ನಮ್ಮ ಬೆಳಗಿನ ದಿನಚರಿ ಆರೋಗ್ಯಕರವಾಗಿರಬೇಕು. ಇಲ್ಲದಿದ್ದರೆ ಅದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಆಹಾರ ಕ್ರಮ ಹೇಗಿದೆ? ನಿಮ್ಮ ಜೀವನ ಶೈಲಿ ಯಾವ ರೀತಿಯಿದೆ ಅನ್ನೋದು ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.
ಆದ್ದರಿಂದ ದಿನವನ್ನು ಸರಿಯಾದ ರೀತಿಯಲ್ಲಿ ಪ್ರಾರಂಭಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ಅಪಾಯಕಾರಿ, ಅವು ಯಾವುವು ಅನ್ನೋದನ್ನು ನೋಡೋಣ.
ಕೋಪ: ಬೆಳಗ್ಗೆ ಎದ್ದ ನಂತರ ನಿಮ್ಮ ಮನಸ್ಥಿತಿಯನ್ನು ಧನಾತ್ಮಕವಾಗಿ ಇಟ್ಟುಕೊಳ್ಳಿ. ಬೆಳಗ್ಗೆ ಬೇಗನೆ ಏಳುವುದು, ಕಚೇರಿಗೆ ಹೋಗುವ ಆಲೋಚನೆ ಕೋಪಗೊಳ್ಳುವಂತೆ ಮಾಡುತ್ತದೆ. ನೀವು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳದೇ ಇದ್ದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಖಾಲಿ ಹೊಟ್ಟೆಯಲ್ಲಿದ್ದಾಗ ಕೋಪ ಮಾಡಿಕೊಳ್ಳುವುದರಿಂದ ಹೃದಯದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
ಟೀ-ಕಾಫಿ ಕುಡಿಯಬೇಡಿ: ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಜನರು ಬೆಳಗ್ಗೆ ಎದ್ದ ನಂತರ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಚಹಾ ಅಥವಾ ಕಾಫಿಯಿಲ್ಲದೆ ಅನೇಕರಿಗೆ ದಿನವೇ ಪ್ರಾರಂಭವಾಗುವುದಿಲ್ಲ, ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಚೂಯಿಂಗ್ ಗಮ್ ಅಗಿಯಬೇಡಿ: ಕೆಲವರಿಗ ಆಗಾಗ ಚೂಯಿಂಗ್ ಗಮ್ ಅಗಿಯುವ ಚಟವಿದ್ದು, ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಲು ಆರಂಭಿಸುತ್ತಾರೆ. ಇದು ಎರಡು ಅನಾನುಕೂಲಗಳನ್ನು ಹೊಂದಿದೆ, ಮೊದಲನೆಯದು ಚೂಯಿಂಗ್ ಜಗಿಯುವುದರಿಂದ ಒಸಡುಗಳು ಸಿಹಿಯಾಗಿ ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಎರಡನೆಯದಾಗಿ ಚೂಯಿಂಗ್ ಗಮ್ ಅಗಿಯುವುದರಿಂದ ಜೀರ್ಣಕಾರಿ ಆಮ್ಲಗಳು ಹೊಟ್ಟೆಯಲ್ಲಿ ಬಿಡುಗಡೆಯಾಗುತ್ತವೆ ಮತ್ತು ಆಸಿಡಿಟಿ ಉಂಟಾಗುತ್ತದೆ.
ಮದ್ಯಪಾನ ಮಾಡಬೇಡಿ: ಬೆಳಿಗ್ಗೆ ಅಥವಾ ರಾತ್ರಿ ಯಾವುದೇ ಸಮಯದಲ್ಲಾದರೂ ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವಿಸಿದರೆ ಅದು ನಿಮ್ಮ ರಕ್ತಪ್ರವಾಹಕ್ಕೆ ಪ್ರವೇಶಿಸಬಹುದು ಮತ್ತು ನಂತರ ದೇಹದಲ್ಲಿ ವೇಗವಾಗಿ ಹರಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಾಡಿ ಬಡಿತವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದಲ್ಲದೆ ಶ್ವಾಸಕೋಶಗಳು, ಯಕೃತ್ತು, ಮೆದುಳು ಮತ್ತು ಮೂತ್ರಪಿಂಡಗಳು ಹಾನಿಗೊಳಗಾಗುವ ಅಪಾಯವಿರುತ್ತದೆ.