ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಆಕಾಶ ಮುಟ್ಟಿದೆ. ಇದ್ರಿಂದಾಗಿ ಜನರು ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸುತ್ತಿದ್ದಾರೆ. ಸಿಎನ್‌ಜಿ ಕಾರು ಖರೀದಿ ಸದ್ಯ ಪೆಟ್ರೋಲ್-ಡಿಸೇಲ್ ನಷ್ಟು ಪ್ರಭಾವ ಬೀರ್ತಿಲ್ಲ. ನೀವೂ ಸಿಎನ್‌ಜಿ ಕಾರು ಖರೀದಿಗೆ ಪ್ಲಾನ್ ಮಾಡಿದ್ದರೆ ಯಾವ ಕಾರಿನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಕೆಲ ಕಂಪನಿಗಳು ಉತ್ತಮ ಮೈಲೇಜ್ ನೀಡುವ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡ್ತಿವೆ.
ಕಡಿಮೆ ಬೆಲೆಗೆ ಲಭ್ಯವಿರುವ ಕಾರುಗಳಲ್ಲಿ ಮಾರುತಿ ಸುಜುಕಿಯ ಸೆಲೆರಿಯೊ ಒಂದು. ಸೆಲೆರಿಯೋದ ಸಿ ಎನ್ ಜಿ ಆವೃತ್ತಿ ಜನವರಿ 2022 ರಲ್ಲಿ ಮಾರುಕಟ್ಟೆಗೆ ಬಂದಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ 6.58 ಲಕ್ಷ ರೂಪಾಯಿ. ಈ ಕಾರು ಒಂದು ಕೆಜಿ ಸಿಎನ್‌ಜಿಯಲ್ಲಿ 35.60 ಕಿಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ.
ಇನ್ನು ಕಡಿಮೆ ಬೆಲೆಗೆ ಸಿಗ್ತಿರುವ ಇನ್ನೊಂದು ಕಾರು ಮಾರುತಿ ಸುಜುಕಿ ಆಲ್ಟೊ. ಮಾರುತಿಯ ಆಲ್ಟೊ ಕಾರು ಜನಪ್ರಿಯ ಕಾರಿನಲ್ಲೊಂದು. ಆಲ್ಟೊದ ಆರಂಭಿಕ ಬೆಲೆ ಸುಮಾರು 3 ಲಕ್ಷ ರೂಪಾಯಿ.
ಮಾರುತಿ ಸುಜುಕಿಯ ವ್ಯಾಗನ್ಆರ್ ಕಾರುಗಳು ಕೂಡ ಸಿಎನ್‌ಜಿ ಕಿಟ್‌ನೊಂದಿಗೆ ಬರುತ್ತವೆ. ಸಿಎನ್‌ಜಿ ವ್ಯಾಗನ್ಆರ್ ಬೆಲೆ 4.93 ಲಕ್ಷದಿಂದ ಪ್ರಾರಂಭವಾಗುತ್ತದೆ.
ಹುಂಡೈ ಸ್ಯಾಂಟ್ರೋ ಕಾರು ಕೂಡ ಕಡಿಮೆ ಬೆಲೆಗೆ ಅತ್ಯುತ್ತಮ ಮೈಲೇಜ್ ನೀಡುವ ಕಾರಿನಲ್ಲಿ ಒಂದಾಗಿದೆ. ಸಿಎನ್ ಜಿ ರೂಪಾಂತರದ ಬೆಲೆ 599,900 ರೂಪಾಯಿಯಿಂದ ಪ್ರಾರಂಭವಾಗುತ್ತದೆ.