂಡ ಕೂದಲಿಗೆ ಸಂಪೂರ್ಣ ಪೋಷಣೆ ಸಿಗುತ್ತದೆ. ಇವುಗಳಲ್ಲಿ ಪ್ರೋಟೀನ್, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಇರುತ್ತದೆ. ಇದು ಕೂದಲನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.