alex Certify ಅಡುಗೆ ಮನೆಯಲ್ಲಿಅನಾರೋಗ್ಯಕ್ಕೆ ಕಾರಣವಾಗುವ ಇಂಥಾ ವಸ್ತುಗಳು ಬೇಡವೇ ಬೇಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯಲ್ಲಿಅನಾರೋಗ್ಯಕ್ಕೆ ಕಾರಣವಾಗುವ ಇಂಥಾ ವಸ್ತುಗಳು ಬೇಡವೇ ಬೇಡ

How to keep your food safe no matter where you are

ನಮ್ಮ ಆರೋಗ್ಯ ಹಾಳು ಮಾಡುವಂತಹ ಕೆಲ ವಸ್ತುಗಳು ಅಡುಗೆ ಮನೆಯಲ್ಲಿರುತ್ತವೆ. ಇಂಥ ವಸ್ತುಗಳ ಮೇಲೆ ಗಮನ ಹರಿಸಿ ಅವುಗಳನ್ನು ಬಿಸಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

* ಅಡುಗೆ ಮನೆಯಲ್ಲಿ ತುಕ್ಕು ಹಿಡಿದ ಕತ್ತಿ ಮತ್ತು ಪಾತ್ರೆಗಳಿದ್ದರೆ ಅದನ್ನು ಬಿಸಾಡಿ. ಇಂಥ ವಸ್ತುಗಳನ್ನು ಅಡುಗೆಗೆ ಬಳಸಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

* ಹಳೆಯ ನಾನ್‌ ಸ್ಟಿಕ್‌ ಪ್ಯಾನ್‌ ಬಳಸಬೇಡಿ. ಪಾತ್ರೆಯ ಕೋಟಿಂಗ್‌ ಗೆ ಬಳಸುವ ವಸ್ತು ಹಳೆಯದಾದ ನಂತರ ಆರೋಗ್ಯಕ್ಕೆ ಒಳ್ಳೆಯದಲ್ಲ.

* ಅಜಿನೊಮೊಟೊ ಹಾಕಿದ ಅಡುಗೆ ತುಂಬಾ ರುಚಿಯಾಗಿರುತ್ತದೆ. ಇದರಲ್ಲಿ ಕಾಯಿಲೆ ತರುವ ಅಂಶ ಇರುವುದರಿಂದ ಇದನ್ನು ಹೆಚ್ಚಾಗಿ ಬಳಸಬೇಡಿ.

* ತುಪ್ಪ ಹಳೆಯದಾಗಿದ್ದರೆ ಬಳಸಲೇಬೇಡಿ. ಇದನ್ನು ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾಗಬಹುದು.

* ಪಾತ್ರೆ ತೊಳೆದ ಬಳಿಕ ಒರೆಸುವ ಬಟ್ಟೆ ಕೂಡ ಸ್ವಚ್ಛವಾಗಿರಬೇಕು. ತುಂಬಾ ಹಳೆಯ ಬಟ್ಟೆ ಬಳಸಬೇಡಿ. ಈ ಬಟ್ಟೆಯನ್ನು ಪ್ರತಿ ದಿನ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.

* ಸಾಂಬಾರು ಪದಾರ್ಥಗಳು ಹಳೆಯದಾಗಿದ್ದರೆ ಅದನ್ನು ಬಳಸಬೇಡಿ. ಬಳಸಿದರೆ ಅಡುಗೆ ರುಚಿಯಾಗಿರುವುದಿಲ್ಲ. ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ.

* ಅಡುಗೆ ಮನೆಯಲ್ಲಿ ಹೆಚ್ಚು ಕೊಳೆಯಾಗುವ ವಸ್ತು ಎಂದರೆ ಕಾಲು ಒರೆಸುವ ಮ್ಯಾಟ್‌. ಮ್ಯಾಟ್‌ ಹೆಚ್ಚು ಕೊಳೆಯಾಗಿದ್ದರೆ, ತೀರಾ ಹಳೆಯದಾಗಿದ್ದರೆ ಬಿಸಾಡಿ ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಇರುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...