
ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕಡಿಮೆ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದರೂ ಸಹ ಕೆಲವೊಂದು ಜಿಲ್ಲೆಗಳಲ್ಲಿ ಮಾತ್ರ ಇನ್ನೂ ಈ ಡೆಡ್ಲಿ ವೈರಸ್ ತಹಬದಿಗೆ ಬಂದಿಲ್ಲ. ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಈ ಸೋಂಕು ದೇಶದಲ್ಲಿ ಎಲ್ಲಾ ಕಡೆಗಳಲ್ಲಿ ಕಡಿಮೆಯಾಗಿಲ್ಲ.
ಕೋವಿಡ್ 19 ಪಾಸಿಟಿವಿಟಿ ರೇಟ್ ನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ 15 ಜಿಲ್ಲೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ. ಕೋವಿಡ್ ಪ್ರಕರಣಗಳನ್ನು ಹೆಚ್ಚಾಗಿ ಹೊಂದಿರುವ ಈ 15 ಜಿಲ್ಲೆಗಳು ಮಿಜೋರಾಂ, ಆಂಧ್ರ ಪ್ರದೇಶ ಹಾಗೂ ಕೇರಳಕ್ಕೆ ಸೇರಿದೆ. ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ನಿರ್ದೇಶಕ ಲವ್ ಅಗರವ್ವಾಲ್ ಈ 15 ಜಿಲ್ಲೆಗಳ ಪಟ್ಟಿಯಲ್ಲಿ ರಿಲೀಸ್ ಮಾಡಿದ್ದಾರೆ.
15 ಜಿಲ್ಲೆಗಳ ಪಟ್ಟಿ ಈ ಕೆಳಗಿನಂತಿದೆ :
ಐಜ್ವಾಲ್ (ಮಿಜೋರಾಂ)
ಚಂಫೈ (ಮಿಜೋರಾಂ)
ಹ್ನಾಥಿಯಲ್ (ಮಿಜೋರಾಂ)
ಲಾಂಗ್ಟ್ಲೈ (ಮಿಜೋರಾಂ)
ಲುಂಗ್ಲೀ (ಮಿಜೋರಾಂ)
ಮಮಿತ್ (ಮಿಜೋರಾಂ)
ಸಿಯಾಹಾ (ಮಿಜೋರಾಂ)
ಸೈಚುವಲ್ (ಮಿಜೋರಾಂ)
ಸೆರ್ಚಿಪ್ (ಮಿಜೋರಾಂ)
ಕೊಟ್ಟಾಯಂ (ಕೇರಳ)
ಕೋಝಿಕ್ಕೋಡ್ (ಕೇರಳ)
ತಿರುವನಂತಪುರಂ (ಕೇರಳ)
ವಯನಾಡ್ (ಕೇರಳ)
ಸಿಯಾಂಗ್ (ಅರುಣಾಚಲ ಪ್ರದೇಶ)
ಮೇಲ್ ಸುಬಾನ್ಸಿರಿ (ಅರುಣಾಚಲ ಪ್ರದೇಶ)