ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಂಬೈನಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಮತ್ತು ನಟ ಅಭಿಷೇಕ್ ಬಚ್ಚನ್ ಅವರನ್ನು ಭೇಟಿ ಮಾಡಿದ್ದರು.
ಭಾರತದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಿಷನ್ (ಸಡಕ್ ಸುರಕ್ಷಾ ಅಭಿಯಾನ) ಗೆ ಬೆಂಬಲವನ್ನು ಪಡೆಯಲು ನಟನನ್ನು ಭೇಟಿಯಾಗಿರುವುದಾಗಿ ಗಡ್ಕರಿ ಹೇಳಿಕೊಂಡಿದ್ದರು.
ಪ್ರತಿ ವರ್ಷ ದೇಶದಲ್ಲಿ ಸುಮಾರು 80,000 ಜನರು ರಸ್ತೆ ಅಪಘಾತಗಳಿಂದ ಸಾಯುತ್ತಾರೆ, ಇದು ಪ್ರಪಂಚದಲ್ಲಿ ಶೇ.13ರಷ್ಟು ಸಾವುಗಳು, ಹೀಗಾಗಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ನಟನ ಬೆಂಬಲ ಬಯಸಿತ್ತು.
ಅವರ ಭೇಟಿಯ ಫೋಟೋಗಳು ಶೀಘ್ರದಲ್ಲೇ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ನಾದ್ಯಂತ ವೈರಲ್ ಆಗಿದ್ದು, ಹದ್ದಿನ ಕಣ್ಣಿನ ನೆಟ್ಟಿಗರು ಗಡ್ಕರಿ- ಬಚ್ಚನ್ ಫೋಟೋದಲ್ಲಿ ಒಂದು ವಿಶೇಷ ಸಂಗತಿ ಗಮನಿಸಿದ್ದಾರೆ. ಬಚ್ಚನ್ ಕಚೇರಿ ಅಥವಾ ಮನೆಯಲ್ಲಿ ಕ್ಲಿಕ್ ಮಾಡಲ್ಪಟ್ಟಿರುವ ಫೋಟೋ ಅದಾಗಿದ್ದು, ಅವರಿಬ್ಬರ ಹಿನ್ನೆಲೆಯಲ್ಲಿ ದೊಡ್ಡ ಫೋಟೋ ಫ್ರೇಮ್ ಕಾಣಿಸುತ್ತದೆ. ಅದರ ಬಗ್ಗೆ ಎಲ್ಲರ ಗಮನ ಹೋಗಿದೆ.
ಅದು ಬಚ್ಚನ್ ಸಣ್ಣವರಾಗಿದ್ದಾಗ ಶಾಲೆಯಲ್ಲಿ ತೆಗೆದ ಫೋಟೋವಾಗಿದ್ದು, ಅದನ್ನು ದೊಡ್ಡದಾಗಿ ಮಾಡಿಸಿ ಹಾಕಿಕೊಂಡಿದ್ದಾರೆ. ಈ ಮೂಲಕ ತಮ್ಮ ಹಳೆಯ ನೆನಪುಗಳನ್ನು ಬಿಟ್ಟುಕೊಡದೇ ಇರುವ ಅವರ ಗುಣದ ಬಗ್ಗೆ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
https://twitter.com/foodpornament/status/1560252852333064193?ref_src=twsrc%5Etfw%7Ctwcamp%5Etweetembed%7Ctwterm%5E1560252852333064193%7Ctwgr%5Ea1b296175de8e0697e96ac8123bd341390be88d7%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fthere-is-something-bizarre-in-amitabh-bachchans-photo-with-nitin-gadkari-do-you-see-it-5781823.html