ಜನಪ್ರತಿನಿಧಿಗಳು ಹೇಳಿಕೆಗಳನ್ನು ನೀಡುವ ಭರದಲ್ಲಿ ಕೆಲವೊಮ್ಮೆ ಯಡವಟ್ಟಿನ ಮಾತುಗಳನ್ನಾಡುವುದುಂಟು. ಇದೇ ಮಾತಿಗೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಎಸ್ಬಿಎಸ್ಪಿಯ ಅಧ್ಯಕ್ಷ ಓಂ ಪ್ರಕಾಶ್ ರಾಜ್ಭರ್ 2022ರ ವಿಧಾನಸಭಾ ಚುನಾವಣೆಯ ಬಳಿಕ ಉತ್ತರ ಪ್ರದೇಶದಲ್ಲಿ ಭಗಿದರಿ ಸಂಕಲ್ಪ್ ಸಮಾಜ್ ಪಕ್ಷವು ಮೈತ್ರಿ ಸರ್ಕಾರವನ್ನು ಸ್ಥಾಪಿಸಿದಲ್ಲಿ ರಾಜ್ಯದಲ್ಲಿ ಐವರು ಸಿಎಂಗಳು ಹಾಗೂ 20 ಡಿಸಿಎಂಗಳು ಇರಲಿದ್ದಾರೆ ಎಂದು ಹೇಳಿದ್ದಾರೆ.
ಖಂಗಾರ್ ಸಮುದಾಯ ನಡೆಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಓಂ ಪ್ರಕಾಶ್, ಮೈತ್ರಿ ಸರ್ಕಾರವು ರಚನೆಯಾದಲ್ಲಿ ಪ್ರತಿ ವರ್ಷ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ. ಪ್ರತಿಯೊಬ್ಬ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತ ಜಾತಿಗೆ ಸೇರಿದವರಾಗಿರುತ್ತಾರೆ. ಅದೇ ರೀತಿ ದುರ್ಬಲ ವರ್ಗಕ್ಕೆ ಸೇರಿದ 20 ಮಂದಿ ಜನಪ್ರತಿನಿಧಿ ಡಿಸಿಎಂ ಆಗಲಿದ್ದಾರೆ ಎಂದು ಹೇಳಿದ್ರು.
ತಮ್ಮ ಹೇಳಿಕೆಯನ್ನು ಇನ್ನಷ್ಟು ವಿವರಿಸಿದ ಓಂ ಪ್ರಕಾಶ್, ಸಂಪೂರ್ಣ ಬಹುಮತದ ಸರ್ಕಾರ ರಚನೆಯಾದ ಬಳಿಕವೂ ಉತ್ತರ ಪ್ರದೇಶದಲ್ಲಿ ಇಬ್ಬರು, ಆಂಧ್ರ ಪ್ರದೇಶದಲ್ಲಿ ಐವರು ಹಾಗೂ ಬಿಹಾರದಲ್ಲಿ ಇಬ್ಬರು ಡಿಸಿಎಂಗಳು ನೇಮಕವಾಗಬಹುದು ಎಂದಾದಲ್ಲಿ ಎಲ್ಲಾ ಜಾತಿಯನ್ನು ಪ್ರತಿನಿಧಿಸಲು ಒಬ್ಬೊಬ್ಬ ಜನಪ್ರತಿನಿಧಿ ಡಿಸಿಎಂ ಆಗೋದ್ರಲ್ಲಿ ತಪ್ಪೇನಿದೆ ಎಂದು ಹೇಳಿದ್ರು.