ಬಾಯಿ ಚಪ್ಪರಿಸಿಕೊಂಡು ಸಿಹಿ ತಿನ್ನುವವರಿದ್ದಾರೆ. ಕೆಲವರಿಗೆ ಸಕ್ಕರೆ ಇಷ್ಟವಾಗುತ್ತದೆ. ಆದ್ರೆ ಸಕ್ಕರೆ ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕೆ ಬೆಲ್ಲದ ಮೊರೆ ಹೋಗ್ತಾರೆ. ಊಟಕ್ಕೆ ಬೆಲ್ಲ ಬಳಸುವವರಿದ್ದಾರೆ. ಬೆಲ್ಲದಲ್ಲಿರುವ ಪೋಷಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ರೆ ತಜ್ಞರ ಪ್ರಕಾರ, ಅತಿಯಾದ್ರೆ ಎಲ್ಲವೂ ಹಾನಿಕರ. ಹಾಗಾಗಿ ಬೆಲ್ಲವನ್ನು ಸಹ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ತಿನ್ನಬೇಕು.
ಬೆಲ್ಲದಲ್ಲಿ ಸಾಕಷ್ಟು ಪ್ರಮಾಣದ ಉತ್ಕರ್ಷಣ ನಿರೋಧಕಗಳು, ಸತು, ವಿಟಮಿನ್ ಬಿ 12, ಬಿ 6, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ರಂಜಕ, ಸೆಲೆನಿಯಮ್, ಪ್ರೋಟೀನ್ ಇದೆ. ಆದರೆ ಯಾರು ದಿನನಿತ್ಯ ಎರಡು ಮೂರು ಬಾರಿ ಬೆಲ್ಲವನ್ನು ತಿನ್ನುತ್ತಾರೋ ಅಂತವರಿಗೆ ಇದು ಮಾರಕವಾಗಬಹುದು.
ಒಂದು ದಿನದಲ್ಲಿ 50 ರಿಂದ 60 ಗ್ರಾಂ ಬೆಲ್ಲವನ್ನು ತಿನ್ನಬಹುದು. ರಕ್ತಹೀನತೆಯ ಸಮಸ್ಯೆ ಇದ್ದರೆ ಆಹಾರ ಸೇವಿಸಿದ ನಂತರ ಸಣ್ಣ ಬೆಲ್ಲದ ಉಂಡೆಯನ್ನು ತಿನ್ನಿ. ಇದು ರಕ್ತಹೀನತೆಯ ಸಮಸ್ಯೆ ದೂರ ಮಾಡುತ್ತದೆ. ಹಿಮೋಗ್ಲೋಬಿನ್ ಮಟ್ಟವನ್ನೂ ಬೆಲ್ಲ ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ಪ್ರತಿದಿನ ಬೆಲ್ಲ ತಿನ್ನುವುದು ಒಳ್ಳೆಯದು.
ರಾತ್ರಿ ಊಟದ ನಂತರ 9 ರಿಂದ 10 ಗ್ರಾಂ ಗಿಂತ ಹೆಚ್ಚು ಬೆಲ್ಲವನ್ನು ತಿನ್ನಬೇಡಿ. ಬೆಲ್ಲದಲ್ಲಿ ಕೊಬ್ಬಿನಂಶವಿಲ್ಲ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನೊಂದಿಗೆ ಬೆಲ್ಲವನ್ನು ಸೇವಿಸಿ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಬೆಲ್ಲವನ್ನು ನೈಸರ್ಗಿಕ ಕ್ಲೆನ್ಸರ್ ಎಂದು ಪರಿಗಣಿಸಲಾಗಿದೆ. ಇದು ಯಕೃತ್ತಿನಲ್ಲಿರುವ ಹಾನಿಕಾರಕ ಅಂಶಗಳನ್ನು ದೇಹದಿಂದ ತೆಗೆದು ಹಾಕಲು ಸಹಾಯ ಮಾಡುತ್ತದೆ. ಬೆಲ್ಲ ತೂಕವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಪೊಟ್ಯಾಸಿಯಮ್
ಸಮೃದ್ಧವಾಗಿದೆ. ಎಲೆಕ್ಟ್ರೋಲೈಟ್ ಸಮತೋಲನವನ್ನು ನಿರ್ವಹಿಸುತ್ತದೆ.