ಲಾಕ್ ಡೌನ್ ನಂತ್ರ ಆನ್ಲೈನ್ ಡೇಟಿಂಗ್ ಪ್ರವೃತ್ತಿ ಹೆಚ್ಚಾಗಿದೆ. ಆನ್ಲೈನ್ ಡೇಟಿಂಗ್ ಪ್ರವೃತ್ತಿ ಹೆಚ್ಚಾಗ್ತಿದ್ದಂತೆ ಬಳಕೆದಾರರನ್ನು ಆಕರ್ಷಿಸಲು ಜನರು ಆಕರ್ಷಕ ಫೋಟೋ, ಪೊಫೈಲ್ ಹಾಕ್ತಿದ್ದಾರೆ. ಆಕರ್ಷಕ ಪ್ರೊಫೈಲ್ ಇದ್ದಲ್ಲಿ ಮಾತ್ರ ಸ್ನೇಹಿತರ ಸಂಖ್ಯೆ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಷ್ಟು ಪುರುಷರು ಪ್ರೊಫೈಲ್ ಗೆ ಹೆಚ್ಚು ಮಹತ್ವ ನೀಡುವುದಿಲ್ಲ. ಕೆಲವೊಂದು ತಪ್ಪುಗಳನ್ನ ಮಾಡ್ತಾರೆ. ಅದು ಅವ್ರಿಗೆ ನಷ್ಟವನ್ನುಂಟು ಮಾಡುತ್ತದೆ. ಮಹಿಳೆಯರ ಆಕರ್ಷಿಸಬೇಕಾದ್ರೆ ಪುರುಷರು ಕೆಲ ವಿಷ್ಯಗಳನ್ನು ತಿಳಿದಿರಬೇಕು.
ಮೊದಲನೆಯದಾಗಿ ಪೊಫೈಲ್ ಫೋಟೋ ಹೆಚ್ಚು ಆಕರ್ಷಕವಾಗಿರಬೇಕು. ನಿಮ್ಮ ಫೋಟೋ ಹಳೆಯದಾಗಿದ್ದು, ಸ್ಪಷ್ಟವಾಗಿಲ್ಲವೆಂದ್ರೆ ನಿಮಗೆ ಹೆಚ್ಚು ಮಹಿಳೆಯರ ಪ್ರತಿಕ್ರಿಯೆ ಸಿಗುವುದಿಲ್ಲ. ಅನೇಕ ಬಾರಿ ಆನ್ಲೈನ್ ಡೇಟಿಂಗ್ ವೇಳೆ ಇದೇ ಗಲಾಟೆ ಶುರುವಾಗುತ್ತದೆ. ಪ್ರೋಫೈಲ್ ನಲ್ಲಿರುವ ಫೋಟೋ ನಿಮ್ಮದಲ್ಲ ಎಂಬ ವಾದಗಳು ಕೇಳಿ ಬರುತ್ತವೆ.
ಆನ್‌ಲೈನ್ ಡೇಟಿಂಗ್ ವಿಷಯಕ್ಕೆ ಬಂದಾಗ ಮಹಿಳೆಯರು, ಪ್ರೊಫೈಲ್ ಫೋಟೋದೊಂದಿಗೆ ಅಪ್ಡೇಟ್ ಪರಿಶೀಲನೆ ನಡೆಸುತ್ತಾರೆ. ಪ್ರೊಫೈಲ್ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತದೆ. ಹಾಗಾಗಿ ಫೋಟೋ ಜೊತೆ ಜನರು ಪ್ರೊಫೈಲ್ ಪರಿಶೀಲನೆ ಮಾಡ್ತಾರೆ. ಅದನ್ನು ಪುರುಷರು ನವೀಕರಿಸುವ ಅವಶ್ಯಕತೆಯಿದೆ.
ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಅನೇಕ ಪುರುಷರು ಬಯೋವನ್ನು ಖಾಲಿ ಬಿಡ್ತಾರೆ. ಇದು ಕೂಡ ಮಹಿಳೆಯರನ್ನು ಆಕರ್ಷಿಸುವುದಿಲ್ಲ. ಮಹಿಳೆಯರು ಬಯೋ ಕೂಡ ನೋಡುವುದ್ರಿಂದ ಬಯೋ ಖಾಲಿ ಬಿಡಬೇಡಿ. ಇದ್ರಿಂದ ನಿಮ್ಮನ್ನು ಸಂಪರ್ಕಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹೆಚ್ಚು ಮಾಹಿತಿ ಹಂಚಿಕೊಳ್ಳಲು ಆಸಕ್ತಿ ಇಲ್ಲದೆ ಹೋದಲ್ಲಿ ಕೆಲವೊಂದು ವಿಷ್ಯವನ್ನು ಅವಶ್ಯಕವಾಗಿ ಬರೆಯಿರಿ. ಮದುವೆಗೆ ಹಾಗೂ ಮದುವೆ ಮುರಿಯಲು ಕುಟುಂಬದ ಕೊಡುಗೆ ಎಷ್ಟು ಎಂಬುದನ್ನೂ ಬರೆಯಿರಿ.
ಪ್ರೊಫೈಲ್ ನಲ್ಲಿರುವ ಕೆಲವು ವಿಷ್ಯಗಳು ಮಹಿಳೆಯರ ಮೂಡ್ ಸರಿ ಮಾಡುತ್ತವೆ. ಹಾಗಾಗಿ ಸೆಕ್ಸ್ ವಿಷ್ಯ ಬರೆಯುವಾಗ ಕಾಳಜಿ ವಹಿಸಿ. ಮುಜುಗರ ತರುವ ವಿಷ್ಯ ಹಂಚಿಕೊಳ್ಳಬೇಡಿ. ವ್ಯಕ್ತಿತ್ವವನ್ನು ಎತ್ತಿ ಹಿಡಿಯುವ ಸಂಗತಿಯಿರಲಿ.