ಬೇಸಿಗೆಯಲ್ಲಿ ಸುಡು ಬಿಸಿಲು ಮತ್ತು ದೇಹದಿಂದ ಹೊರಸೂಸುವ ಬೆವರು ನಮ್ಮನ್ನು ತುಂಬಾ ಕಾಡುತ್ತದೆ. ಇದರಿಂದಾಗಿಯೇ ಡಿಹೈಡ್ರೇಶನ್ ಮತ್ತು ಹೀಟ್ ಸ್ಟ್ರೋಕ್ ಅಪಾಯವೂ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದರಲ್ಲೂ ತೂಕ ಇಳಿಸಿಕೊಳ್ಳಲು ಬಯಸುವವರು ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಬೇಕು. ಕೆಲವು ನಿರ್ದಿಷ್ಟ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಬಹುದು.
ಕಲ್ಲಂಗಡಿ
ಕಲ್ಲಂಗಡಿಯಲ್ಲಿ ಬಹಳಷ್ಟು ನೀರಿನಂಶವಿದೆ. ಅಷ್ಟೇ ಅಲ್ಲ ಇದರಲ್ಲಿ ಕ್ಯಾಲೋರಿ ಕೂಡ ಕಡಿಮೆ. ವಿಟಮಿನ್‌ಗಳು ಮತ್ತು ಎಂಟಿ-ಒಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಬೇಸಿಗೆಯಲ್ಲಿ ತಪ್ಪದೇ ಇದನ್ನು ಸೇವಿಸಬೇಕು. ಕಲ್ಲಂಗಡಿಯನ್ನು ನಿಯಮಿತವಾಗಿ ಸೇವಿಸಿದರೆ ತೂಕ ಕಳೆದುಕೊಳ್ಳುವುದು ಸುಲಭವಾಗುತ್ತದೆ.
ಸೌತೆಕಾಯಿ
ಸೌತೆಕಾಯಿ ಕೂಡ ನೀರಿನಿಂದ ಮಾಡಲ್ಪಟ್ಟಿದೆ ಮತ್ತು ಕಡಿಮೆ ಕ್ಯಾಲೋರಿಯುಳ್ಳ ಆಹಾರವಾಗಿದೆ. ಹೀಗಾಗಿಯೇ ಇದು ಹೈಡ್ರೇಟೆಡ್ ಆಗಿರಲು ಮತ್ತು ತೂಕವನ್ನು ಕಳೆದುಕೊಳ್ಳಲು ಸೂಕ್ತ. ಇದರಲ್ಲಿ ನಾರಿನಂಶವೂ ಇರುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯಬಹುದು. ಸೌತೆಕಾಯಿಯನ್ನು ಸಲಾಡ್‌ನಂತೆ ನೇರವಾಗಿ ತಿನ್ನಬಹುದು.
ಟೊಮೆಟೊ
ಟೊಮೆಟೊ ಇಲ್ಲದೆ ಅನೇಕ ತಿನಿಸುಗಳ ರುಚಿ ಅಪೂರ್ಣವೆನಿಸುತ್ತದೆ. ಟೊಮೆಟೋವನ್ನು ಸಲಾಡ್ ರೂಪದಲ್ಲಿ ಕೂಡ ಸೇವಿಸಬಹುದು. ಇದು ಸಹ ದೇಹವನ್ನು ಹೈಡ್ರೀಕರಿಸುತ್ತದೆ. ಇದರಲ್ಲಿ ಲೈಕೋಪೀನ್‌ನಂತಹ ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಕಿತ್ತಳೆ
ಕಿತ್ತಳೆ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳಲ್ಲೊಂದು. ಇದು ವಿಟಮಿನ್ ಸಿಯ ಸಮೃದ್ಧ ಮೂಲವಾಗಿದೆ. ಕಿತ್ತಳೆಯಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಸಹ ಇದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ನಿಯಂತ್ರಿಸಬಲ್ಲದು. ಕಿತ್ತಳೆ ತಿನ್ನುವುದರಿಂದ ದೀರ್ಘಕಾಲ ಹಸಿವಾಗುವುದಿಲ್ಲ. ಇದು ಕ್ರಮೇಣ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಕಿತ್ತಳೆ ತುಂಬಾ ರಸಭರಿತವಾದ ಹಣ್ಣು, ಹಾಗಾಗಿ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ.