alex Certify ಸಾಧಕರು ಅನುಸರಿಸುತ್ತಾರೆ ಬೆಳಗಿನ ಈ 5 ದಿನಚರಿ; ಯಶಸ್ಸಿಗೆ ಸರಳ ಸೂತ್ರಗಳಿವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಧಕರು ಅನುಸರಿಸುತ್ತಾರೆ ಬೆಳಗಿನ ಈ 5 ದಿನಚರಿ; ಯಶಸ್ಸಿಗೆ ಸರಳ ಸೂತ್ರಗಳಿವು…!

 

ನಮ್ಮ ಪ್ರತಿದಿನವೂ ಪ್ರೊಡಕ್ಟಿವ್‌ ಆಗಿ ಯಶಸ್ವಿಯಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ನಮ್ಮ ದಿನಚರಿ ಸರಿಯಾಗಿದ್ದಲ್ಲಿ ಮಾತ್ರ ಅದು ಸಾಧ್ಯ. ಜೀವನದಲ್ಲಿ ಮುಂದೆಬರಬೇಕೆಂದರೆ ಈಗಾಗ್ಲೇ ಎತ್ತರವನ್ನು ಮುಟ್ಟಿದವರಿಂದ ಕಲಿಯಬೇಕು. ಬದುಕಿನಲ್ಲಿ ಯಶಸ್ವಿಯಾಗಿರುವವರು ಯಾವ ಬೆಳಗಿನ ದಿನಚರಿಗಳನ್ನು ಅನುಸರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು.

ಮುಂಜಾನೆ ಬೇಗ ಏಳುವುದು  

ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಬೇಗ ಏಳಬೇಕು ಅನ್ನೋ ಮಾತಿದೆ. ಈ ರೀತಿ ಮಾಡುವವರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಕಡಿಮೆ. ಇದು ಸಂಶೋಧನೆಯಲ್ಲೂ ದೃಢಪಟ್ಟಿದೆ. ಬೆಳಗ್ಗೆ ಬೇಗ ಏಳಲು ಪ್ರಯತ್ನಿಸಬೇಕು. ಸ್ವಯಂಪ್ರೇರಿತವಾಗಿ ಇದನ್ನು ಮಾಡಬೇಕು.

ಸಕಾರಾತ್ಮಕತೆ

ಬೆಳಗ್ಗೆ ನಕಾರಾತ್ಮಕ ಆಲೋಚನೆಗಳನ್ನು ಮಾಡಬಾರದು. ಹೊಸ ದಿನವನ್ನು ಸಕಾರಾತ್ಮಕ ರೀತಿಯಲ್ಲಿ ನೋಡಬೇಕು. ಹೊಸದನ್ನು ಮಾಡಲು ದೇವರು ಮತ್ತೊಂದು ಅವಕಾಶವನ್ನು ಕೊಟ್ಟಿದ್ದಾನೆ ಎಂದು ಭಾವಿಸಿ. ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವವರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶದ ಬಗ್ಗೆ ಚಿಂತಿಸುತ್ತಾರೆ.

ದಿನಚರಿಗೆ ಸಿದ್ಧರಾಗಿರಿ

ಹೆಚ್ಚು ಉತ್ಪಾದಕರಾಗಿರುವ ಜನರು ಇಂದು ಏನು ಮಾಡಬೇಕೆಂದು ಮೊದಲೇ ನಿರ್ಧರಿಸಿರುತ್ತಾರೆ. ಇದಕ್ಕಾಗಿ ಹಿಂದಿನ ರಾತ್ರಿಯೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಸಮಯ ಉಳಿತಾಯವಾಗುತ್ತದೆ. ಅನಗತ್ಯವಾದ ಉದ್ವೇಗವಿರುವುದಿಲ್ಲ.

ವ್ಯಾಯಾಮ

ಜೀವನದಲ್ಲಿ ಸಾಕಷ್ಟು ಸಂಪತ್ತು ಮತ್ತು ಖ್ಯಾತಿಯನ್ನು ಗಳಿಸಿದವರಿಗೆ ಈಗ ಆರೋಗ್ಯವು ಮೊದಲ ಆದ್ಯತೆಯಾಗಿದೆ. ಫಿಟ್ ಆಗಿರಲು ಬೆಳಗಿನ ಜಾವದಲ್ಲಿ ವಾಕಿಂಗ್‌, ಜಾಗಿಂಗ್, ಸ್ಕಿಪ್ಪಿಂಗ್ ಮತ್ತು ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾರೆ.

ಆರೋಗ್ಯಕರ ಉಪಹಾರ

ಆರೋಗ್ಯವಾಗಿರಲು ಬೆಳಗ್ಗೆ ಎಣ್ಣೆಯುಕ್ತ, ಕರಿದ ಅಥವಾ ಸಿಹಿಯಾದ ಆಹಾರವನ್ನು ಸೇವಿಸುವುದಿಲ್ಲ. ಏಕೆಂದರೆ ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇವುಗಳ ಬದಲಿಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ದಿನವಿಡೀ ಕೆಲಸ ಮಾಡಲು ಶಕ್ತಿಯೂ ಸಿಗುತ್ತದೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...