alex Certify ಶುಕ್ರವಾರದ ದಿನ ಭವಿಷ್ಯ: ಹೀಗಿದೆ ನೋಡಿ ನಿಮ್ಮ ಇಂದಿನ ರಾಶಿ ಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಕ್ರವಾರದ ದಿನ ಭವಿಷ್ಯ: ಹೀಗಿದೆ ನೋಡಿ ನಿಮ್ಮ ಇಂದಿನ ರಾಶಿ ಫಲ

ಮೇಷ : ಉದ್ಯೋಗದಲ್ಲಿ ಬಡ್ತಿ ಇಲ್ಲವೇ ಸಂಬಳದಲ್ಲಿ ಏರಿಕೆ ಕಂಡುಬರಲಿದೆ. ಪರಸ್ತ್ರೀಯರ ಸಂಘ ಬೇಡವೇ ಬೇಡ. ಯಾವುದೇ ಕೆಲಸ ಮಾಡುವ ಮುನ್ನ ಕುಟುಂಬಸ್ಥರ ಸಲಹೆ ಪಡೆದುಕೊಳ್ಳಿ. ಕೆಂಪು ಬಣ್ಣದ ಬಟ್ಟೆಯನ್ನು ದಾನ ಮಾಡಿ.

ವೃಷಭ : ಆಸ್ತಿ ವಿಚಾರದಲ್ಲಿ ದಾಯಾದಿಗಳ ನಡುವೆ ಕಲಹ ಏರ್ಪಡುವ ಸಾಧ್ಯತೆ ಇದೆ. ಇದರಿಂದ ನೀವು ಮಾನಸಿಕವಾಗಿ ಒತ್ತಡಕ್ಕೆ ಸಿಲುಕುವಿರಿ. ಯಾರೋ ಆಡಿದ ಮಾತಿಗೆ ತೀರಾ ತಲೆಕೆಡಿಸಿಕೊಳ್ಳುವುದನ್ನ ಬಿಡಿ. ದೂರ ಪ್ರಯಾಣ ಮಾಡಲಿದ್ದೀರಿ.

ಮಿಥುನ : ನಿಮ್ಮ ವಿಚಾರಗಳು ಸರಿಯಾಗಿ ಇದ್ದರೂ ಸಹ ಮಾತು ಒರಟಾಗಿರೋದ್ರಿಂದ ಅನೇಕರು ನಿಮ್ಮ ಮೇಲೆ ಅಸಮಾಧಾನಕ್ಕೊಳಗಾಗಲಿದ್ದಾರೆ. ಕಚೇರಿಯಲ್ಲಿ ಕೆಲಸಗಳು ನೆಮ್ಮದಿಯಿಂದ ಸಾಗಲಿದೆ. ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವಿದ್ಯಾರ್ಥಿಗಳ ಪಾಲಿಗೆ ಶುಭ ದಿನ.

ಕಟಕ : ಅತೀ ತಮಾಷೆಯ ವ್ಯಕ್ತಿತ್ವ ನಿಮ್ಮದು. ಆದರೆ ಇದೇ ವ್ಯಕ್ತಿತ್ವ ನಿಮಗೆ ಮುಳುವಾಗಲೂಬಹುದು ಎಂಬುದು ತಲೆಯಲ್ಲಿರಲಿ. ಗಂಭೀರ ವಿಚಾರಗಳಲ್ಲಿ ನಿಮ್ಮನ್ನ ಪರಿಗಣನೆಗೆ ತೆಗೆದುಕೊಳ್ಳದೇ ಹೋಗುವ ಸಾಧ್ಯತೆ ಇದೆ. ನೀವಂದುಕೊಂಡಿದ್ದನ್ನ ಸಾಧಿಸೋಕೆ ಇನ್ನೇನು ಕೆಲವೇ ದಿನ ಬಾಕಿ ಇದೆ.

ಸಿಂಹ: ಸಹೋದರಿಯರ ನಡುವೆ ಕಲಹ ಏರ್ಪಡುವ ಸಾಧ್ಯತೆ ಇದೆ. ಎಲ್ಲರನ್ನೂ ಮೆಚ್ಚಿಸಲು ಹೋಗಬೇಡಿ. ನಿಮ್ಮಿಷ್ಟದಂತೆ ಬದುಕೋದ್ರಲ್ಲಿ ಯಾವುದೇ ತಪ್ಪಿಲ್ಲ. ಮದುವೆಯಾಗಿದೆ ಎಂದ ಮಾತ್ರಕ್ಕೆ ತವರು ಮನೆಯ ಕಷ್ಟಕ್ಕೆ ಆಸರೆಯಾಗಬಾರದು ಎಂದೇನಿಲ್ಲ. ಹುಟ್ಟಿದ ಮನೆಯನ್ನು ಎಂದಿಗೂ ಮರೆಯಬೇಡಿ.

