![](https://kannadadunia.com/wp-content/uploads/2020/12/31-08-19-HSN-HD-REVANNA.jpg)
ಹಾಸನ : ಜೆಡಿಎಸ್ ಕಾರ್ಯಕರ್ತ ಕೃಷ್ಣೇಗೌಡ ಕೊಲೆಯ ದಿನ ನನ್ನನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿತ್ತು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಹತ್ಯೆ ಮಾಡುವ ಸಂಚು ಮಾಡಲಾಗಿತ್ತು. ಆದರೆ ನಾನು ಸಿಗದಿದ್ದರಿಂದ ಕೃಷ್ಣೇಗೌಡ ಅವರನ್ನು ಕೊಲ್ಲಲಾಯಿತು. ಇದಕ್ಕೆಲ್ಲ ಯಾರು ಬೆಂಬಲ ಕೊಡುತ್ತಿದ್ದಾರೆ ಎಂಬುದು ಗೊತ್ತು ಎಂದು ಹೇಳಿದ್ದಾರೆ.
ಕೃಷ್ಣೇಗೌಡ ಹತ್ಯಯೆ ಪ್ರಕರಣದ ಸಂಬಂಧ ಆರೋಪಿಗಳನ್ನು ಸರ್ಕಾರ ಈವರೆಗೂ ಬಂಧಿಲ್ಲ. ನಮ್ಮ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಮಯ ಬಂದಾಗ ಎಲ್ಲವನ್ನೂ ತಿಳಿಸುತ್ತೇನೆ ಎಂದು ಹೇಳಿದ್ದಾರೆ.