ಹಾಸನ : ಸಾಲಭಾದೆಯಿಂದ ಮನನೊಂದು ಬಾವಿಗೆ ಹಾರಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಾಲಭಾದೆಯಿಂದ ಮನನೊಂದು ಬಾವಿಗೆ ಹಾರಿ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಹೋಬಳಿಯಲ್ಲಿ ನಡೆದಿದೆ.
ಕಟ್ಟಿನಗದ್ದೆ ಗ್ರಾಮದ ನಟೇಶ್ (55) ಚಿನ್ನಮ್ಮ (45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಹಾಗೂ ಕೈ ಸಾಲ ಮಾಡಿಕೊಂಡಿದ್ದ ನಟೇಶ್ ದಂಪತಿ ಸಾಲ ತೀರಿಸಲಾಗದೇ ತಮ್ಮ ಜಮೀನಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.