ಪತಿ-ಪತ್ನಿ ಸಂಬಂಧ ಗಟ್ಟಿಯಾಗಿರಬೇಕೆಂದ್ರೆ ಶಾರೀರಿಕ ಸಂಬಂಧ ಮಹತ್ವ ಪಡೆಯುತ್ತದೆ. ಸುರಕ್ಷಿತ ಲೈಂಗಿಕ ಕ್ರಿಯೆಗೆ ಕಾಂಡೋಮ್ ಬಹಳ ಮುಖ್ಯ. ಆದ್ರೆ ಅದರ ಬಳಕೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕಾಂಡೋಮ್ ಬಳಕೆ ವೇಳೆ ಕೆಲ ತಪ್ಪುಗಳನ್ನು ಮಾಡಿ, ಜೀವನ ಪೂರ್ತಿ ಪಶ್ಚಾತಾಪಪಡ್ತಾರೆ. ಕಾಂಡೋಮ್ ಬಳಸುವ ಮೊದಲು ಕೆಲ ವಿಷ್ಯಗಳನ್ನು ತಿಳಿದಿರಿ.
ಅನೇಕರು ಕಾಂಡೋಮ್ ಪ್ಯಾಕೆಟನ್ನು ಬಾಯಿಯಲ್ಲಿ ಕಚ್ಚುತ್ತಾರೆ. ಬಾಯಿಯಲ್ಲಿ ಕಚ್ಚಿ ಕಾಂಡೋಮ್ ಪ್ಯಾಕೆಟ್ ತೆಗೆಯುವುದು ಒಳ್ಳೆಯದಲ್ಲ. ಇದ್ರಿಂದ ಕಾಂಡೋಮ್ ಹಾಳಾಗುವ ಅಥವಾ ಹರಿಯುವ ಸಾಧ್ಯತೆಯಿರುತ್ತದೆ.
ಕಾಂಡೋಮ್ ಬಳಸುವ ಮೊದಲು ಅದು ಹರಿದಿದೆಯಾ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ. ಒಂದು ವೇಳೆ ಕಾಂಡೋಮ್ ಹರಿದಿದ್ದರೆ ಅದನ್ನು ಬಳಸಬೇಡಿ. ಹಾಳಾಗಿರುವ ಕಾಂಡೋಮ್ ಎಂದೂ ಬಳಸಬೇಡಿ.
ಶಾರೀರಿಕ ಸಂಬಂಧ ಬೆಳೆಸುವ ಮೊದಲೇ ಕಾಂಡೋಮ್ ಧರಿಸಿ. ಶಾರೀರಿಕ ಸಂಬಂಧ ಅರ್ಧವಾದ್ಮೇಲೆ ಕಾಂಡೋಮ್ ಧರಿಸುವವರಿದ್ದಾರೆ. ಇದು ತಪ್ಪು. ಇದ್ರಿಂದ ಲೈಂಗಿಕ ರೋಗಗಳು ಬರಬಹುದು.
ಕಾಂಡೋಮ್ ಗೂ ಮುಕ್ತಾಯದ ದಿನಾಂಕವಿರುತ್ತದೆ. ಹಾಗಾಗಿ ಬಳಸುವ ಮೊದಲು ಮುಕ್ತಾಯದ ದಿನಾಂಕವನ್ನು ಪರೀಕ್ಷೆ ಮಾಡಿ. ಮುಕ್ತಾಯದ ದಿನಾಂಕದ ನಂತ್ರ ಕಾಂಡೋಮ್ ಬಳಸಬೇಡಿ.
ಒಂದೇ ಕಾಂಡೋಮನ್ನು ಪದೇ ಪದೇ ಬಳಸಬೇಡಿ. ಕೆಲವರು ಒಮ್ಮೆ ಬಳಸಿದ ಕಾಂಡೋಮ್ ಮತ್ತೆ ಬಳಸ್ತಾರೆ. ಇದು ಒಳ್ಳೆಯದಲ್ಲ.