ಕನ್ಯಾ : ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ ಇದೆ. ಹೀಗಾಗಿ ಹೊರಗಿನ ಆಹಾರವನ್ನ ಸೇವಿಸಲು ಹೋಗಬೇಡಿ. ಕಪ್ಪು ವಸ್ತ್ರದಲ್ಲಿ ಎಳ್ಳನ್ನು ಕಟ್ಟಿಟ್ಟು ವಸ್ತ್ರ ಸಮೇತ ದಾನ ಕರ್ಮ ಕೈಗೊಳ್ಳಿ. ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ.

ತುಲಾ : ಬೇರೆಯವರ ಜೀವನದಲ್ಲಿ ಅತಿಯಾದ ಆಸಕ್ತಿ ಒಳ್ಳೆಯದಲ್ಲ. ಬೇಡದ ವಿಷಯಗಳಿಗೆ ತಲೆಕೆಡಿಸಿಕೊಳ್ಳೋದನ್ನ ಬಿಟ್ಟುಬಿಡಿ. ಪತಿಯ ಮನೆಯಲ್ಲಿ ಒಳ್ಳೆಯ ಸೊಸೆ ಎನಿಸಿಕೊಳ್ಳಲಿದ್ದೀರಿ. ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ವೃಶ್ಚಿಕ : ನೀವು ತೀರಾ ಮೃಧು ಸ್ವಭಾವದವರು. ಇದರಿಂದ ನೀವು ಬೇಗನೆ ಮಾನಸಿಕವಾಗಿ ಘಾಸಿಗೊಳಗಾಗುತ್ತೀರಿ. ಶನಿ ದೇವರನ್ನು ಧ್ಯಾನಿಸಿ.

ಧನು : ಆಡಂಬರದ ಜೀವದ ಶಾಶ್ವತವಲ್ಲ. ಯಾರನ್ನೋ ಮೆಚ್ಚಿಸಲು ನೀವು ಬದುಕೋದನ್ನ ಬಿಟ್ಟುಬಿಡಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತು ಗಮನದಲ್ಲಿ ಇರಲಿ. ಗರ್ವಭಂಗವಾಗಲಿದೆ. ಗಂಟಲಿನ ಸಮಸ್ಯೆ ಕಾಣಿಸಲಿದೆ.

ಮಕರ : ಸ್ತ್ರೀಯರೊಡನೆ ಅತಿಯಾದ ಸಲುಗೆ ಸಲ್ಲದು. ವೈದ್ಯಕೀಯ ವೃತ್ತಿಯವರಿಗೆ ಇದು ಶುಭ ದಿನವಾಗಿದೆ. ಹಿರಿಯರ ಮಾತು ಕೇಳಿ ಕಷ್ಟದ ಸವಾಲುಗಳನ್ನ ಎದುರಿಸಲು ನಿಮಗೆ ಧೈರ್ಯ ಸಿಗಲಿದೆ. ದೇವಿ ದೇಗುಲಕ್ಕೆ ತೆರಳಿ ಕೆಂಪು ಹೂಗಳನ್ನು ಅರ್ಪಿಸಿ.

ಕುಂಭ : ಸಂತಾನ ಸಮಸ್ಯೆ ನಿಮ್ಮನ್ನು ಮಾನಸಿಕವಾಗಿ ಘಾಸಿಗೊಳಿಸಲಿದೆ. ಆದರೆ ಭವಿಷ್ಯದಲ್ಲಿ ಶುಭ ಸುದ್ದಿ ಕೇಳುವ ಕಾಲ ಬಂದೇ ಬರಲಿದೆ. ತಾಳ್ಮೆ ಇರಲಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ.

ಮೀನ : ಉದ್ಯೋಗಕ್ಕಾಗಿ ಅರಸುತ್ತಿರುವವರಿಗೆ ಶುಭ ಸುದ್ದಿ ಕಾದಿದೆ. ದಂಪತಿ ನಡುವೆ ಘರ್ಷಣೆ ಉಂಟಾಗಲಿದೆ. ಹೀಗಾಗಿ ಮಾತನ್ನು ಕಡಿಮೆ ಮಾಡಿ. ಮನೆ ದೇವರ ದೇಗುಲಕ್ಕೆ ಭೇಟಿ ನೀಡಿ. ಧನವ್ಯಯ ಬೇಡ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...