ಸಿದ್ದರಾಮಯ್ಯ ನೇತೃತ್ವದ ಹಾಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ, ಸದನದಲ್ಲಿ ಆಹೋರಾತ್ರಿ ಧರಣಿ ನಡೆಸಿದೆ. ಅಲ್ಲದೆ ರಾಜ್ಯದ ಮೂಲೆ ಮೂಲೆಗಳಲ್ಲೂ ಪ್ರತಿಭಟನೆ ನಡೆಸಿ ಸಾರ್ವಜನಿಕರ ಮುಂದೆ ಪ್ರಸ್ತಾಪಿಸಲು ಮುಂದಾಗಿದೆ.
ಬಿಜೆಪಿ ಪ್ರತಿಭಟನೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್, ಬಿಜೆಪಿಗರು ಪಾದಯಾತ್ರೆ, ಪ್ರತಿಭಟನೆ ಮಾಡುವುದಿದ್ದರೆ ತಮ್ಮದೇ ಸರ್ಕಾರದ ಅವಧಿಯಲ್ಲಿ ಆಗಿರುವ ಹಗರಣಗಳ ಕುರಿತು ಪ್ರತಿಭಟನೆ ಮಾಡಲಿ,
ಬಿಜೆಪಿ ಪ್ರತಿಭಟನೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್, ಬಿಜೆಪಿಗರು ಪಾದಯಾತ್ರೆ, ಪ್ರತಿಭಟನೆ ಮಾಡುವುದಿದ್ದರೆ ತಮ್ಮದೇ ಸರ್ಕಾರದ ಅವಧಿಯಲ್ಲಿ ಆಗಿರುವ ಹಗರಣಗಳ ಕುರಿತು ಪ್ರತಿಭಟನೆ ಮಾಡಲಿ,
ಬಿಜೆಪಿಗರ ಹಗರಣದ ರಾಶಿ ಹಿಮಾಲಯದಷ್ಟು ಎತ್ತರಕ್ಕೆ ಬಿದ್ದಿದೆ ! ಬಿಜೆಪಿಗರು ಕನಿಷ್ಠ ಹತ್ತು ವರ್ಷ ಪಾದಯಾತ್ರೆ ಮಾಡಬಹುದಾದಷ್ಟು ಹಗರಣಗಳಿವೆ.
ಭೋವಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಬಿಜೆಪಿಯವರೇ ಆದ ಗೂಳಿಹಟ್ಟಿ ಶೇಖರ್ ದನಿ ಎತ್ತಿದಾಗ BJP ನಾಯಕರು ಬಾಯಿ ಮುಚ್ಚಿ ಕೂತಿದ್ದರು.
ಭೋವಿ ನಿಗಮದ ಹಗರಣದ ಕುರಿತು ತನಿಖೆ ವೇಗ ಪಡೆಯುತ್ತಿದೆ, ಯಾವ ಬಿಜೆಪಿಗರು ಪರಪ್ಪನ ಅಗ್ರಹಾರ ಸೇರುತ್ತಾರೆ ಎನ್ನುವುದು ಕಾಲ ಉತ್ತರಿಸಲಿದೆ ಎಂದು ತಿರುಗೇಟು ನೀಡಿದೆ.