alex Certify GOOD NEWS: ಶೀಘ್ರದಲ್ಲೇ ಇಳಿಕೆಯಾಗಲಿದೆ ಪಲ್ಸ್ ಆಕ್ಸಿಮೀಟರ್ ಸೇರಿ ಈ 5 ವೈದ್ಯಕೀಯ ಸಾಧನದ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಶೀಘ್ರದಲ್ಲೇ ಇಳಿಕೆಯಾಗಲಿದೆ ಪಲ್ಸ್ ಆಕ್ಸಿಮೀಟರ್ ಸೇರಿ ಈ 5 ವೈದ್ಯಕೀಯ ಸಾಧನದ ಬೆಲೆ

ಜನಸಾಮಾನ್ಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಪಲ್ಸ್ ಆಕ್ಸಿಮೀಟರ್, ರಕ್ತದೊತ್ತಡ ಮಾನಿಟರಿಂಗ್ ಯಂತ್ರ ಸೇರಿದಂತೆ 5 ವೈದ್ಯಕೀಯ ಸಾಧನಗಳ ಬೆಲೆ ಶೀಘ್ರದಲ್ಲಿಯೇ ಇಳಿಯುವ ಸಾಧ್ಯತೆಯಿದೆ. ಈ ಐದು ವೈದ್ಯಕೀಯ ಸಾಧನಗಳ ಟ್ರೇಡ್ ಮಾರ್ಜಿನ್ ಸೀಮಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಜುಲೈ 20 ರಿಂದ ಈ ಮಿತಿ ಅನ್ವಯವಾಗಲಿದೆ ಎಂದು ವರದಿಯಾಗಿದೆ. ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಶನಿವಾರ ಈ ಮಾಹಿತಿಯನ್ನು ನೀಡಿದೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪಲ್ಸ್ ಆಕ್ಸಿಮೀಟರ್, ರಕ್ತದೊತ್ತಡ ಮಾನಿಟರಿಂಗ್ ಯಂತ್ರ, ನೆಬ್ಯುಲೈಜರ್, ಡಿಜಿಟಲ್ ಥರ್ಮಾಮೀಟರ್, ಗ್ಲುಕೋಮೀಟರ್ ಟ್ರೇಡ್ ಮಾರ್ಜಿನ್ ಸರ್ಕಾರ ಸೀಮಿತಗೊಳಿಸಿದೆ.

ಕೋವಿಡ್ ಸಮಯದಲ್ಲಿ ವೈದ್ಯಕೀಯ ಉಪಕರಣಗಳನ್ನು ಕೈಗೆಟುಕುವ ಬೆಲೆಗೆ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ತಿಳಿಸಿತ್ತು. ಆ ಸಮಯದಲ್ಲಿ ಟ್ರೇಡ್ ಮಾರ್ಜಿನ್ ಶೇಕಡಾ 70ರಷ್ಟು ನಿಗದಿಪಡಿಸಲಾಗಿದೆ. ಈ ಮೊದಲು ಈ ಉಪಕರಣಗಳ ಮೇಲೆ ಶೇಕಡಾ 3ರಿಂದ ಶೇಕಡಾ 709ರವರೆಗೆ ಮಾರ್ಜಿನ್ ಸಿಗ್ತಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...