alex Certify ದೆವ್ವ-ಭೂತಗಳ ತವರು ದೆಹಲಿಯ ಈ 5 ಸ್ಥಳಗಳು, ರಾತ್ರಿ ನಡೆಯುತ್ತೆ ನಿಗೂಢ ಘಟನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆವ್ವ-ಭೂತಗಳ ತವರು ದೆಹಲಿಯ ಈ 5 ಸ್ಥಳಗಳು, ರಾತ್ರಿ ನಡೆಯುತ್ತೆ ನಿಗೂಢ ಘಟನೆ…!

ದೆಹಲಿಯ ಇತಿಹಾಸ ಮತ್ತು ಭವ್ಯವಾದ ವಾಸ್ತುಶಿಲ್ಪ ಎಂಥವರನ್ನೂ ಆಕರ್ಷಿಸುತ್ತದೆ. ಆದರೆ ದೆವ್ವ-ಭೂತಗಳಿಂದಾಗಿ ಹೆಸರುವಾಸಿಯಾಗಿರುವ ಅನೇಕ ಸ್ಥಳಗಳು ಇಲ್ಲಿವೆ. ಈ ಸ್ಥಳಗಳ ಹೆಸರು ಕೇಳಿದ್ರೆ ಸಾಕು ಜನರು ಭಯಪಡುತ್ತಾರೆ. ಅಂತಹ ವಿಸ್ಮಯಕಾರಿ ಘಟನೆಗಳು ಸಹ ಇಲ್ಲಿ ನಡೆದಿವೆ. ದೆಹಲಿ ಪ್ರವಾಸ ಕೈಗೊಳ್ಳುವವರು ಈ ಸ್ಥಳಗಳನ್ನು ಕೂಡ ಒಮ್ಮೆ ನೋಡಬಹುದು.

ಫಿರೋಜ್ ಷಾ ಕೋಟ್ಲಾ ಕೋಟೆ

ಈ ಕೋಟೆಯನ್ನು 14ನೇ ಶತಮಾನದಲ್ಲಿ ಫಿರೋಜ್ ಷಾ ತುಘಲಕ್ ನಿರ್ಮಿಸಿದ್ದ. ಇದು ಸಂಪೂರ್ಣ ಅವಶೇಷವಾಗಿ ಈಗ ಉಳಿದುಕೊಂಡಿದೆ. ಸೂರ್ಯಾಸ್ತದ ನಂತರ ದೆವ್ವಗಳು ಇಲ್ಲಿ ಸಂಚರಿಸುತ್ತವೆ ಎಂಬ ನಂಬಿಕೆಯಿದೆ. ಕೆಲವರು ಪ್ರತಿ ಗುರುವಾರ  ಅಗರಬತ್ತಿ, ನೈವೇದ್ಯಗಳನ್ನು ಸಹ ಸಮರ್ಪಿಸುತ್ತಾರೆ.

ಖೂನಿ ದರ್ವಾಜಾ

ದೆಹಲಿಯಲ್ಲಿ ಖೂನಿ ದರ್ವಾಜಾ ಎಂಬ ಪ್ರಸಿದ್ಧ ಸ್ಥಳವಿದೆ. ಈ ಬಾಗಿಲನ್ನು 17ನೇ ಶತಮಾನದಲ್ಲಿ ಷಹಜಹಾನ್ ನಿರ್ಮಿಸಿದ್ದ.  ಮೊಘಲ್ ರಾಜವಂಶದ ಅನೇಕ ರಾಜಕುಮಾರರು ಈ ಬಾಗಿಲಿನ ಹಿಂದೆ ಕೊಲ್ಲಲ್ಪಟ್ಟರು ಮತ್ತು ಅವರ ಆತ್ಮಗಳು ಇನ್ನೂ ಇಲ್ಲಿ ಅಲೆದಾಡುತ್ತವೆ ಎಂದು ಹೇಳಲಾಗುತ್ತದೆ. ಇಲ್ಲಿ ರಾತ್ರಿ ವೇಳೆ ವಿಚಿತ್ರ ಶಬ್ದಗಳು ಕೇಳಿಬರುತ್ತವೆ.

ಅಗ್ರಸೇನ್ ಅವರ ಮೆಟ್ಟಿಲುಬಾವಿ

ಇದು 100ಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಬಾವಿ. ಇದನ್ನು 14 ನೇ ಶತಮಾನದಲ್ಲಿ ಮಹಾರಾಜ ಅಗ್ರಸೇನ್ ನಿರ್ಮಿಸಿದ. ಇಲ್ಲಿ ಅನೇಕ ನಿಗೂಢ ಘಟನೆಗಳು ನಡೆಯುತ್ತವೆ ಎಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ಇಲ್ಲಿ ವಿಚಿತ್ರವಾದ ಶಬ್ದಗಳು ಬರುತ್ತವೆ.

ಜಮಾಲಿ ಕಮಲಿಯ ಸಮಾಧಿ

ಜಮಾಲಿ ಕಮಲಿಯ ಸಮಾಧಿಯನ್ನು 16 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇದು ಮಿರಾನಾ ಜಹೀರ್-ಉದ್-ದಿನ್ ಮತ್ತು ಅವರ ಪತ್ನಿ ಕಮಲಿ ಅವರ ಸಮಾಧಿ. ಅವರಿಬ್ಬರ ಆತ್ಮಗಳು ಈಗಲೂ ಈ ಸಮಾಧಿಯಲ್ಲಿ ಅಲೆದಾಡುತ್ತಿವೆ ಎಂದು ನಂಬಲಾಗಿದೆ. ಇಲ್ಲಿ ರಾತ್ರಿ ಅಳುವ ಶಬ್ದ ಕೇಳಿಸುತ್ತದೆಯಂತೆ.

ಭೂಲಿ ಭಟಿಯಾರಿಯ ಅರಮನೆ

ತನ್ನ ಪ್ರೇಮಿಯಿಂದ ಬಲವಂತವಾಗಿ ಬೇರ್ಪಟ್ಟ ರಾಜಕುಮಾರಿಯ ಆತ್ಮವು ಭೂಲಿ ಭಟಿಯಾರಿಯ ಅರಮನೆಯಲ್ಲಿ ವಾಸವಾಗಿದೆಯಂತೆ. ಅರಮನೆಯಲ್ಲಿ ಸದಾ ಅಳುವಿನ ಸದ್ದು ಕೇಳಿಬರುತ್ತದೆ ಎಂದು ಹೇಳಲಾಗುತ್ತದೆ. ಸಂಜೆಯ ನಂತರ ಈ ಸ್ಥಳವು ಅಪಾಯಕಾರಿ ಎಂಬುದು ಸ್ಥಳೀಯರ ಅಭಿಪ್ರಾಯ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...