alex Certify ದೇಹವನ್ನು ಫಿಟ್ ಆಗಿಡುವುದರ ಜೊತೆಗೆ ನಿಮ್ಮ ಯೌವನವನ್ನು ಇಮ್ಮಡಿಗೊಳಿಸುತ್ತವೆ ಈ 5 ಜ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹವನ್ನು ಫಿಟ್ ಆಗಿಡುವುದರ ಜೊತೆಗೆ ನಿಮ್ಮ ಯೌವನವನ್ನು ಇಮ್ಮಡಿಗೊಳಿಸುತ್ತವೆ ಈ 5 ಜ್ಯೂಸ್

ಫಿಟ್ ಆಗಲು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಹಲವಾರು ರೀತಿಯ ವ್ಯಾಯಾಮ, ಡಯಟ್ ಮಾಡ್ತಾರೆ. ಆಹಾರದ ಜೊತೆಗೆ ಕೆಲವು ಹಣ್ಣಿನ ಜ್ಯೂಸ್ ಗಳು ಕೂಡ ದೇಹವನ್ನು ಫಿಟ್ ಆಗಿಡುವುದರ ಜೊತೆಗೆ ನಿಮ್ಮ ಯೌವನವನ್ನು ಇಮ್ಮಡಿಗೊಳಿಸುತ್ತವೆ.

ತಾಜಾ ಹಣ್ಣಿನ ರಸವನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾಗುವ ಎಲ್ಲ ಪೋಷಕಾಂಶಗಳು ಸಿಗುತ್ತದೆ. ಇದರಿಂದ ಆರೋಗ್ಯ ಮತ್ತು ಸೌಂದರ್ಯ ಎರಡೂ ವೃದ್ಧಿಯಾಗುತ್ತದೆ.

ದಾಳಿಂಬೆ ರಸದಲ್ಲಿ ಪಾಲಿಫೆನಲ್ಸ್ ನಂತಹ ಅನೇಕ ಎಂಟಿಆಕ್ಸಿಡೆಂಟ್ ಗಳು ಇರುತ್ತವೆ. ಇದು ಉರಿಯೂತ, ಕ್ಯಾನ್ಸರ್ ಮತ್ತು ರಕ್ತದೊತ್ತಡದ ಸಮಸ್ಯೆಗಳನ್ನು ದೂರ ಮಾಡುತ್ತದೆ. 50 ವರ್ಷ ವಯಸ್ಸಿನ ನಂತರ ನಮ್ಮ ಜೀವಕೋಶಗಳು ಮೈಟೋಕಾಂಡ್ರಿಯಾದ ಮರುಬಳಕೆಗೆ ಹೋರಾಡಲು ಆರಂಭಿಸುತ್ತವೆ. ಇದರಿಂದಾಗಿ ಸ್ನಾಯುಗಳ ತೊಂದರೆಯಾಗಿ ಪಾರ್ಕಿನ್ಸನ್ ಖಾಯಿಲೆ ಉಂಟಾಗಬಹುದು. ಹಾಗಾಗಿ ಅಂತಹ ಸಮಯದಲ್ಲಿ ದಾಳಿಂಬೆ ಜ್ಯೂಸ್ ಅನ್ನು ಕುಡಿಯಬೇಕು. ಏಕೆಂದರೆ ದಾಳಿಂಬೆ ಹಣ್ಣಿನಲ್ಲಿರುವ ಯೂರೋಲಿಥಿನ್ ಅಂಶ ಮೈಟೋಕಾಂಡ್ರಿಯಾದ ಪ್ರಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ.

ಕ್ಯಾರೆಟ್ ನಲ್ಲಿರುವ ಎಂಟಿಆಕ್ಸಿಡೆಂಟ್ ಅಂಶ ನಮ್ಮ ಶರೀರಕ್ಕೆ ಬಹಳ ಒಳ್ಳೆಯದು. ಕ್ಯಾರೆಟ್ ನಲ್ಲಿರುವ ಲುಟಿನ್ ಕಣ್ಣು ಮತ್ತು ಮೆದುಳಿನ ಕಾರ್ಯಕ್ಕೆ ಬಹಳ ಉಪಯುಕ್ತವಾಗಿದೆ. ಕ್ಯಾರೆಟ್ ನಲ್ಲಿ ಬೀಟಾ ಕ್ಯಾರೊಟೀನ್ ಪೋಷಕಾಂಶ ಇದೆ. ಇದು ಶರೀರದಲ್ಲಿ ವಿಟಮಿನ್ ಎ ಯನ್ನು ಉತ್ಪತ್ತಿ ಮಾಡುತ್ತದೆ. ಬೀಟಾ ಕ್ಯಾರೋಟಿನ್ ಯುವಜನರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಬೀಟ್ ರೂಟ್ ಜ್ಯೂಸ್ ಅನ್ನು ಎಲ್ಲರೂ ಇಷ್ಟಪಡುವುದಿಲ್ಲ. ಆದರೂ ಕೆಲವರು ಇದನ್ನು ಆರೋಗ್ಯಕ್ಕೆ ಒಳ್ಳೆಯದೆಂಬ ಕಾರಣಕ್ಕೆ ಕುಡಿಯುತ್ತಾರೆ. ಬೀಟ್ ರೂಟ್ ಯೌವನವನ್ನು ಹೆಚ್ಚಿಸುತ್ತದೆ.  ಒಂದು ಅಧ್ಯಯನದ ಪ್ರಕಾರ ಬೀಟ್ ರೂಟ್ ನಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ.

ಕ್ಯಾರೊಟಿನೈಯ್ಡ್ ಗಳು ಹಣ್ಣುಗಳಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತವೆ. ಗುಲಾಬಿ, ದ್ರಾಕ್ಷಿಯಲ್ಲು ಕೂಡ ಲೈಕೊಪೀನ್ ಎಂಬ ಕ್ಯಾರೊಟಿನೈಯ್ಡ್ ಇರುತ್ತದೆ. ಇದು ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಅಮೇರಿಕನ್ ಜರ್ನಲ್ ಆಫ್ ನ್ಯೂಟ್ರಿಷಿಯನ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಲೈಕೊಪೀನ್ ಶರೀರದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ನಮ್ಮ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಗೋಧಿ ಹುಲ್ಲಿನ ಜ್ಯೂಸ್ ರುಚಿಯಲ್ಲದಿದ್ದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಎಲ್ಲ ಗಿಡಗಳಿಗೂ ಹಸಿರು ಬಣ್ಣವನ್ನು ನೀಡುವ ಕ್ಲೋರೋಫಿನ್ ಪ್ರಮಾಣ ಗೋಧಿ ಹುಲ್ಲಿನಲ್ಲಿ ಹೇರಳವಾಗಿರುತ್ತದೆ. ಇದರಲ್ಲಿ ಉರಿಯೂತ ವಿರೋಧಿ ಗುಣವೂ ಇದೆ. ಗೋಧಿ ಹುಲ್ಲಿನ ಜ್ಯೂಸ್ ಕುಡಿಯುವುದರಿಂದ ಅನೇಕ ವಯೋಸಹಜ ಖಾಯಿಲೆಗಳಿಂದ ದೂರವಿರಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...